Blog

ಕೆಂಪೇ ಗೌಡರ ಪ್ರತಿಮೆ ಅನಾವರಣ – ಪೂರ್ವಭಾವಿ ಸಭೆ

ವರದಿ ರಾಣಿ ಪ್ರಸನ್ನ

ಸಕಲೇಶಪುರದಲ್ಲಿ ಇದೇ ಫೆಬ್ರವರಿ 13, 14 15 ರಂದು ನಡೆಯುವ  ಗುರು ತೋರಿದ ದಾರಿ ತಿಂಗಳ  ತೇರು ಶತೋತ್ತರ ರಜತ ಹುಣ್ಣಿಮೆ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ನಡೆಯಲಿದೆ ಹಾಗು  ಈ ಎಲ್ಲಾ ಕಾರ್ಯಕ್ರಮಗಳಿಗೆ ಸಕಲೇಶಪುರದ ಸರ್ವ ಜನಾಂಗದ ಬಾಂಧವರು  ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹಾಸನದ ಶ್ರೀ ಆದಿಚುಂಚನಗಿರಿ  ಶಾಖ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸೋಮವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ನಾಗರೀಕರ ಸಭೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ  ಮನವಿ ಮಾಡಿದ್ದಾರೆ.

ಮಾತನಾಡಿದ ಅವರು ಜಗದ್ಗುರು ಗುರು ತೋರಿದ ದಾರಿ ತಿಂಗಳ ಮಾವನ ತೇರು ಶತೋತ್ತರ ರಜತ ಹುಣ್ಣಿಮೆ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ

ಕಾರ್ಯಕ್ರಮವು ಫೆಬ್ರವರಿ 13, ಸಕಲೇಶಪುರದ ಮುಖ್ಯ ರಸ್ತೆಯ ಮೂಲಕ ವೇದಿಕೆ ತಲುಪಲಿದ್ದು ಪ್ರಾತಃಸ್ಮರಣೀಯ ಮಹಾಗುರುಗಳ ಸಂಸ್ಕರಣೆ ಹಾಗೂ ಪರಮಪೂಜ್ಯ ಜಗದ್ಗುರುಗಳಿಗೆ ಗುರುವಂದನೆ ರಜತ ತುಲಾಭಾರ ನೆರವೇರಲಿದ್ದು ಸಂಜೆ 5-30 ರಿಂದ ಬಿಜಿಎಸ್ ಬೆಳದಿಂಗಳೋತ್ಸವ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.


14 ಮತ್ತು 15 ರಂದು ಮೂರು ದಿನಗಳ ಕಾಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 13 ರ ಬೆಳಗ್ಗೆ ಸ್ವಾಮೀಜಿಯವರ ಪುರ ಪ್ರವೇಶ, ಶ್ರೀ ಸಕಲೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಹೊಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ನಡೆಯುವ ಹೋಮ, ಹವನ ಮತ್ತು ಹೇಮಾವತಿ ನದಿಯಲ್ಲಿ ನಡೆಯಲಿರುವ ಗಂಗಾರತಿ ಕಾರ್ಯಕ್ರಮದಲ್ಲಿ ಪರಮಪೂಜ್ಯರು ಭಾಗಿಯಾಗಲಿದ್ದಾರೆ 14 ರಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನಂತರ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಲೋಕಾರ್ಪಣೆಯನ್ನು ನೆರವೇರಿಸಿ 1008 ಪೂರ್ಣಕುಂಭಗಳನ್ನು ಹೊತ್ತ ಸುಮಂಗಲಿಯರ ಸ್ವಾಗತದೊಂದಿಗೆ ಜಗದ್ಗುರುಗಳ ಮೆರವಣಿಗೆ ಹಾಗೂ ನಾಡಿನ ಹೆಸರಾಂತ ಕಲಾತಂಡಗಳೊಂದಿಗೆ

ರಾಜ್ಯ ಮಟ್ಟದ ಕೃಷಿಮೇಳ ಕಾರ್ಯಕ್ರಮವು ಫ 15 ರಂದು  ನಡೆಯಲಿದ್ದು ಈ ಭಾಗದ ಕೃಷಿಕರು ಹಾಗೂ ಬೆಳೆಗಾರರಿಗೆ ಹೆಚ್ಚಿನ ಮಾಹಿತಿ ಈ ಕೃಷಿಮೇಳದಲ್ಲಿ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಾಫಿ ನಾಡೆಂದು ಖ್ಯಾತಿ ಹೊಂದಿದ ಸಕಲೈಶ್ವರ್ಯ ಹೊಂದಿರುವ ಸಕಲೇಶಪುರ ಪಟ್ಟಣಕ್ಕೆ ಮಹಾಗುರುಗಳು ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಎಲ್ಲಾ ಸಮಸ್ತ  ಹಾಗೂ ನಾಗರೀಕ ಬಂದುಗಳು ,ಜನ ಪ್ರತಿನಿದಿಗಳು, ಅಪಾರ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕಲಿಗರ ಮರಗತ್ತೂರು ಉಮೇಶ್, ಉಪಾದ್ಯಕ್ಷ ನಂದಿ ಕೃಪ ದೇವರಾಜು, ದೊಡ್ಡದೀಣೆ ಕೆ.ಎಲ್ ಸೋಮಶೇಖ್, ಚೈಮಾರುತಿ ದೇವರಾಜು, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಮೂಗಲಿ ಧರ್ಮಪ್ಪ, ಯೆಡೆಹಳ್ಳಿ ಆರ್ ಮಂಜುನಾಥ್, ರೋಟರಿ ಕ್ಲಬ್ ಅಧ್ಯಕ್ಷ ವೀರೇಂದ್ರ ಕುಮಾರ್, ಅರುಣ್ ರಕ್ಷಿದಿ, ಪುರಸಭೆ ಮಾಜಿ ಅದ್ಯಕ್ಷ ಕಾಡಪ್ಪ, ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ, ಚಾನಕೆರೆ ಸಾಗರ್ ಇತರರು ಇದ್ದರು.

Related posts

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಜಯ ಲಕ್ಷ್ಮಿ

Bimba Prakashana

ಮನೆ ಖಾಲಿ ಮಾಡುವಂತೆ ರಿಯಲ್ ಎಸ್ಟೇಟ್ ಮಾಫಿಯದ ದೌರ್ಜನ್ಯ

Bimba Prakashana

ಆಲೂರುನಲ್ಲಿ ತೆಂಕಲ ಗೂಡು ಸ್ವಾಮೀಜಿ ಆಶೀರ್ವಚನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More