ವರದಿ ರಾಣಿ ಪ್ರಸನ್ನ
ಶ್ರೀ ಮಾಗೇರಿ ರಾಜೇಗೌಡ್ರು ನಿಧನರಾಗಿದ್ದಾರೆ.
ಇಂದು ಸಂತಾಪ ಸೂಚಕ ಸಭೆ ನಡೆಯಿತು.
ಬಿಜೆಪಿ ಅಭ್ಯರ್ಥಿಗಳು ಸಿಗದೇ ಇದ್ದ ಕಾಲದಲ್ಲಿ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಿ ಜಿಲ್ಲಾಧ್ಯಕ್ಷರು ಸಹ ಆಗಿದ್ದರು. ಬಿಜೆಪಿ ಪಕ್ಷವನ್ನು ಹಾಸನ ಜಿಲ್ಲೆಯಲ್ಲಿ ಸಂಘಟಿಸುವಲ್ಲಿ ಇವರ ಕೊಡುಗೆ ಅಪಾರ ಹಾಗು ಶಿಕ್ಷಣ ಸಂಸ್ಥೆಗಳಲಿಯೂ ಕೂಡ ಎಂದು ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಅವರ ಕುರಿತು ಸ್ಮರಿಸಿದರು.
ಅವರ ಚಳುವಳಿಯ ಸಂಬಂಧದ ಜೊತೆಗೆ ನನ್ನ ಒಡನಾಟವಿದೆ, ಸಹಕಾರ ಸಂಘದ ಜಪ್ತಿ ವಿರುದ್ಧ ಹಾಗು ಗೋಲಿ ಬಾರ್ ವಿರುದ್ಧ ಚಳುವಳಿಗಳಲ್ಲಿ ಅವರ ಜೊತೆ ನನ್ನ ಒಡನಾಟವಿತ್ತು , ಆ ಚಳುವಳಿಯಲ್ಲಿ ಅವರ ಪಾತ್ರ ಹೆಚ್ಚಾಗಿತ್ತು , ಕುಗ್ರಾಮದಲ್ಲಿ ಬೆಳೆದ ಇವರು ಬಂದ ದಾರಿಯೇ ಎಲ್ಲರಿಗೂ ಒಂದು ಪ್ರೇರಣೆ ಎಂದು ಮಾಜಿ ಶಾಸಕರಾದ ವಿಶ್ವನಾಥ್ ಅವರು ತಮ್ಮ ಅವರ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು.
ಬಿಜೆಪಿ ಕಟ್ಟಾಳು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು, ಜನಪರ ಹೋರಾಟಗಾರರು, ಮಾರ್ಗದರ್ಶಕರಾಗಿದ್ದ ಮಾಗೇರಿ ರಾಜೇಗೌಡ್ರು ಹಲವು ವರ್ಷಗಳಿಂದ ಲಿವರ್ ಕ್ಯಾನ್ಸರ್ ನಿಂದ ನರಳುತ್ತಿದ್ದರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಇವರು ಪತ್ನಿ ಇಬ್ಬರು ಗಂಡು ಮಕ್ಕಳು ಆದ ರಜನೀಶ್ ಪಟೇಲ್ , ರಾಕೇಶ್ ಪಟೇಲ್, ಸೊಸೆಯಂದಿರು , ಮೊಮ್ಮಕ್ಕಳನ್ನು ತೊರೆದಿದ್ದಾರೆ. ಬೆಂಗಳೂರಿನಿಂದ ಸಕಲೇಶಪುರದ ಪುರಸಭೆಯ ಆವರಣದಲ್ಲಿ ಇವರ ದೇಹವನ್ನು ಇರಿಸಿ ಅವರಿಗೆ ಮೌನಾಚಾರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಅವರ ಪಾರ್ಥೀವ ಶರೀರವನ್ನು ಇಂದು ದಿನಾಂಕ 7ರ ಸಂಜೆ ಅವರ ಗ್ರಾಮವಾದ ಮಾಗೇರಿ ಗ್ರಾಮಕ್ಕೆ ಸಕಲೇಶಪುರದಿಂದ ತರಲಿದ್ದಾರೆ ಹಾಗು ನಾಳೆ ಅವರ ಅಂತ್ಯಕ್ರಿಯೆ ಹುಟ್ಟೂರು ಮಾಗೇರಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾಗೇರಿ ರಾಜೇಗೌಡ್ರು ಇಂದು ದೈವಾದೀನರಾಗಿರುವುದರಿಂದ ಶಾಸಕರಾದ ಸಿಮೆಂಟ್ ಮಂಜು ರವರು, ಮಾಜಿ ಶಾಸಕರಾದ ವಿಶ್ವನಾಥ್, ಪುರಸಭೆ ಸದಸ್ಯರುಗಳು, ಅವರು ಬಿಜೆಪಿ ಮುಖಂಡರು ಎಲ್ಲರು ಮಾತನಾಡಿ ಆ ಭಗವಂತನು ಅವರ ಆತ್ಮಕ್ಕೆ ಚಿರ ಶಾಂತಿ ನೀಡಿ ಅವರ ಕುಟುಂಬಕ್ಕೆ ಆಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
previous post
next post