ಸಕಲೇಶಪುರ:-
ಸಕಲೇಶಪುರದ ಐತಿಹಾಸಿಕ ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದ
ಶಾಸಕ ಸಿಮೆಂಟ್ ಮಂಜು
ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಶಿರಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಬ್ರಹ್ಮಕಳೊತ್ಸವ ಆಗಿ 32 ವರ್ಷಗಳಾಗಿದ್ದು ಅಷ್ಟಬಂಧ ಇಲ್ಲದೆ ಅಭಿಷೇಕ ಮಾಡಲು ಆಗುತ್ತಿಲ್ಲ ಎಂಬುದನ್ನ ಅರ್ಚಕರು ಶಾಸಕರ ಗಮನಕ್ಕೆ ತಂದ ತಕ್ಷಣ ಸಕಲೇಶಪುರ ತಹಶೀಲ್ಧಾರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನ ದೇವಸ್ಥಾನಕ್ಕೆ ಕರೆಯಿಸಿ ಸಭೆ ನಡೆಸಿ 2022 ನೇ ಸಾಲಿನಲ್ಲಿ ಅನುಮೋಧನೆಗೆ ಕಳುಹಿಸಿರುವ ಪತ್ರಗಳನ್ನ ಪರಿಶೀಲಿಸಿದರು.
ಮೂರೂ ದಿನಗಳ ಕಾಲ ನಡೆ ಯುವ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ಆಗಬೇಕು ಎಂದು ತಾಕೀತು ಮಾಡಿದರು.
ನೂತನವಾಗಿ ಹೈಟೆಕ್ ಶೌಚಾಲಯ,
ಗ್ರಿಲ್ಸ್ ಕಾಂಪೌಂಡ್, ನೂತನ ಅಡುಗೆ ಮನೆ, ತಡೆಗೋಡೆ, ಸ್ನಾನ ಗೃಹ, ಬಲಿಪೀಠದ ನವೀಕರಣ ವಿವಿಧ ಕಾಮಗಾರಿಗಳು ತಕ್ಷಣ ಆಗಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹಳ ಮುಖ್ಯವಾಗಿ ದೇವಸ್ಥಾನದ ವಾತಾವರಣ ಸ್ವಚ್ಛತೆಯಿಂದ ಇರಬೇಕು ಎಂದು ದೇವಸ್ಥಾನ ಸಿಬ್ಬಂದ್ಧಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ರಘು ಸಕಲೇಶಪುರ, ಶಿವೂ ಜಿಪ್ಪಿ, ಮಾರನಹಳ್ಳಿ ಹರೀಶ್, ಕುಮಾರ್, ಮುಜರಾಯಿ ಇಲಾಖೆ ಅಧಿಕಾರಿ ಶ್ರೀಮತಿ ಕೃಷ್ಣವೇಣಿ, ಹಾನುಬಾಳು ಲೆಕ್ಕಾಧಿಕಾರಿ ಶ್ರೀ ವಂದಿತಾ ಅರ್ಚಕರಾದ ರಘುಪತಿ ಭಟ್, ಆನಂದ್ ಉಪಸ್ಥಿತರಿದ್ದರು ಇದ್ದರು.