ವರದಿ ರಾಣಿ ಪ್ರಸನ್ನ
ಸಕಲೇಶಪುರದ ಬಾಳು ಪೇಟೆ ಯ ಕುಂಬಾರಗಟ್ಟೆಯ ಬಳಿ ಬ್ರೇಕ್ ಫೇಲ್ಯೂರ್ ಆಗಿ ಕೆ ಎಸ್ ಆರ್ ಟಿ ಸಿ ಬಸ್ ಅಪಘಾತಕ್ಕಿಡಾದ ಘಟನೆ ಇಂದು ಭಾನುವಾರ 22ರಂದು ಸಂಜೆ 4 ಘಂಟೆಯ ಸುಮಾರಿಗೆ ನಡೆದಿದೆ.
ಶ್ರೀನಿವಾಸಪುರ ದಿಂದ ಬೆಂಗಳೂರು ಹಾಗು ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ದಾರಿ ಮಧ್ಯೆ ಅಪಘಾತವಾಗಿದೆ. ಮಂಗಳೂರಿಗೆ ಹೋಗುತ್ತಿದ್ದ ಕೆಎ 07 ಎಫ್ 1889 ಕೆ ಎಸ್ ಆರ್ ಟಿ ಸಿ ಅಶ್ವಮೇಧ ಬಸ್ ಬಾಳು ಪೇಟೆಯ ರಾಷ್ಟ್ರೀಯ ಹೆದ್ದಾರಿ ಕುಂಬಾರಘಟ್ಟೆ ಬಳಿ ಬ್ರೇಕ್ ಫೇಲ್ಯೂರ್ ನಿಂದ ಚಾಲಕರ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಮಧ್ಯೆ ಬಸ್ ಹತ್ತಿ ಅಲ್ಲೆ ಹೂತುಕೊಂಡ ಕಾರಣ ಯಾರಿಗೂ ಯಾವುದೇ ಗಾಯ ಆಗಿರುವುದಿಲ್ಲ
ನಂತರ ಗ್ರಾಮಸ್ಥರು ಎಲ್ಲರೂ ಬಂದು ಸಕಲೇಶಪುರ ಪೋಲಿಸ್ ತಾಣೆಗೆ ವಿಷಯ ತಿಳಿಸಿದ್ದಾರೆ. ನಂತರ ಜೆಸಿಬಿ ಹಾಗು ಕ್ರೇನ್ ನಿಂದ ತೆರವು ಗೊಳಿಸಿರುವ ಘಟನೆ ನಡೆದಿದೆ.


