ಆಲೂರು.ಮಕ್ಕಳಿಗೆ ಮಾನವೀಯ ಮೌಲ್ಯ ಮತ್ತು ಸಂಸ್ಕಾರ ಕಲಿಸದೆ ಹೋದರೆ ಭವಿಷ್ಯದಲ್ಲಿ ಶಾಂತಿ ಸೌಹಾರ್ದ ದಿಂದ ವಂಚಿತರಾಗುತ್ತಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಎಚ್ಚರಿಸಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಧಮ್ಮ ಜನ ಸ್ಪಂದನ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.
ಮನುಷ್ಯನಿಗೆ ತೃಪ್ತಿ ಇದ್ದರೆ ಭ್ರಷ್ಟಾಚಾರ ಆಗೋಲ್ಲ ದುರಾಸೆ ಒಳ್ಳೆಯದಲ್ಲ. ಪ್ರಾಮಾಣಿಕತೆಯಿಂದ ಕಾನೂನು ವ್ಯಾಪ್ತಿಯಲ್ಲಿ ಸಂಪಾದಿಸಿ ಶ್ರೀಮಂತರಾಗಬೇಕು ಇನ್ನೊಬ್ಬರ ಜೇಬಿಗೆ ಕತ್ತರಿ ಹಾಕಿ ಜೀವನ ಮಾಡಬಾರದು. ಆಗ ಸಮಾಜದಲ್ಲಿ ಶಾಂತಿ ಸೌಹಾರ್ದವಿರುತ್ತದೆ ಎಂದರು. ನಂತರ ಮಾತನಾಡಿದ ರಾಧಮ್ಮ ಜನಸ್ಪಂದನ ಸಂಸ್ಥೆ, ಅಧ್ಯಕ್ಷರಾದ ಹೇಮಂತ್ ಕುಮಾರ್ ನಮ್ಮ ಸಂಸ್ಥೆಯಲ್ಲಿ ಯಾವುದೇ ಜಾತಿ ಭೇದಭಾವವಿಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿದ್ದೇವೆ.
ಈ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಹಾಗೂ ಲೋಕಾಯುಕ್ತರು ಹಾಗೂ ರಾಷ್ಟ್ರದಲ್ಲಿ ಭ್ರಷ್ಟಾಚಾರಕ್ಕೆ ನಿರ್ಮೂಲನೆ ಮಾಡುತ್ತಿರುವ ಸಂತೋಷ ಹೆಗಡೆ ಯವರು ನಮ್ಮ ಕಾರ್ಯಕ್ರಮದ ಲ್ಲಿ ಬಂದು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿರುವುದು ನಮ್ಮ ತಾಲೂಕಿನ ಸೌಭಾಗ್ಯ ಎಂದು ಮಾತನಾಡಿದರು.
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಪರಮೇಶ್. ನಾಯಕರಲ್ಲಿ ಮಂಜೇಗೌಡ. ಕಾಂತ ಕೃಷ್ಣ. ಪ್ರಾಂಶುಪಾಲರಾದ ಮಂಜೇಗೌಡ. ಶ್ರೀಕಾಂತ್ ಉದಯರವಿ. ಧರ್ಮರಾಜ್ ವರದರಾಜ್. ಆಕಾಶವಾಣಿ ನಿಸರ್ಗ ನವೀನ. ಕಿರಣ್. ಪೋಷಕರು ಶಿಕ್ಷಕರು. ಉಪಸ್ಥಿತರಿದ್ದರು.