ಈ ಬಾರಿಯ ಸಕಲೇಶಪುರ ದನಗಳ ಜಾತ್ರೆಯು ದೊಡ್ಡ ಅವಘಡಕ್ಕೆ ರಹದಾರಿ ಎಂಬಂತೆ ತೋರುತ್ತಿದೆ ಎಂದು ಮಲೆನಾಡು ರಕ್ಷಣಾ ಸೇನೆ ತಿಳಿಸಿದೆ.
ಸಕಲೇಶಪುರದ ಇತಿಹಾಸ ಪ್ರಸಿದ್ಧ ಸಕಲೇಶಪುರ ಸ್ವಾಮಿ ದಿವ್ಯ ರಥೋತ್ಸವಕ್ಕೆ ತನ್ನದೇ ಆದ ವಿಶೇಷ ಸ್ಥಾನಮಾನ ಇದ್ದು ಈ ರಥೋತ್ಸವಕ್ಕೆ ರಾಜ್ಯದ ಹಲವು ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ.
ಸ್ವಾಮಿಯ ದಿವ್ಯ ರಥೋತ್ಸವದಲ್ಲಿ ಭಾಗಿಯಾದ ಭಕ್ತ ಸಮೂಹ ತೇರನ್ನು ಎಳೆದು, ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ಊರುಗಳಿಗೆ ತೆರಳುವ ಮುನ್ನ ದನಗಳ ಜಾತ್ರೆಗೆ ( ಈಗ ಜನಗಳ ಜಾತ್ರೆ) ಭೇಟಿ ನೀಡಿ ಜಾತ್ರೆ ಸುತ್ತಾಡಿ ಹೋಗುವುದು ರೂಡಿ. ಆದರೆ ಈ ಬಾರಿಯ ಜಾತ್ರೆ ಸಾರ್ವಜನಿಕರಿಗೆ ಸುರಕ್ಷತೆ ಇರುವಂತೆ ಕಾಣುತ್ತಿಲ್ಲ.
ಈ ಬಾರಿ ಜಾತ್ರೆ ನಡೆಸಲು ನಿಶ್ಚಯಿಸಿರುವ ಜಾಗದಲ್ಲಿ ದೊಡ್ಡ ಅವಘಡ ಸಂಭವಿಸುವ ಲಕ್ಷಣಗಳು ನೇರವಾಗಿ ಗೋಚರ ಆಗುತ್ತಿದೆ.
ಪುರಸಭೆಯ ಅಧಿಕಾರಿಗಳು ಈ ಬಾರಿಯ ಜಾತ್ರಾಮಹೋತ್ಸವವನ್ನು ಕೃಷಿ ಭೂಮಿ, ಮುಳುಗಡೆ ಜಾಗ ಮತ್ತು ಇಟ್ಟಿಗೆ ಕುಯ್ಯುತ್ತಿದ್ದ ಜಾಗದಲ್ಲಿ ಕೇವಲ ಕೆಲವು ದಿನಗಳ ಹಿಂದೆ ಮಣ್ಣು ಹಾಕಿ ತಯಾರು ಮಾಡಿರುವ ಜಾತ್ರಾ ಮಹೋತ್ಸವಕ್ಕೆ ಯೋಗ್ಯವಲ್ಲದ ಸ್ಥಳದಲ್ಲಿ ನಡೆಸಲು ನಿಶ್ಚಯಿಸಿರುವುದು ಸೂಕ್ತವಲ್ಲ. ಇದನ್ನು ನಾವು ಖಂಡಿಸುತ್ತೇವೆ ಏಕೆಂದರೆ ಜಾತ್ರೆಯು ಒಂದೆರಡು ದಿನಗಳು ನಡೆಯುವ ಕಾರ್ಯಕ್ರಮವಲ್ಲ. ಹಲವು ದಿನಗಳು ನಡೆಯಲಿದ್ದು ಪ್ರತಿದಿನವೂ ಜನಗಳ ಪ್ರವಾಹವೇ ಇರುತ್ತದೆ. ಇಲ್ಲಿ ಜಾಯಿಂಟ್ ವೀಲ್, ಟೊರೊ ಟೊರೊ ಗಳು ಕಾರ್ಯನಿರ್ವಹಿಸಲಿದ್ದು ಈ ನೆಲದಲ್ಲಿ ಇವುಗಳು ಭಾಗವಹಿಸುವುದು ಅಪಾಯಕಾರಿಯಾಗಿದೆ. ಯಾಕೆಂದರೆ ಹೊಳೆಯ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿರುವ ಈ ಜಾಗಕ್ಕೆ ಇತ್ತೀಚೆಗೆ ಹೊಸದಾಗಿ ಮಣ್ಣು ತುಂಬಲಾಗಿದ್ದು ಜಾತ್ರೆ ನಡೆಸಲು ಈ ಜಾಗ ಯೋಗ್ಯ ಆಗಿರುವುದಿಲ್ಲ. ಒಂದು ವೇಳೆ ಜಾತ್ರಾಮಹೋತ್ಸವ ನಡೆಸಿದ್ದೆ ಆದಲ್ಲಿ ಒಂದು ದೊಡ್ಡ ಅವಘಡ ಸಂಭವಿಸುವುದು ಕಟ್ಟಿಟ್ಟ ಬುತ್ತಿ.
ಆದುದರಿಂದ ಈ ಮೂಲಕ ತಮಗೆ ತಿಳಿಸುವುದೇನೆಂದರೆ ಯವುದೇ ಕಾರಣಕ್ಕೂ ಹೇಮಾವತಿ ನದಿಯ ಪಕ್ಕದಲ್ಲಿ ಇರುವ ಯೋಗ್ಯವಲ್ಲದ ಈ ಜಾಗದಲ್ಲಿ ಜಾತ್ರೆಯನ್ನು ನಡೆಸಲು ಅನುಮತಿಯನ್ನು ನೀಡಬಾರದು. ಕೂಡಲೇ ಇದನ್ನು ತಡೆಯಬೇಕು. ಇಲ್ಲವಾದಲ್ಲಿ ಮುಂದೆ ಸಂಭವಿಸ ಬಹುದಾದ ಅನಾಹುತಗಳಿಗೆ ತಾಲ್ಲೂಕು ಆಡಳಿತ ವರ್ಗ ಮತ್ತು ಜಿಲ್ಲಾಡಳಿತ ವರ್ಗವೇ ನೇರ ಹೊಣೆಯಾಗಲಿದ್ದೀರಿ ಎಂದು ತಿಳಿಸಲು ಇಚ್ಚಿಸುತ್ತೇವೆ. ಮಲೆನಾಡು ರಕ್ಷಣಾ ಸೇನೆ ಇದಕ್ಕೆ ಸಂಪೂರ್ಣ ವಿರೋಧವಿದ್ದು ಈ ಜಾಗದಲ್ಲಿ ಜಾತ್ರೆ ನಡೆಸುವ ತೀರ್ಮಾನ ಕೈಬಿಡದಿದ್ದರೆ ಅಹೋರಾತ್ರಿ ಧರಣಿ ಕೈಗೊಳ್ಳುತ್ತೇವೆ ಎಂದು ಈ ಮೂಲಕ ತಿಳಿಸುತ್ತೇವೆ ಎಂದು ಸಾಗರ್ ಜಾನೇಕೆರೆ
ಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ ತಿಳಿಸಿದ್ದಾರೆ
previous post
next post