ಆಲೂರು ತಾಲೂಕು ರೈಲ್ವೆ ನಿಲ್ದಾಣದಲ್ಲಿ ಶಾಶ್ವತ ರೈಲು ನಿಲುಗಡೆಗಾಗಿ ಅನುಮೋದನೆ ಕೊಡಬೇಕೆಂದು ಕೇಂದ್ರದ ದೆಹಲಿ ರೈಲ್ವೆ ಬೋರ್ಡಗೆ ರಾಧಮ್ಮ ಜನಸ್ಪಂದನ ಹೇಮಂತ್ ಕುಮಾರ್ ಮನವಿ ಸಲ್ಲಿಸಲಿದ್ದಾರೆ…
ಮಲ್ನಾಡು ಶಾಡೋ ಡಿಜಿಟಲ್ ಮಾಧ್ಯಮಕ್ಕೆ ಪ್ರತಿಕ್ರಿಯಿ ಸಿದ ಹೇಮಂತ್ ಕುಮಾರ್ ಅವರು ಹಾಸನ ಜಿಲ್ಲೆಯಲ್ಲಿ ಆಲೂರು ತಾಲೂಕು ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಆಗಿದೆ. ಇರುವ ಒಂದು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿಗಳಿದ್ದರೂ ಕೂಡ ರೈಲುಗಳು ಮಾತ್ರ ನಿಲುಗಡೆಯಾಗುತ್ತಿಲ್ಲ. ಇದಕ್ಕೆ ಕಾರಣ ಜನಪ್ರತಿನಿಧಿಗಳ ಇಚ್ಛಾಶಕ್ತಿ ತಾಲೂಕಿನ ಮೂಲಭೂತ ಸೌಕರ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಕಳೆದ 24 ವರ್ಷಗಳಿಂದ ನಿರ್ಲಕ್ಷಿಸಿದ ಪರಿಣಾಮ ಇಲ್ಲಿಯವರೆಗೆ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ.
ಇದನ್ನು ಮನ ಗಂಡು ಕಳೆದ ವರ್ಷ ನಿರಂತರವಾಗಿ ನಮ್ಮ ಹೋರಾಟದ ಫಲವಾಗಿ ಅಶ್ವಿನಿ ವೈಷ್ಣವ್ ರೈಲ್ವೆ ಮಂತ್ರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ ಪ್ರಯುಕ್ತ ಆರು ತಿಂಗಳ ಮಟ್ಟಿಗೆ ಪ್ರಾಯೋಗಿಕವಾಗಿ ರೈಲು ನಿಲುಗಡೆ ಆದೇಶ ತರುವಲ್ಲಿ ಯಶಸ್ವಿಯಾಗಿದ್ದವು.
ಆದರೆ ಈಗ ಆದಾಯದ ನೆಪ ಹೇಳಿ ತಾಲೂಕಲ್ಲಿ ನಿಲುತ್ತಿದ್ದ ರೈಲು ಸೇವೆಯನ್ನ ರದ್ದುಪಡಿಸಿದ್ದಾರೆ ಅದರಿಂದ ಮತ್ತೊಮ್ಮೆ ನಾವು ಶಾಶ್ವತವಾಗಿ ರೈಲು ನಿಲುಗಡೆ ಆದೇಶವನ್ನು ತರಬೇಕೆಂದು ದೆಹಲಿಯ ರೈಲ್ವೆ ಬೋರ್ಡ್ ನ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಹನಿಶ್ ರೈಲ್ವೆ ಮಂತ್ರಿಯ ಪರ್ಸನಲ್ ಸೆಕ್ರೆಟರಿ ಅವರಿಗೆ ಸಮರ್ಪಕವಾಗಿ ಮಾಹಿತಿಯನ್ನು ಕೊಟ್ಟು ತಾಲೂಕಿನ ಸಮಸ್ಯೆಯನ್ನ ವಿವರಿಸಿ ಅವರ ಮನವಲಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಸದ್ಯದಲ್ಲೇ ಹುಬ್ಬಳ್ಳಿಗೆ ನಿಮ್ಮ ಬೇಡಿಕೆಯನ್ನ ಅನುಮೋದಿಸಿ ಕಳಿಸಿಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿಗೆ ಶಾಶ್ವತ ನಿಲಗಡೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ
