ವರದಿ ರಾಣಿ ಪ್ರಸನ್ನ
ಇನ್ನು ಒಂದು ವಾರದಲ್ಲಿ ಜನನ ಪ್ರಮಾಣ ಪತ್ರ
ಜನನ ಪ್ರಮಾಣ ಪತ್ರ ಪಡೆಯಲು ತಿಂಗಳಾನುಗಟ್ಟಲೆ ಕಾಯುತ್ತಿದ್ದವರಿಗೆ ಇನ್ನೂ ಮುಂದೆ ಒಂದೇ ವಾರದಲ್ಲಿ ಜನ್ಮ ದಾಖಲೆಗಳು ದೊರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಆಸ್ಪತ್ರೆ, ಮನೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳ ಜನನ ಪ್ರಮಾಣ ಪತ್ರ ವಿತರಿಸುವಾಗ ಇ-ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15 ದಿನದ ಬದಲಾಗಿ 7 ದಿನಕ್ಕೆ ಇಳಿಕೆ ಮಾಡಿದೆ. ಅರ್ಜಿ ಸಲ್ಲಿಸಿದ ಏಳು ದಿನದಲ್ಲಿ ಮಕ್ಕಳ ಜನ್ಮ ದಾಖಲೆ ಪೋಷಕರ ಕೈ ಸೇರಲಿವೆ. ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಯಿಂದಾಗಿ ಸಕಾಲದ ಸಮಯದ ಮಿತಿಯನ್ನು ಕಡಿಮೆ ಮಾಡಬಹುದು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಶಿಫಾರಸ್ಸು ಮಾಡಿದೆ. ಜನನ ಮರಣ ನೋಂದಣಿಯ ಪ್ರಕ್ರಿಯೆಯ ಹಂತದಲ್ಲಿ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅವರ ನಿರ್ದೇಶಕರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಜನನ ಪ್ರಮಾಣ ಪತ್ರವನ್ನು ವಿತರಿಸುವಾಗ ಅಧಿಕಾರಿಗಳು ಯಾವುದೇ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
previous post
next post