ವರದಿ ರಾಣಿ ಪ್ರಸನ್ನ
ಬಿರಡಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಎಸ್.ಡಿ ಸತೀಶ್ ಮತ್ತು ಅವರ ಜೊತೆಯಲ್ಲಿ ಅವರ ಶ್ರೀಮತಿಯವರು ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿ
ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದಿಂದ ಸಕಲೇಶಪುರ ತಾಲ್ಲೂಕಿನ ಮಾದರಿ ಗ್ರಾಮ ಪಂಚಾಯಿತಿ ಯಾಗಿರುವ ಬಿರಡಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಎಸ್.ಡಿ ಸತೀಶ್ ಮತ್ತು ಅವರ ಜೊತೆಯಲ್ಲಿ ಅವರ ಶ್ರೀಮತಿಯವರಿಗೂ ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ.
ಸಕಲೇಶಪುರ ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿ ರಾಷ್ಟ್ರದ ರಾಜಧಾನಿಯವರೆಗೂ ಸದ್ದು ಮಾಡುತ್ತಿರುವುದು ಜಿಲ್ಲೆಯ ಹಾಗೂ ತಾಲೂಕಿನ ಹಿರಿಮೆ ಹೆಚ್ಚಿಸಿದೆ.
ಈ ಹಿಂದೆ ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಆಯೋಜಿಸಿದ್ದ ಅತ್ಯುತ್ತಮ ಗ್ರಾಮ ಆಡಳಿತ ಪ್ರಶಸ್ತಿ ಯನ್ನು ಮತ್ತು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ಪಂಚಾಯಿತಿ ಅಧ್ಯಕ್ಷ ಎಸ್.ಡಿ.ಸತೀಶ್ ಮತ್ತು ಅಭಿವೃದ್ಧಿ ಅಧಿಕಾರಿ ಗಿರೀಶ್ ಸ್ವೀಕರಿಸಿದ್ದರು. ಒಟ್ಟಾರೆ ಈ ಜೋಡಿ ಸಕಲೇಶಪುರದ ಗ್ರಾಮಾಡಳಿತದ ಇತಿಹಾಸದಲ್ಲಿ ಹೊಸ ಅಲೆ ಎಬ್ಬಿಸಿದೆ ಮತ್ತು ಬೇರೆಯವರಿಗೆ ಸ್ಪೂರ್ತಿದಾಯಕವಾಗಿದ್ದಾರೆ.
ಬಿರಡಹಳ್ಳಿ ಗ್ರಾಮ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಗಿರೀಶ್ ರವರು ಕವಿ ಮನ ಸ್ಸಿನ ಅಧಿಕಾರಿಯಾಗಿದ್ದು ಪಂಚಾ ಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಗಳನ್ನು ವ್ಯವಸ್ಥಿತವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರಿಗೆ ಬೆನ್ನೆಲುಬಾಗಿ ಪಂಚಾ ಯಿತಿ ಅಧ್ಯಕ್ಷ ಎಸ್.ಡಿ ಸತೀಶ್ ಸೇರಿದಂತೆ ಉಪಾಧ್ಯಕ್ಷರು, ಸದ ಸ್ಯರು, ಕಾರ್ಯದರ್ಶಿ ಸೇರಿದಂತೆ ಇಡೀ ಸಿಬ್ಬಂದಿ ವರ್ಗದವರು ಸಂಪೂರ್ಣವಾಗಿ ಪೂರಕವಾದ ಸಹಕಾರ ನೀಡುತ್ತಿದ್ದಾರೆ.
previous post
next post