ಸಕಲೇಶಪುರ ಚಂಪಕ್ ನಗರದಲ್ಲಿ ಮನೆಯೊಂದು ವಿದ್ಯುತ್ ಅವಘಡಕ್ಕೆ ಈಡಾಗಿ ಸುಟ್ಟು ಹೋದ ಘಟನೆ ವರದಿಯಾಗಿದೆ.
ಟೋಲ್ ಗೇಟ್ ನಿವಾಸಿ ಆಗಿರುವ ಶಿವ ದೇವ್ ಕುಮಾರ್ ಎಂಬವರ ಮನೆಯಲ್ಲಿ ಬಾಡಿಗೆಗಿದ್ದ ಬಿ ಎಂ ಎಸ್ ಬೆಡ್ಡಿಂಗ್ ಶಾಪ್ ಮಾಲೀಕ ಮೆಹಬೂಬ್ ಎಂಬವರ ಮನೆಗೆ ರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ತಗುಲಿದೆ.
ಸಕಲೇಶಪುರದಲ್ಲಿ ಕಾರ್ಯಕ್ರಮಕ್ಕೆ ಮೆಹಬೂಬ್ ಕುಟುಂಬ ತೆರಳಿದ್ದ ಸಂದರ್ಭದಲ್ಲಿ ಮನೆಗೆ ಬೆಂಕಿ ಬಿದ್ದಿದೆ.
ಬೆಂಕಿ ಉರಿಯುತ್ತಿರುವ ಶಬ್ದ ಕೇಳಿ ಸ್ಥಳೀಯರು ಹಾಗು ಮನೆಯ ಯಜಮಾನ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ ಬೆಂಕಿ ಆರುವ ಹೊತ್ತಿಗೆ ಮನೆಯಲ್ಲಿದ್ದ ಟಿ ವಿ, ಮದುವೆಗಾಗಿ ತೆಗೆದಿಟ್ಟಿದ್ದ ಬೆಲೆ ಬಾಳುವ ಬಟ್ಟೆಗಳು ಬೆಂಕಿಗೆ ಅಹುತಿಯಾಗಿದೆ.
ಪೀಟೋಪಕರಣಗಳು ಸುಟ್ಟು ಹೋಗಿವೆ. ಸುಮಾರು 6 ಲಕ್ಷ ಮೊತ್ತದ ಸಾಮಗ್ರಿ ಬೆಂಕಿಗೆ ಅಹುತಿ ಆಗಿದೆ ಎಂದು ತಿಳಿದು ಬಂದಿದೆ.
ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋದುದರಿಂದ ಅವರ ಮನೆಯವರು ಮೈ ಮೇಲೆ ಹಾಕೋ ಬಟ್ಟೆಗೂ ಪರದಾಟ ಮಾಡುವಂತಾಗಿದೆ









