ಆಲೂರು : ದೇವಾಲಯಗಳನ್ನು ನಿರ್ಮಿಸುವುದು ಎಷ್ಟು ಮುಖ್ಯವೋ ಅವುಗಳ ಪಾವಿತ್ರ್ಯಕಾಪಾಡಿಕೊಳ್ಳುವುದು ಅಷ್ಟೇ ಅಗತ್ಯ ಎಂದು ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿಗಳ ಹೇಳಿದರು.
ಆಲೂರು ಪಟ್ಟಣ ಆಶಾ ಬಡಾವಣೆಯಲ್ಲಿ
ನೂತನವಾಗಿ ನಿರ್ಮಿಸಿರುವ ಶ್ರೀ ವರಸಿದ್ದಿ ವಿನಾಯಕ ದೇವಾಲಯ ಲೋಕಾರ್ಪಣೆ ಮತ್ತು ವಿಮಾನ ಗೋಪುರ ಕಳಶಾರೋಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವಾಲಯಗಳು ಜೀರ್ಣೋದ್ದಾರವಾದಂತೆ ಮನುಷ್ಯನ ಜೀವನವೂ ಉತ್ತಮವಾಗಬೇಕು ಎಂದರು. ಧಾರ್ಮಿಕ ಕೇಂದ್ರಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಮಠ, ಮಂದಿರ ಮೊದಲಾದ ಧಾರ್ಮಿಕ ಕೇಂದ್ರಗಳು ದೇಶಕ್ಕೆ ಅಗತ್ಯವಿದೆ. ಮಹಿಳೆಯರ ಸಬಲೀಕರಣದಿಂದ ಸಮಾಜ, ಒಂದು ಕುಟುಂಬ ಬದಲಾವಣೆ ಸಾಧ್ಯ. ಶಿಕ್ಷಣದಿಂದ ಬಡತನವನ್ನು ನಿವಾರಿಸಬಹುದು ಎಂದು ಹೇಳಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರದ ಅನುದಾನದಲ್ಲಿ ದೇವಸ್ಥಾನ ನಿರ್ಮಿಸುವುದಕ್ಕಿಂತ ಮಿಗಿಲಾಗಿ ಭಕ್ತರ ಸಹಾಯದಿಂದ ನಿರ್ಮಾಣ ವಾಗುವುದು ಸಂತಸದ ಸಂಗತಿ ಎಂದರು. ಆರೋಗ್ಯಪೂರ್ಣ ಸಮಾಜಕ್ಕೆ ಮಠ, ಮಂದಿರಗಳು ಬೇಕು. ವಿದೇಶಿಗರೂ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಗ್ರಾಮದ ಜನರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸೋಮವಾರ ಬೆಳಗ್ಗೆ ಬ್ರಾಹ್ಮ ಲಗ್ನದಲ್ಲಿ ಗ್ರಾಮದ ಸಮಸ್ತ ಸುಮಂಗಲಿ ಸಮೇತ ಕೆ.ಇ.ಬಿ. ವೃತ್ತದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದ ಅಂಗಳದಲ್ಲಿ ಸಹಸ್ರಾಷ್ಟ ಕುಂಭಾರಾಧನೆ ನೆಡೆಮುಡಿ ಸಮೇತ 7-50 ರಿಂದ 9-20 ರೋಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ವಿಮಾನಗೋಪುರ ಶಿಖರ ಕಳಸ ಪ್ರತಿಷ್ಠಾಪನೆಯು ಸಹಸ್ರದಾರ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ. ದಿವ್ಯಾಲಂಕಾರ ನಡೆಯಿತು.
ನಂತರ ವೇದಾ ಪುರೋಹಿತ ಅರ್ಚಕ ಶ್ರೀ ವೆಂಕಟೇಶ್ ಕಾಶ್ಯಪ್ ಆಶಾಬಡಾವಣೆ ಅಲೂರು ಹಾಗೂ ಹಾಗೂ ಶಿಷ್ಯವೃಂದದವರಿಂದ ಪ್ರಾಣಪ್ರತಿಷ್ಠಾಪನಾ ಹೋಮ, ಶಾಂತಿಹೋಮ, ಅಷ್ಟಬಲಿ ಸಮೇತ ಕದಲಿಛೇಧನ ಕಾಮದೇನು ಸಮೇತ ಶ್ರೀಯವರ ನೇತ್ರಸಂಕಲನ ದರ್ಪಣ ದರ್ಶನ, ಮಹಾಪೂರ್ಣಾಹುತಿ, ಶ್ರೀಯವರಿಗೆ ಅಷ್ಟಾವಧಾನ ಸೇವೆ, ಸಹಸ್ರನಾಮಾರ್ಚನೆ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಇದೇ ಸಂದರ್ಭದಲ್ಲಿ ನೂತನ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ತಲುಮನೆತನ ಅರ್ಪಣೆ ಮಾಡಿದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಕಲಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಧರ್ಮರಾಜೇಂದ್ರ ಸ್ವಾಮಿಜೀ, ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ. ರೇಣುಕಾ ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಗುತ್ತಿಗೆದಾರ ವಿಜಯಕುಮಾರ ಹಂತಮನೆ
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಹಳೆಆಲೂರು, ಸದಸ್ಯರಾದ ನಾಗರಾಜ್, ಗಜೇಂದ್ರ, ನಾಗರಾಜ್, ಉಮಾ ರವಿಪ್ರಕಾಶ್ ವಿಗ್ರಹದಾನಿಗಳಾದ ಕುಮಾರ್ ಹಳೆ ಆಲೂರು ಸೇರಿದಂತೆ ಮುಂತಾದವರು ಹಾಜರಿದ್ದರು.
previous post