ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ಹೇಮಾವತಿ ಪ್ರತಿಮೆ ಉದ್ಘಾಟನೆ.
ಸಕಲೇಶಪುರ ತಾಲೂಕಿನಲ್ಲಿ ಹೇಮಾವತಿಯ ಪ್ರತಿಮೆಯನ್ನು ರೋಟರಿ ಸಂಸ್ಥೆಯ ಮೂಲಕ ಪಟ್ಟಣದ ಹೇಮಾವತಿ ಸೇತುವೆ ಬಳಿ ನಿರ್ಮಾಣ ಹಂತ ಮುಗಿದಿದ್ದು ಇಂದು ಮಂಗಳವಾರ ದಿ .11 ರಂದು ಪ್ರತಿಮೆ ಉದ್ಘಾಟನೆಯನ್ನು ಸಾಂಕೇತಿಕವಾಗಿ ರೋಟರಿ ಸಂಸ್ಥೆಯ ಮೂಲಕ ಮದ್ಯಾಹ್ನ 12.45 ಕ್ಕೆ ಮಾಡಲಿದ್ದಾರೆ.
ನಂತರ ಸ್ವಲ್ಪ ದಿನದಲ್ಲಿ ಶಾಸಕರು, ಮಾಜಿ ಶಾಸಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ವ್ಯವಸ್ಥಿತವಾಗಿ ಉದ್ಘಾಟನೆ ಹಾಗೂ ಕಾರ್ಯಕ್ರಮವನ್ನು ಮಾಡಲಾಗುವುದೆಂದು ರೋಟರಿ ಸಂಸ್ಥೆಯ ಮಾಜಿ ಕಾರ್ಯದರ್ಶಿಯಾದ ಜಾನೇಕೆರೆ ಪರಮೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ವೀರೇಂದ್ರ, ಕಾರ್ಯದರ್ಶಿ ರವಿರಾಜ್ ಶೆಟ್ಟಿ, ವೆಂಕಟೇಶ್, ಹರೀಶ್, ವಿಜಯಶಂಕರ್( ಪಾಪಣ್ಣ ಗೌಡ್ರು ಅಸಿಸ್ಟೆಂಟ್ ಗವರ್ನರ್ ಅರುಣ್ ರಕ್ಷಿದಿ, ರೋಟರಿ ರವಿಕುಮಾರ್, ರಾಜಕುಮಾರ್, ಪುರಸಭಾ ಅಧ್ಯಕ್ಷರಾದ ಜ್ಯೋತಿ ರಾಜಕುಮಾರ್ ಉಪಸ್ಥಿತರಿದ್ದರು
previous post
next post