ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ಯುವ ಕಾಂಗ್ರೆಸ್ ನ ಅಧ್ಯಕ್ಷರುಗಳ ಪದಗ್ರಹಣದ ಗೆಲುವಿನ ರೋಡ್ ಶೋ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ ಐದಾರು ತಿಂಗಳ ಹಿಂದೆ ಯುವ ಕಾಂಗ್ರೆಸ್ ಚುನಾವಣೆಯನ್ನು ಘೋಷಣೆ ಮಾಡಿದ್ದು ಈ ಚುನಾವಣೆಯಲ್ಲಿ ಸ್ಪರ್ಧಿಸಲಾಗಿತ್ತು.
ಅದರ ಫಲಿತಾಂಶ ದಿನಾಂಕ 07/02/2025 ರಂದು ಪ್ರಕಟವಾಗಿದ್ದು ಈ ಚುನಾವಣೆಯಲ್ಲಿ ಚುನಾಯಿತರಾದ ಧರ್ಮರಾಜ್ ಹೆನ್ಲಿ ರವರು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಅಸೆಂಬ್ಲಿ ಅಧ್ಯಕ್ಷರಾಗಿ, ಮತ್ತು ಸಕಲೇಶಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಮ್ಮದ್ ಶಬೀರ್, ಹಾಗೂ ಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ್ ತೊರೆಹಳ್ಳಿ, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕೆ ಆರ್ ಮನೋಜ್ ಅಗ್ನಿ, ಇವರು ಚುನಾಯಿತರಾಗಿದ್ದರು.
ಇದರ ಪ್ರಯುಕ್ತ ಇಂದು ಹೊಳೆಮಲ್ಲೇಶ್ವರ ದೇವಸ್ಥಾನದಿಂದ ಹಳೆ ಬಸ್ ಸ್ಟ್ಯಾಂಡ್ ವರೆಗೂ ಯುವ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ರೋಡ್ ಶೋ ಮಾಡುವುದರ ಮೂಲಕ ಪಟಾಕಿ ಸಿಡಿಸಿ ಅತ್ಯಂತ ವಿಜ್ರಂಬಣೆಯಿಂದ ಕಾರ್ಯಕ್ರಮವನ್ನು ಆಚರಿಸಲಾಯಿತು.
ಯುವ ಕಾಂಗ್ರೆಸ್ ಅಸೆಂಬ್ಲಿ ನೂತನ ಅಧ್ಯಕ್ಷ ಧರ್ಮರಾಜ್ ಮಾತನಾಡಿ ಇವರ ಗೆಲುವಿಗೆ ಕಾರಣರಾದ ಎಲ್ಲಾ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ತಿಳಿಸಿದರು.
ಮುರಳಿ ಮೋಹನ್ ಅನುಪಸ್ಥಿತಿ ಎದ್ದುಕಾಣುತ್ತಿತ್ತು.
ಮೆರವಣಿಗೆಯ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹಾನುಬಾಳು ಭಾಸ್ಕರ ರವರು, ಕೆಪಿಸಿಸಿ ಸದಸ್ಯರಾದ ಎಡೆಹಳ್ಳಿ ಆರ್ ಮಂಜುನಾಥ್, ಅಲ್ಪಸಂಖ್ಯಾತ ಮುಖಂಡರಾದ ಶಬ್ಬೀರ್ ಜಾನ್, ಕಾಂಗ್ರೆಸ್ ಮುಖಂಡರಾದ ಹೆಬ್ಬನಳ್ಳಿ ಭುವನಾಕ್ಷ್ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ನದೀಮ್ ಶರೀಫ್ ರವರು, ಮತ್ತು ಕಾಂಗ್ರೆಸ್ ಮುಖಂಡರಾದ ಡಿಸಿ ಸಣ್ಣ ಸ್ವಾಮಿ ರವರು, ಚಾಲ್ಸ್ ರವರು, ಹಾಗೂ ಜಾವಿದ್ ಕುಶಾಲನಗರ, ಮಹೇಶ್ ಬೈಕೆರೆ, ಬಿಲಾಲ್ ಫೈರೋಜ್ ಕುಶಾಲ್ನಗರ, ದವರು ರವರು ಕತ್ತಿ ಲೊಕೇಶಣ್ಣರವರು, ಬಾಲುಪೇಟೆ, ಮಹಿಳಾ ಘಟಕದ ಸದಸ್ಯರಾದ ಸರೋಜರವರು, ಗೀತಾ ರವರು, ಇನ್ನು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತ ಬಂಧುಗಳು ಈ ಸಂದರ್ಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು



