Blog

ಸಂವಿಧಾನ ಭಾರತೀಯರ ಪೂಜ್ಯ ಗ್ರಂಥ

ಸಂವಿಧಾನ ಭಾರತೀಯರ ಪೂಜ್ಯ ಹೆಮ್ಮಯ ಗ್ರಂಥ : ಡಾ!! ಎಂ ಕೆ ಶೃತಿ

ಸಕಲೇಶಪುರ: ಪ್ರತಿಯೊಬ್ಬ ಪ್ರಜೆಯು ಸ್ವಾಭಿಮಾನ ದಿಂದ ಬದುಕುವುದಕ್ಕೆ ಸಂವಿಧಾನ ಮತ್ತು ಅದರ ಚಿಂತನೆಗಳೇ ಕಾರಣ  ಸಂವಿಧಾನಕ್ಕೆ ನಾವು ಚಿರರುಣಿಗಳಾಗಿರಬೇಕು ಎಂದು ಉಪ ವಿಭಾಗಾಧಿಕಾರಿ ಡಾ!!ಎಂ ಕೆ ಶೃತಿ ಹೇಳಿದರು.


ಸಕಲೇಶಪುರ ಸುಭಾಷ್ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ  ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ  ಅವರು  1956 ರ ಜನವರಿ 26 ರಂದು ನಮ್ಮ ದೇಶಕ್ಕೆ ಸಂವಿಧಾನ ಜಾರಿಯಾಗಿದೆ. ನಮ್ಮ ಭಾರತ ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪುಗೊಂಡಿದೆ. ಈ ರಾಷ್ಟ್ರೀಯ ಹಬ್ಬ ನಮ್ಮೆಲ್ಲರಿಗೆ ಬಲವಾದ ಹೆಮ್ಮೆ ಮತ್ತು ದೇಶಭಕ್ತಿ ಯನ್ನು ಮೂಡಿಸುತ್ತದೆ. ನಮಗೆ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ನಮ್ಮದೇ ಆದಂತಹ ಲಿಖಿತ ಸಂವಿಧಾನ ಇರಲಿಲ್ಲ.  ಒಂದು ದೇಶ ಅಭಿವೃದ್ದಿ ಹೊಂದಲು  ಸಂವಿಧಾನ ಬೇಕೆಂದು ಅರಿವಾಯಿತು. ಅದಕ್ಕಾಗಿ ಒಂದು ಸಂವಿಧಾನ ಸಭೆಯನ್ನು ರಚನೆ ಮಾಡಿದರು. ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನ ದ ಸತತ ಪರಿಶ್ರಮದಿಂದ ಇಡೀ ವಿಶ್ವವೇ ಮುಚ್ಚುವಂತ ಬೃಹತ್ ಸಂವಿಧಾನ ರಚನೆ ಯಾಯಿತು. ಈ ಕೊಡುಗೆ ನೀಡಿದ ಡಾ!! ಬಿ ಆರ್ ಅಂಬೇಡ್ಕರ್ ಹಾಗೂ ರಚನೆಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳ ಬೇಕಾಗುತ್ತದೆ. ಎಂದರು. ಭಾರತದ ಪ್ರಜೆಗಳಾದ ನಾವು ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ. ಮತ್ತು ಕೆಲಸ ಮಾಡುವ ಕಾರ್ಯಾಂಗ ಗಳು ಹೇಗಿರಬೇಕು ಯಾವ ರೀತಿಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದೆಲ್ಲಾ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಯೇ ನಮ್ಮ ಸಂವಿಧಾನ.
ನಮ್ಮ ಸಂವಿಧಾನ ನಮ್ಮ ದೇಶದ ತಾಯಿ ಇದ್ದಂತೆ ಸಾಮಾಜಿಕ. ಆರ್ಥಿಕ.ನ್ಯಾಯಪರ ಚಿಂತನೆ ಮೂಲಕ ಪಾಳೆಯಗಾರಿಕೆಯ ಪ್ರಭುತ್ವವನ್ನು ಕಿತ್ತೆಸೆದು ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿದ ಸಂವಿಧಾನ ಭಾರತೀಯರ ಹೆಮ್ಮೆಯ ಪೂಜ್ಯ ಗ್ರಂಥ ನಮ್ಮ ಸಂವಿಧಾನ  ಈ ಸಂವಿಧಾನವು  ಜನರ ನಂಬಿಕೆ ಮತ್ತು ಆಕಾಂಕ್ಷೆ ಗಳ ಸಹಕಾರ ವಾಗಿದೆ. ಸಮಾನತೆ. ಸ್ವಾತಂತ್ರ್ಯದ ಪರಿಕಲ್ಪನೆ ಯನ್ನು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ನಮ್ಮ ವೈಯಕ್ತಿಕ ವಲಯದಲ್ಲಿ ಕೂಡ ಸಹಕಾರಿ ಯಾಗಿದೆ. ಆಟಿಕಲ್ 14. 15. 17 ರಲ್ಲಿ  ಮನುಷ್ಯನ ವೈಯಕ್ತಿಕ ಜೀವನದಲ್ಲಿ ನಡೆಯುವ ತಾರತಮ್ಯ ಹೋಗಲಾಡಿಸುತ್ತದೆ. ನಮ್ಮ ಸಂವಿಧಾನ  ಜೀವಂತ ದಾಖಲೆ. ಜಾತಿ ಮತ ಭೇದವಿಲ್ಲದೆ ಜನರ ಸ್ವಾಭಿಮಾನದ ಹಕ್ಕನ್ನು ಕಲ್ಪಿಸುತ್ತಿದೆ. ನಮ್ಮ ಸಂವಿಧಾನ.


ಭೂ ಸುಧಾರಣೆ ಕಾಯ್ದೆ ಯಿಂದ ಹಿಡಿದು 106ನೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಮಹಿಳೆಯರಿಗೆ 33% ಮೀಸಲಾತಿ ನೀಡಿರುವುದನ್ನು ನಾವು ಕಾಣಬಹುದು.
ಚಂದ್ರ ಯಾನ. ಮಂಗಳ ಗ್ರಹ ಯಾನ ಮುಂತಾದ ಯಶಸ್ವಿಯಾಗಿ ನಡೆಸಿ ಭಾರತ ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆ. ಸಂವಿಧಾನ ಮತ್ತು ಅದರ ಚಿಂತನೆಗಳಿಗೆ ನಾವೆಲ್ಲರೂ ಯಾವತ್ತಿಗೂ ಚಿರ ಋಣಿಗಳಾಗಿರ ಬೇಕೆಂದರು.


ಶಾಸಕ ಸಿಮೆಂಟ್ ಮಂಜು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಚನ್ನಾಗಿ ಐಎಎಸ್‌ ಐಪಿಎಸ್. ಅಧಿಕಾರಿಗಳು ಅಥವಾ ವಿಜ್ಞಾನಿಗಳು ಆಗಬೇಕು ದೇಶ ಮುನ್ನಡೆಸುವಂತಾಗಬೇಕೆಂದರು.ಚಂದ್ರಯಾನ ಮಂಗಳ ಯಾನ ಜೊತೆಗೆ ಅಭಿವೃದ್ಧಿ ಕೆಲಸಗಳು ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ವಿಶ್ವವೇ ಮೆಚ್ಚುವ ಸಂವಿಧಾನ ಅಂಬೇಡ್ಕರ್ ನೀಡಿದ್ದಾರೆ . ಅಂಬೇಡ್ಕರ್ ಇಲ್ಲದಿದ್ದರೆ ನಾನು ಶಾಸಕ ಆಗಲು ಆಗುತ್ತಿರಲಿಲ್ಲ.  ಎಂದರು  ಕಾರ್ಯಕ್ರಮ ಪ್ರಾರಂಭದಲ್ಲಿ ಪೋಲಿಸ್ ಅಧಿಕಾರಿಗಳು ಮತ್ತು ಶಾಲಾ ಮಕ್ಕಳಿಂದ ಪಥಸಂಚಲನನಡೆಯಿತು

ಯಡೇಹಳ್ಳಿ ಮಂಜುನಾಥ್ ಸಾಹಿತ್ಯ ಕ್ಷೇತ್ರ. ಬೈರಪ್ಪ ಸಕಲೈಶ್ವರ್ ಪತ್ರಕರ್ತರು.ಮಲ್ಲೇಶ್ ಶಿಕ್ಷಕರು. ಎಸ್‌ ಕೆ ಬೋರ ಮಾಜಿ ಸೈನಿಕ. ಪುಷ್ಪ ಶಿಕ್ಷಕರು. ಮಂಜುನಾಥ್ ಆರೋಗ್ಯ ಇಲಾಖೆ. ಮುಂತಾದ
ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರುಗಳನ್ನು ಸನ್ಮಾನಿಸಲಾಯಿತು.
ವಿವಿಧ ಶಾಲೆಗಳಿದ ಬಂದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ. ಕರಾಟೆ ಪ್ರದರ್ಶನ.
ಈ ಕಾರ್ಯಕ್ರಮದಲ್ಲಿ  ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜ್ ಕುಮಾರ್ ತಹಸೀಲ್ದಾರ್ ಮೇಘನಾ. ಡಿವೈಎಸ್ ಪಿ ಪ್ರಮೋದ್ ಕುಮಾರ್ .ತಾಪಂ ಇಓ ಗಂಗಾಧರ್ .ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ . ಡಾ!! ವೆಂಕಟೇಶ್ .ಕೃಷಿ ಅಧಿಕಾರಿ ಪ್ರಕಾಶ್ ಕುಮಾರ್. ಪುರಸಭೆ ಮುಖ್ಯಾಧಿಕಾರಿ. ಹಾಗು ಶಿಕ್ಷಕರು ನಾಗರೀಕರು.ಅಧಿಕಾರಿಗಳು ಹಾಜರಿದ್ದರು.

Related posts

ಹೊಸಗದ್ದೆಯಲ್ಲಿ ಅಪರೂಪದ ಅವಳಿ ಕರುಗಳು

Bimba Prakashana

ಗೋ ಕೆಚ್ಚಲು ಕತ್ತರಿಸಿ ವಿಕೃತಿ – ಡಿ ವೈ ಎಸ್ ಪಿ ಯವರಿಗೆ ಮನವಿ ಮಾಡಿದ ಭಜರಂಗ ದಳ

Bimba Prakashana

ಹೊಸ ವರ್ಷದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More