ವರದಿ ರಾಣಿ ಪ್ರಸನ್ನ
ಸಕಲೇಶಪುರದ ಬಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ ಗೋಪಿನಾಥ್ ಹಾಗು ಸದಸ್ಯರು ಇಲಾಖಾ ಕಚೇರಿಗಳಿಂದ ಬಗೆಹರಿಸದ ಹಲವು ಸಮಸ್ಯೆಗಳಿಗೆ ಇಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ .
ಹಲವು ವರ್ಷಗಳಿಂದ ಪ್ರತಿ ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಹಲವಾರು ಸಮಸ್ಯೆಯ ಕುರಿತು ಚರ್ಚೆಯೇನೋ ಮಾಡಲಾಗುತ್ತಿದೆ. ಆದರೆ ಪರಿಹಾರ ಮಾತ್ರ ನಮಗೆ ಯಾವುದೇ ಅಧಿಕಾರಿಗಳಿಂದಲು ದೊರೆಯುತ್ತಿಲ್ಲ , ಹಲವು ಬಾರಿ ಅರ್ಜಿ ಕೊಟ್ಟರು ಪ್ರಯೋಜನವಾಗುತ್ತಿಲ್ಲವೆಂದು ಬಾಗೆ ಪಂಚಾಯಿತಿ ಅಧ್ಯಕ್ಷರಾದ ರೇಖಾ ಗೋಪಿನಾಥ್ ರವರು ಕಚೇರಿಗಳಿಗೆ ಸದಸ್ಯರ ಜೊತೆ ಹೋಗಿ ಅರ್ಜಿ ನೀಡಿದ್ದಾರೆ.
ಅಧ್ಯಕ್ಷರು ಬಾಗೆ ಗ್ರಾಮವನ್ನು ಅಭಿವೃದ್ದಿಯತ್ತ ಸಾಗುವಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ. ಯಾವುದೇ ಸಮಸ್ಯೆಯನ್ನು ಜನಗಳು ತಂದರು ಕೂಡ ಪಿಡಿಓ ಅವರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ನೀಡಿಕೊಂಡು ಬಂದಿದ್ದಾರೆ. ಅದರಲ್ಲಿ ಈ ಸಮಸ್ಯೆಗಳು ಒಂದು .
ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳ ಬದಲಾಯಿಸಿ ಕೊಡುವಂತೆ , ಹಳೆ ಬಾಗೆ ಗ್ರಾಮದಲ್ಲಿ ಗ್ರಾಮಠಾಣಾ ಜಾಗ ಗುರುತಿಸಿಕೊಡುವ ಬಗ್ಗೆ, ಬಾಗೆ ಮತ್ತು ಹಳೆಬಾಗೆ ಗ್ರಾಮದಲ್ಲಿ ಗ್ರಾಮಠಾಣಾ ಜಾಗ ಗುರುತಿಸಿಕೊಡುವ ಬಗ್ಗೆ, ಬಾಗೆ ಗ್ರಾಮದ ಸ.ನಂ 22 ರಲ್ಲಿ ಆಶ್ರಯ ನಿವೇಶನಕ್ಕೆ ಮೀಸಲಿರುವ ಜಾಗವನ್ನು ಗುರುತಿಸಿಕೊಡುವ ಬಗ್ಗೆ ಅರ್ಜಿಗಳನ್ನು ಸಕಲೇಶಪುರದ ದಂಡಾಧಿಕಾರಿ ಮೇಘನ, ಉಪವಿಭಾಗಾಧಿಕಾರಿ ಶೃತಿ, ಭೂ ಕಂದಾಯ ಇಲಾಖೆಗೆ, ಕಾರ್ಯ ನಿರ್ವಹಣಾಧಿಕಾರಿ ಗಂಗಾಧರ್ ಇವರುಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳ ವಿವರಣೆಗಳು ಈ ಕೆಳಗಿನಂತಿವೆ
*ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳ ಬದಲಾಯಿಸಿ ಕೊಡುವಂತೆ ಮನವಿ*
ಬಾಗೆ ಗ್ರಾಮಪಂಚಾಯಿತಿಗೆ ಘನತ್ಯಾಜ್ಯ ಘಟಕಕ್ಕೆ ಸ.ನಂ 198 ರಲ್ಲಿ 1.00 ಎಕರೆ ಜಾಗಮಂಜೂರಾಗಿದೆ..
ಈ ಕುರಿತು ಸ್ಥಳ ತೋರಿಸಿಕೊಡುವಂತೆ ಈ ಹಿಂದಿನ ತಹಶೀಲ್ದಾರ್ ರವರನ್ನು
ಕೋರಲಾಗಿತ್ತು. ತಹಶೀಲ್ದಾರ್ ರವರ ಆದೇಶದಂತೆ ಮೋಜಿನಿದಾರರಿಂದ ಸರ್ವೆ ಮಾಡಲಾಗಿದ್ದು, ಸರ್ವೆಯವರ
ವರದಿ ಪ್ರಕಾರ ಸದರಿ ಜಾಗವು ಒತ್ತುವರಿಯಾಗಿದ್ದು, ಆ ಜಾಗಕ್ಕೆ ನಕಾಶೆ ರಸ್ತೆಯಿರುವುದಿಲ್ಲವೆಂದು ವರದಿ ನೀಡಿರುವುದನ್ನು ಉಲ್ಲೇಖಿಸಿ ದಿನಾಂಕ 23-08-2024ರಂದು ನಡೆದ ಸಾಮಾನ್ಯ ಸಭೆಯ ಠರಾವು ಸಂಖ್ಯೆ 07 ರಲ್ಲಿ ತಮ್ಮ ಮೂಲಕ ಈ ಹಿಂದೆ ಮಂಜೂರಾಗಿರುವ ಯಡೇಹಳ್ಳಿ ಗ್ರಾಮದ ಸ.ನಂ 198ರ ಬದಲಿಗೆ ಹಳೆ ಬಾಗೆ ಗ್ರಾಮದಲ್ಲಿ
ಇರುವ ಗ್ರಾಮ ಠಾಣಾ ಜಾಗವನ್ನು ಗುರುತಿಸಿ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಬದಲಿ ಸ್ಥಳ ಮಂಜೂರು ಮಾಡಿಕೊಡುವಂತೆ ಕೋರಲು ತೀರ್ಮಾನಿಸಿದ್ದು, ಈ ಕುರಿತು ಸಭಾ ನಿರ್ಣಯದ ಪ್ರತಿ ಮತ್ತು ಸರ್ವೆಯವರ ನಕಾಶ
ಪ್ರತಿಯನ್ನು ಮತ್ತು ಸಭಾ ನಡವಳಿ ಪ್ರತಿಯನ್ನು ಸದರಿ ಜಾಗಕ್ಕೆ ಬದಲೀ ಜಾಗವನ್ನು ಮಂಜೂರು ಮಾಡಿಸಿ ಕೊಡುವಂತೆ ಮನವಿ ಮಾಡಿದ್ದಾರೆ.
ಗ್ರಾಮಠಾಣಾ ಜಾಗವನ್ನು ಹೊಸದಾಗಿ ಸರ್ವೆ ಮಾಡಿಸಿ ಪುನರ್ ನಿಗಧಿಪಡಿಸಿಕೊಡುವ ಬಗ್ಗೆ ಹೀಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಕೊಡುವಂತೆ ತಿಳಿಸಿದ್ದಾರೆ.
*ಹಳೆ ಬಾಗೆ ಗ್ರಾಮದಲ್ಲಿ ಗ್ರಾಮಠಾಣಾ ಜಾಗ ಗುರುತಿಸಿಕೊಡುವ ಬಗ್ಗೆ*
ಸಕಲೇಶಪುರ ತಾಲ್ಲೂಕು ಬೆಳಗೋಡು ಹೋಬಳಿ ಬಾಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 204 ನಿವೇಶನ ರಹಿತ ಕುಟುಂಬಗಳಿಂದ ನಿವೇಶನ ಕೋರಿ ಅರ್ಜಿ ಬಂದಿದೆ. ಹಳೆಬಾಗೆ ಗ್ರಾಮದಲ್ಲಿ ಗ್ರಾಮ ಠಾಣಾ ಜಾಗವನ್ನು ಗುರುತಿಸಿ, ಒತ್ತುವರಿಯಾಗಿರುವ ಜಾಗವನ್ನು ಬಿಡಿಸಿ, ಸದರಿ ಜಾಗವನ್ನು ಹದ್ದುಬಸ್ತು ಮಾಡಿಸಿಕೊಟ್ಟು. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಸಂಬಂಧಿಸಿದ ಭೂದಾಖಲೆಗಳ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ದಿನಾಂಕ 23/08/2024ರಂದು ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
*ಬಾಗೆ ಮತ್ತು ಹಳೆಬಾಗೆ ಗ್ರಾಮದಲ್ಲಿ ಗ್ರಾಮಠಾಣಾ ಜಾಗ ಗುರುತಿಸಿಕೊಡುವ ಬಗ್ಗೆ*
ಸಕಲೇಶಪುರ ತಾಲ್ಲೂಕು ಬೆಳಗೋಡು ಹೋಬಳಿ ಬಾಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 204 ನಿವೇಶನ ರಹಿತ ಕುಟುಂಬಗಳಿಂದ ನಿವೇಶನ ಕೋರಿ ಅರ್ಜಿ ಬಂದಿರುತ್ತದೆ ಹಾಗೂ ಈ ಹಿಂದೆ ಬಾಗೆಗ್ರಾಮದ ಸ.ನಂ 15 ರಲ್ಲಿ ಆಶ್ರಯ ನಿವೇಶನಕ್ಕೆ ಮಂಜೂರಾದ ನಿವೇಶನಗಳಲ್ಲಿ 32 ನಿವೇಶನಗಳಿಗೆ ಹಕ್ಕುಪತ್ರ ನೀಡಲಾಗಿದೆ.ಸದರಿ ಜಾಗವು (ತಳಪಾಯ ಹಂತದಲ್ಲಿ ನಿರ್ಮಾಣವಾಗಿರುವ ನಿವೇಶನಗಳೂ ಸೇರಿದಂತೆ) R.T.O ಮತ್ತು ITI ಕಛೇರಿಗಳನ್ನು ನಿರ್ಮಾಣ ಮಾಡಿದ್ದು, 32 ನಿವೇಶನ ವಂಚಿತರಿಗೆ ತುರ್ತಾಗಿ ನಿವೇಶನ ಹಂಚಿಕೆ ಮಾಡಬೇಕಾಗಿರುವುದರಿಂದ, ಬಾಗೆಗ್ರಾಮದ ಸ.ನಂ.22 ರಲ್ಲಿ ಆಶ್ರಯ ನಿವೇಶನಕ್ಕೆ ಜಾಗ ಮಂಜೂರಾಗಿರುತ್ತದೆ ಆದ್ದರಿಂದ ಸ.ನಂ.22 ಮತ್ತು ಹಳೆಬಾಗೆ ಗ್ರಾಮದಲ್ಲಿರುವ ಗ್ರಾಮಠಾಣಾ ಜಾಗವನ್ನು ಗುರುತಿಸಿ, ಒತ್ತುವರಿಯಾಗಿರುವ ಜಾಗವನ್ನು ಬಿಡಿಸಿ, ಸದರಿ ಜಾಗವನ್ನು ಹದ್ದುಬಸ್ತು ಮಾಡಿಸಿಕೊಟ್ಟು, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಸಂಬಂಧಿಸಿದ ಭೂದಾಖಲೆಗಳ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ದಿನಾಂಕ 23/08/2024ರಂದು ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮೇಲ್ಕಂಡ ಗ್ರಾಮಗಳಲ್ಲಿ ಸರ್ವೆ ಮಾಡಿಸಿ ಗ್ರಾಮಠಾಣಾ ಜಾಗಗಳನ್ನು ಗುರುತಿಸಿ ಹದ್ದುಬಸ್ತು ಮಾಡಿಸಿಕೊಡಬೇಕು ಎಂದು ತಿಳಿಸಲಾಗಿದೆ.
*ಬಾಗೆ ಗ್ರಾಮದ ಸ.ನಂ 22 ರಲ್ಲಿ ಆಶ್ರಯ ನಿವೇಶನಕ್ಕೆ ಮೀಸಲಿರುವ ಜಾಗವನ್ನು ಗುರುತಿಸಿಕೊಡುವ ಬಗ್ಗೆ*
ಸಕಲೇಶಪುರ ತಾಲ್ಲೂಕು ಬಾಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 172 ನಿವೇಶನ ರಹಿತ ಕುಟುಂಬಗಳಿದ್ದು. ಈ ಹಿಂದೆ ಬಾಗೆಗ್ರಾಮದ ಸ.ನಂ 15 ರಲ್ಲಿ ಆಶ್ರಯ ನಿವೇಶನಕ್ಕೆ ಮಂಜೂರಾದ ನಿವೇಶನಗಳಲ್ಲಿ 32 ನಿವೇಶನಗಳಿಗೆ ಹಕ್ಕುಪತ್ರ ನೀಡಲಾಗಿದೆ.ಸದರಿ ಜಾಗವು (ತಳಪಾಯ ಹಂತದಲ್ಲಿ ನಿರ್ಮಾಣವಾಗಿರುವ ನಿವೇಶನಗಳೂ ಸೇರಿದಂತೆ) R.T.O ಮತ್ತು ITI ಕಛೇರಿಗಳನ್ನು ನಿರ್ಮಾಣ ಮಾಡಿದ್ದು, 32 ನಿವೇಶನ ವಂಚಿತರಿಗೆ ತುರ್ತಾಗಿ ನಿವೇಶನ ಹಂಚಿಕೆ ಮಾಡಬೇಕಾಗಿರುವುದರಿಂದ, ಈ ಹಿಂದೆ ಬಾಗೆಗ್ರಾಮದ ಸ.ನಂ.22 ರಲ್ಲಿ ಆಶ್ರಯ ನಿವೇಶನಕ್ಕೆ ಜಾಗ ಮಂಜೂರಾಗಿದ್ದು, ಸದರಿ ಜಾಗವನ್ನು ಹದ್ದುಬಸ್ತು ಮಾಡಿಸಿ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ದಿನಾಂಕ 23/08/2024ರಂದು ನಡೆದ ಸಾಮಾನ್ಯ ಸಭೆಯಲ್ಲಿ ಠರಾವು ಸಂಖ್ಯೆ 08 ರಲ್ಲಿ ಸಂಬಂಧ ಪಟ್ಟ ಇಲಾಖೆಗೆ ಪತ್ರ ವ್ಯವಹಾರ ನಡೆಸುವಂತೆ ಚರ್ಚಿಸಲಾಗಿದ್ದು, ಈ ಮೂಲಕ ತಮ್ಮ ಆದ್ಯ ಗಮನಕ್ಕೆ ತರುತ್ತಾ, ಸಾಮಾನ್ಯ ಸಭೆ ನಡಾವಳಿ ನಕಲು ಪ್ರತಿಯನ್ನು ಮನವಿ ಪತ್ರದೊಂದಿಗೆ ನೀಡಲಾಗಿದೆ.
*ಗ್ರಾಮಠಾಣಾ ಜಾಗವನ್ನು ಹೊಸದಾಗಿ ಸರ್ವೆ ಮಾಡಿಸಿ ಪುನರ್ ನಿಗಧಿಪಡಿಸಿಕೊಡುವ ಬಗ್ಗೆ*
ಸಕಲೇಶಪುರ ತಾಲ್ಲೂಕು ಬಾಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ
ಗ್ರಾಮಗಳ ಗ್ರಾಮಠಾಣಾ ಗಡಿ ತುಂಬಾ ಹಿಂದೆ ನಿಗಧಿಪಡಿಸಿದ್ದು, ಪ್ರಸ್ತುತ ಬಾಗೆಗ್ರಾಮದ ಗ್ರಾಮಠಾಣಾ ಪರಿಮಿತಿಯ ಆಜುಬಾಜಿನಲ್ಲಿ ಸುಮಾರು 40 ರಿಂದ 50 ವರ್ಷಗಳಿಂದ ಸಾರ್ವಜನಿಕರು ಮನೆ ನಿರ್ಮಿಸಿ ವಾಸಮಾಡಿಕೊಂಡು
ಗ್ರಾಮಪಂಚಾಯಿತಿಗೆ ತೆರಿಗೆ ಪಾವತಿಸಿಕೊಂಡು ಬಂದಿರುತ್ತಾರೆ. ಆದರೆ ಸದರಿ ಜಾಗವು ಸರ್ವೆ ನಂಬರ್ 19 ಆಗಿದ್ದು, ಗ್ರಾಮಠಾಣದ ಪರಿಮಿತಿಯಿಂದ ಹೊರಗಿದ್ದು, ಪಂಚಾಯಿತಿ ವತಿಯಿಂದ ಯಾವುದೇ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ, ಆದ ಕಾರಣ ಪಂಚಾಯಿತಿಯ ಸಭೆಗಳಿಗೆ ಬಂದು ನಿವೇಶನಗಳಿಗೆ ಹಕ್ಕುಪತ್ರಗಳನ್ನು ಮಾಡಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿ ವಾದ ವಿವಾದಗಳನ್ನು ಮಾಡುತ್ತಿರುತ್ತಾರೆ. ಸದರಿ ಜಾಗವು ತಮ್ಮ ವ್ಯಾಪ್ತಿಯಲ್ಲಿರುವುದರಿಂದ ಪಂಚಾಯಿತಿ ವತಿಯಿಂದ ಹಕ್ಕುಪತ್ರ ವಿತರಣೆ ಮಾಡಲು ಸಾಧ್ಯವಿರುವುದಿಲ್ಲ, ಆದ್ದರಿಂದ
ಗ್ರಾಮಠಾಣಾ ಜಾಗದ ಆಜುಬಾಜಿನಲ್ಲಿರುವ ಸರ್ಕಾರಿ ಜಾಗವು ಗ್ರಾಮಠಾಣಾ ವ್ಯಾಪ್ತಿಗೆ ಒಳಪಡದಿರುವುದರಿಂದ
ನಾಗರೀಕರ ಅಸ್ತಿಗಳಿಗೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿಯಿಂದ ನಮೂನೆ -9,11ಎ ಮತ್ತು 11 ಬಿ ವಿತರಿಸಲು
ಸಾಧ್ಯವಾಗುತ್ತಿಲ್ಲ ಆದ್ದರಿಂದ ದಿನಾಂಕ 23-08-2024ರಂದು ನಡೆದ ಸಾಮಾನ್ಯ ಸಭೆಯಲ್ಲಿ ಠರಾವು ಸಂಖ್ಯೆ 10ರಲ್ಲಿ
ಗ್ರಾಮಠಾಣಾ ಜಾಗಕ್ಕೆ ಹೊಂದಿಕೊಂಡಿರುವ, ಸರ್ಕಾರಿ ಜಾಗಗಳನ್ನು ಗ್ರಾಮಠಾಣಾ ಜಾಗದ ಪರಿಮಿತಿ ವಿಸ್ತರಿಸಿಕೊಡುವ
ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ವ್ಯವಹಾರ ನಡೆಸುವಂತೆ ಚರ್ಚಿಸಲಾಗಿದ್ದು, ಈ ಮೂಲಕ ತಮ್ಮ ಆದ್ಯ ಗಮನಕ್ಕೆ
ತರುತ್ತಾ, ಸಾಮಾನ್ಯ ಸಭೆ ನಡಾವಳಿ ನಕಲು ಪ್ರತಿಯನ್ನು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಅರ್ಜಿಗಳನ್ನು ನೀಡಿದ ನಂತರ ಮಾತನಾಡಿದ ಅವರು ಇದರಿಂದ ಬಡವರು ಕೂಲಿ ಕಾರ್ಮಿಕರಿಗೆ ವಶಕ್ಕೆ ಮನೆಯಿಲ್ಲದೆ ನಿವೇಶನವನ್ನು ನೀಡಿದರು ಹಕ್ಕು ಪತ್ರ ಕೊಡಲಾಗುತ್ತಿಲ್ಲ ಇನ್ನು ಮುಂದಿನ ಗುರುವಾರದವರೆಗೆ ಗಡುವನ್ನು ನೀಡಿದ್ದು ಇದಕ್ಕೆ ಯಾವುದೇ ರೀತಿ ಸ್ಪಂದನೆ ದೊರೆಯದಿದ್ದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಹಾಗು, ತಾಲ್ಲೂಕು ಕಚೇರಿಯ ಮುಂದೆ ವಸತಿ ನಿರಾಶ್ರಿತರು, ಪಂಚಾಯಿತಿ ಸದಸ್ಯರುಗಳು, ಎಲ್ಲರೂ ಸೇರಿ ಧರಣಿ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಗುರುವಾರ ಕಳೆದ ನಂತರ ನೇರವಾಗಿ ಹಾಸನ ಜಿಲ್ಲಾಧಿಕಾರಿಗಳು ಹಾಗು , ಕಂದಾಯ ಸಚಿವರಿಗೆ ವಸತಿ ನಿವೇಶನ ರಹಿತರ ಒಡಗೂಡಿ ಅವರಿಗೆ ಮನವಿಯನ್ನು ನೀಡುತ್ತೇವೆ ಎಂದು ಗ್ರಾಮ ಪಂ ಅಧ್ಯಕ್ಷರಾದ ರೇಖಾ ಗೋಪಿನಾಥ್ ಅವರು ತಿಳಿಸಿದ್ದಾರೆ.
previous post
next post