ಭಗವಂತನಿಗೆ ಸುಳ್ಳು ಹೇಳುವ ಮೂಲಕ ಸುಳ್ಳನ್ನೇ ಎತ್ತಿ ಹಿಡಿದು ಜನರ ಪ್ರಾಣ ತೆಗೆಯಲು ಸಕಲೇಶಪುರದ ಪುರಸಭೆ ಮುಂದಾಗಿದೆ ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೇ ಕೆರೆ ಕಿಡಿ ಕಾರಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಲೆನಾಡು ರಕ್ಷಣಾ ಸೇನೆಯು ವಸ್ತು ಪ್ರದರ್ಶನ ನಡೆಸಲು ನಿಶ್ಚಯಿಸಿರುವ ಮಳಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಗೊಂಡಿರುವ ಯೋಗ್ಯವಲ್ಲದ ಭೂಮಿಯಲ್ಲಿ ವಸ್ತು ಪ್ರದರ್ಶನ ನಡೆಸುವುದನ್ನು ವಿರೋಧ ಮಾಡಿರುತ್ತೇವೆ.
ಆದರೆ ಇದನ್ನು ಸಮರ್ಥನೆ ಮಾಡಿಕೊಂಡ ಸಕಲೇಶಪುರದ ಪುರಸಭಾ ಮುಖ್ಯಾಧಿಕಾರಿಗಳು ಯೋಗ್ಯ ವಲ್ಲದ ಸ್ಥಳವನ್ನು ಯೋಗ್ಯವೆಂದು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ಮಾಡಿದ್ದಾರೆ.
ಅಸಲಿ ಪರೀಕ್ಷೆಯ ವರದಿ ಪ್ರಕಾರ ಈ ಜಾಗಕ್ಕೆ ಮಣ್ಣನ್ನು ಬೇರೆಡೆಯಿಂದ ತುಂಬಿದ್ದು ಮಣ್ಣಿನ ಸಾಂದ್ರತೆ ಕಡಿಮೆ ಇದೆ ಎಂದು ಈ ವರದಿ ಹೇಳುತ್ತದೆ.
ಗಟ್ಟಿಯಾಗಿಲ್ಲದ ಸ್ಥಳದಲ್ಲಿ ಆಮ್ಯೂಸ್ ಮೆಂಟ್ ಪಾರ್ಕ್ ಮಾಡಿ ಜೊತೆಗೆ ನೂರಾರು ಅಂಗಡಿಗಳಿಗೆ ಅವಕಾಶ ನೀಡಿ ಪುರಸಭಾ ಮುಖ್ಯಾಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಜನರ ಜೀವಕ್ಕೆ ಅಪಾಯ ಇರುವ ಈ ಸ್ಥಳದಲ್ಲಿ ವಸ್ತು ಪ್ರದರ್ಶನ ನಡೆಸುವ ತೀರ್ಮಾನ ತಕ್ಷಣ ಕೈಬಿಡಬೇಕು. ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಬೇಕು.
ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಜೊತೆಗೆ ಕಾನೂನು ಹೋರಾಟಕ್ಕೂ ಚಾಲನೆ ನೀಡ ಬೇಕಾಗುತ್ತದೆ ಎಂದು ಡಾ.ಸಾಗರ್ ಜಾನೇ ಕೆರೆ ತಿಳಿಸಿದ್ದಾರೆ
previous post
next post