ವರದಿ ರಾಣಿ ಪ್ರಸನ್ನ
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ ಬಾಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣದಿಂದಾಗಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ರಸ್ತೆಯ ಅಜುಬಾಜಿನಲ್ಲಿರುವ ಮನೆಗಳು ಮತ್ತು ಆಟೋ ನಿಲುಗಡೆ ತಾಣದಲ್ಲಿಯೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಬಾಗೆಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಇರುವ ಕಾರಣ ಮಕ್ಕಳ ಓಡಾಟಕ್ಕೆ ಅಪಾಯ ಹೆಚ್ಚಾಗಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ಯಾಸ್ ಗೋಡಾನ ಮುಂಭಾಗ ಅಂಚೆ ಕಛೇರಿ ಮುಂಭಾಗ ಹಾಗೂ ಹಾಲಿನ ಡೈರಿ, ಸಮುದಾಯ ಭವನ, ಅಂಗುನವಾಡಿ ಮತ್ತು ಗ್ರಾಮ ಪಂಚಾಯಿತಿ ಮುಂಭಾಗ , ಸಾರ್ವಜನಿಕರಿಗೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡಲು ತೊಂದರೆಯಾಗುತ್ತಿರುವುದರಿಂದ ಈ ಕೆಳಕಂಡ ಸ್ಥಳಗಳಲ್ಲಿ ಮೋರಿ ರಸ್ತೆ ಮತ್ತು ಬಾಕ್ಸ್ ಚಿರಂಡಿ ಮಾಡಿಸಿಕೊಡುವಂತೆ ಯೋಜನಾ ನಿರ್ದೇಶಕರು , ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮನವಿ ಪತ್ರ ನೀಡಲಾಯಿತು.
ಕಾಮಗಾರಿ ವಿವರ ಎಲ್ಲೆಲ್ಲಿ
ಯಡೆಹಳ್ಳಿಯ, ಯಡೆಹಳ್ಳಿ ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಾರಗಟ್ಟೆ ಗ್ರಾಮಕ್ಕೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಯಡೇಹಳ್ಳಿಯ , ಯಡೇಹಳ್ಳಿ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರ ಗ್ರಾಮಕ್ಕೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಯಡೇಹಳ್ಳಿಯ , ಯಡೇಹಳ್ಳಿ ರಾಷ್ಟ್ರೀಯ ಹೆದ್ದಾರಿಯಿಂದ ಆರಸುನಗರ ಗ್ರಾಮಕ್ಕೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಗುಲಗಳಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಹೆಬ್ಬನಹಳ್ಳಿಗೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಗುಲಗಳಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಹೊಸೂರು ರಸ್ತೆ ವರೆಗೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಬಾಗೆ ರಾಷ್ಟ್ರೀಯ ಹೆದ್ದಾರಿಯಿಂದ ಸ.ಹಿ.ಪ್ರಾ ಶಾಲೆಯ ವರೆಗೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಬಾಗೆ ರಾಷ್ಟ್ರೀಯ ಹೆದ್ದಾರಿಯಿಂದ ಹಾಲಿನ ಡೈರಿ ವರೆಗೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಬಾಗೆ ರಾಷ್ಟ್ರೀಯ ಹೆದ್ದಾರಿಯಿಂದ ನರ್ಸ್ ಕ್ವಾಟಸ್, ಗ್ಯಾಸ್ ಗೋಡಾನ್, ಪೋಸ್ಟ್ ಆಫೀಸ್ ವರೆಗೆ ರಸ್ತೆ ಮತ್ತು ಬಾಕ್ಸ್ ಚಿರಂಡಿ ನಿರ್ಮಾಣ
ಬಾಗೆ ರಾಷ್ಟ್ರೀಯ ಹೆದ್ದಾರಿಯಿಂದ ಬಾಗೆ ಎಸ್ಟೇಟ್ ವರೆಗೆ ರಸ್ತೆ ಮತ್ತು ಬಾಕ್ಸ್ ಚಿರಂಡಿ ನಿರ್ಮಾಣ
ಗುಲಗಳಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಮೋಹಿನಿ ರವರ ಮನೆವರೆಗೆ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ
ಬಾಗೆ ರಾಷ್ಟ್ರೀಯ ಹೆದ್ದಾರಿಯಿಂದ ಓವರ್ ಹೆಡ್ ಟ್ಯಾಂಕ್ (ನಂದಿಬಾಳ್ಳು ಎಸ್ಟೇಟ್) ರಸ್ತೆ ಮತ್ತು ಬಾಕ್ಸ್
ಚರಂಡಿ ನಿರ್ಮಾಣ,
ಬಾಗೆ ರಾಷ್ಟ್ರೀಯ ಹೆದ್ದಾರಿ (ಪೆಟ್ರೋಲ್ ಬಂಕ್) ಯಿಂದ ಹಳೆಬಾಗೆ ವರೆಗೆ ಮುಂದುವರೆದ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ.
ಈ ಸಂದರ್ಭದಲ್ಲಿ ಬಾಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಗೋಪಿನಾಥ್ , ಸದಸ್ಯರಾದ ಚಾರ್ಲ್ಸ್ , ಅಭಿವೃದ್ದಿ ಅಧಿಕಾರಿಗಳಾದ ಚಿನ್ನಸ್ವಾಮಿ ಹಾಜರಿದ್ದು ಮನವಿ ಪತ್ರ ನೀಡಿದರು.
previous post
next post