ವರದಿ :ರಾಣಿ ಪ್ರಸನ್ನ
ಸಕಲೇಶಪುರ ಸರಕಾರಿ ಬಸ್ ಡಿಪೊದ ಹಲವಾರು ಬಸ್ ಗಳು ಸಂಪೂರ್ಣ ಹಳೆದಾಗಿದ್ದು, ಅವುಗಳ ದುರಸ್ತಿ ವೈಫಲ್ಯ ಕಂಡಿದೆ. ಅವುಗಳು ಎಲ್ಲಂದರಲ್ಲಿ ಕೆಟ್ಟು ನಿಲ್ಲುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಳ್ಳಿ ಮಾರ್ಗದಲ್ಲಿ ಚಲಿಸುವ ಬಸ್ ಗಳು ಮಧ್ಯ ರಸ್ತೆಯಲ್ಲಿ ನಿಂತರೆ ಅವರು ಏನ್ ಮಾಡಬೇಕಾಗುತ್ತೆ.
ಸಕಲೇಶಪುರದ ಡಿಪೋ ದಲ್ಲಿರುವಂತ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿರುವುದು ಬಹಳ ಖೇದ ಕರ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಅಧಿಕಾರಿಗಳು ಉದೇವಾರ ಬೆಳಗೋಡು ಮಾರ್ಗವಾಗಿ, ಹಾಸನ ಮೈಸೂರು ಪ್ರತಿನಿತ್ಯ ತಲುಪುವ ಹೊಸ ಬಸ್ಸನ್ನು ಬಿಡಬೇಕಾಗಿ ವಿನಂತಿಸಿದ್ದಾರೆ.
ಇತ್ತೀಚೆಗೆ ಸಕಲೇಶಪುರದಿಂದ ಉದೇವಾರ ಹೆಬ್ಬನ ಹಳ್ಳಿ ಬೆಳಗೋಡು ಮಾರ್ಗವಾಗಿ ಮೈಸೂರಿಗೆ ಚಲಿಸುತ್ತಿದ್ದ ಬಸ್ಸು ಹೆಬ್ಬನಹಳ್ಳಿಯಲ್ಲಿ ಕೈ ಕೊಟ್ಟಿತ್ತು. ಇದೇ ರೀತಿ ಹಲವಾರು ಘಟನೆಗಳು ನಡೆಯುತ್ತಿದ್ದುದನ್ನು ಸ್ಥಳೀಯರು ತಿಳಿಸಿದ್ದಾರೆ