Blog

ಕಾರ್ಜುವಳ್ಳಿ ಮಠದಲ್ಲಿ ವಾರ್ಷಿಕೋತ್ಸವ

ಆಲೂರು: ವೀರಶೈವ ಧರ್ಮ ಪ್ರಾಚೀನ. ಇದರ ಇತಿಹಾಸ ಪರಂಪರೆ ಅಪೂರ್ವ ಲೋಕೋತ್ತರ ಉಜ್ವಲ ಬದುಕಿಗೆ ವೀರಶೈವ ಧರ್ಮ ದಾರಿದೀಪ. ಅರಿವಿನ ಆದರ್ಶಗಳ ಮೂಲಕ ಜನಮನದ ಉನ್ನತಿಗೆ ಸದಾ ಶ್ರಮಿಸುತ್ತಿದೆ ಎಂದು ಶ್ರೀ ಷ. ಬ್ರ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ತಪೋಕ್ಷೇತ್ರ ಕಡೆನಂದಿಹಳ್ಳಿ ತಿಳಿಸಿದರು.

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್‌ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯ 46ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಯ ಪಟ್ಟಾಧಿಕಾರದ 4ನೇ ವಾರ್ಷಿಕೋತ್ಸವ-ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮ-ಸಮನ್ವಯ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಜೀವ ಶಿವನಾಗಲು, ಅಂಗ ಲಿಂಗವಾಗಲು, ಭವಿ ಭಕ್ತನಾಗಲು ಸಂಸ್ಕಾರ ಕಲಿಸಿಕೊಟ್ಟ ಧರ್ಮ ವೀರಶೈವ ಧರ್ಮ ಜಗದಲ್ಲಿ ಹಲವಾರು ಧರ್ಮಗಳು ಉದಯಿಸಿ, ಜನಸಮುದಾಯದ ಬಾಳಿಗೆ ಬೆಳಕು ತೋರಿವೆ. ಪರಶಿವನ ಪಂಚಮುಖಗಳಿಂದ ಪರಮ ಪಂಚಾಚಾರ್ಯರು ಭೂ ಮಂಡಲದಲ್ಲಿ ಅವತರಿಸಿ ವೀರಶೈವ ಸಿದ್ಧಾಂತವನ್ನು ಸಂಸ್ಥಾಪಿಸಿ ಸಕಲರಿಗೂ ಒಳಿತನ್ನು ಉಂಟು ಮಾಡಿದೆ. ಪಂಚಪೀಠಗಳು ವೀರಶೈವ ಧರ್ಮದ ಮೂಲ ಕೇಂದ್ರಗಳಾಗಿವೆ ಎಂದರು. ಮಠಗಳು ಸಮಾಜ ಕಾಪಾಡುವ ಕೇಂದ್ರಗಳು. ಅವುಗಳನ್ನು ಕಾಪಾಡುವ ಹೊಣೆ ಸಮಾಜಗಿರುತ್ತದೆ. ಮಠ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಕಾರ್ಜುವಳ್ಳಿ ಹಿರೇಮಠದ ಪೂಜ್ಯರ ಅಗಲಿಕೆಯಿಂದ ಗ್ರಾಮಕ್ಕೆ, ಮಠಕ್ಕೆ, ಭಕ್ತರಿಗೆ ತುಂಬಲಾರದ ನಷ್ಟವಾಗಿತ್ತು. ಮಠದ ಪೀಠಾಧ್ಯಕ್ಷರಾಗಿ ಪಟ್ಟಾಧಿಕಾರ ಸ್ವೀಕರಿಸಿದ  ನೂತನ ಶ್ರೀ ಸದಾಶಿವ ಶಿವಾಚಾರ್ಯ ಶ್ರೀಗಳ ಆಗಮನದಿಂದ ನಾಲ್ಕು ವರ್ಷಗಳಲ್ಲಿ ಶ್ರೀ ಸಂಸ್ಥಾನ ಹಿರೇಮಠ ಧಾರ್ಮಿಕ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಹಾಸನ ಆದಿಚುಂಚನಗಿರಿ ಶಾಖಾಮಠ ಶ್ರೀ ಶಂಭುನಾಥ ಸ್ವಾಮಿಗಳು ಮಾತನಾಡಿ,  ನಮ್ಮ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ. ದೇಶದ ಉಳಿವಿಗಾಗಿಯಾದರೂ ಪ್ರತಿಯೊಬ್ಬರು ತಮ್ಮ ಮಕ್ಕಳಲ್ಲಿ ದೇಶಿ ಸಂಸ್ಕೃತಿ ಬೆಳೆಸುವ ಕೆಲಸ ಮಾಡಬೇಕಾದ ಅಗತ್ಯವಿದೆಮನುಷ್ಯನಿಗೆ ಸಂಸ್ಕಾರ ಮುಖ್ಯ. ಆದ್ದರಿಂದ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಸುವ ಮತ್ತು ಧರ್ಮದ ಬಗ್ಗೆ ಜನರಲ್ಲಿ ಜಾಗತಿ ಮೂಡಿಸುವ ಸಲುವಾಗಿ ಪ್ರವಚನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು. ಯುವ ಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸುವ ಜತೆಗೆ ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಇಂದು ನಡೆಯಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.


ಒಂದೇ ನಾಣ್ಯದ ಎರಡು ಮುಖ : ಕಾರ್ಜುವಳ್ಳಿ ಮಠದ ಶ್ರೀ ಸದಾಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣಕಾ ಚಾರ್ಯರು ಭಕ್ತರ ಧರ್ಮವನ್ನು ಅಳೆದು, ಧರ್ಮ ವನ್ನು ಬಿತ್ತಿ ಭಕ್ತರ ಬದುಕನ್ನು ಬಂಗಾರ ಗೊಳಿಸಿದ್ದಾರೆ. ಸಮಾಜವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡಿದ್ದಾರೆ ಎಂದರು. ಗುರು ಮತ್ತು ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎಲ್ಲಿಯವರೆಗೆ ಗುರು ಶಿಷ್ಯರ ಸಂಬಂಧ ಅವಿನಾಭಾವವಾಗಿರುತ್ತದೆಯೋ ಧರ್ಮವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷರು  ಕೊಟ್ರೇಶ್ ಎಸ್. ಉಪ್ಪಾರ್ ಅವರಿಂದ ಮಕ್ಕಳ ಸಾಂಸ್ಕೃತಿಕ ಕಲೆಗಳ ಅನಾವರಣದಲ್ಲಿ ಪೋಷಕರ ಪಾತ್ರ ಎಂಬ ವಿಶೇಷ ಉಪನ್ಯಾಸ ನೀಡಿದರು, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ ಎಸ್ ಮಂಜೇಗೌಡ ಅವರಿಂದ ತನಿಖೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು,

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ
ಶ್ರೀ ಷ. ಬ್ರ ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಶ್ರೀಗುರು ಪಟ್ಟಾಧಿಕಾರದ ಚತುರ್ಥ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ತಪೋಕ್ಷೇತ್ರ ಕಡೆನಂದಿಹಳ್ಳಿ ಇವರ ನೇತೃತ್ವದಲ್ಲಿ ಪವಮಾನ ಹೋಮ-ಸರ್ಪಸೂಕ್ತ ಹೋಮ, ಪೂರ್ಣಾಹುತಿ, ರಕ್ಷಾಧಾರಣೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಶ್ರೀ ರುದ್ರಸೂಕ್ತ ಪಾರಾಯಣ ಪೂರ್ವಕ ಭಸ್ಮಜಲಾಭಿಷೇಕ, ಅಂಕುರಾರ್ಪಣೆ, ಶ್ರೀ ಪರಮೇಶ್ವರ ಅಲಂಕಾರ, ಬಿಲ್ವಾರ್ಚನೆ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀಸೂಕ್ತ ಪಾರಾಯಣ ಪೂರ್ವಕ ಕುಂಕುಮ ಜಲಾಭಿಷೇಕ, ಮಲ್ಲಿಕಾ ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆದೆವು, ಮಠದ ಆವರಣದಲ್ಲಿರುವ ಶ್ರೀ ಇಷ್ಟನಾಗ, ಸಿದ್ದಿನಾಗ, ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಸರ್ವಸೂಕ್ತ ಪಾರಾಯಣ ಪೂರ್ವಕ ಕ್ಷೀರಾಭಿಷೇಕ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀಸ್ಕಂದ ಪುರಾಣೋಕ್ತ ಶ್ರೀ ಸುಬ್ರಹ್ಮಣ್ಯ ಸಹಸ್ರನಾಮ ಸ್ತೋತ್ರ ಪಾರಾಯಣ ನಡೆದೆವು. ನಂತರ ಶ್ರೀ ಷ.ಬ್ರ ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಶ್ರೀಗುರು ಪಟ್ಟಾಧಿಕಾರದ ಚತುರ್ಥ ವಾರ್ಷಿಕೋತ್ಸವದ ಅಂಗವಾಗಿ ಶ್ರೀಗಳವರಿಗೆ ಹರಿದ್ರಾಲೇಪನ, ಮಹಾಭಿಷೇಕ, ರಾಜೋಪಚಾರಯುಕ್ತ ಪಾದಪೂಜೆ, ಶಿಷ್ಯಸದಕ್ತರಿಂದ ಭಕ್ತಿ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೇಲೂರಿನ ಕುಮಾರಿ ತುಷಾರ ಪಾಟೀಲ್ ಭರತನಾಟ್ಯ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಸಮಾರಂಭದಲ್ಲಿ ರಾಧಮ್ಮ ಜನಸ್ಪಂದನ ಸಂಸ್ಥಾಪಕ ಹೇಮಂತ್, ಆಲೂರು ಲಯನ್ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಡಿ. ಜೆ  ಪ್ರವೀಣ್, ಸಂಕಲಾಪುರಮಠದ ಝಾನ್ಸಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಹರೀಶ್, ತನಿಖೆ ಪಾಕ್ಷಿಕ ಪತ್ರಿಕೆ ಸಂಪಾದಕರು ದೊರೆ ಹೊಸೂರು ಇವರುಗಳು ಶ್ರೀ ಮಠದಿಂದ ನೀಡುವ ಗೌರವ ಗುರುರಕ್ಷೆಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಹಾಸನ ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮಿಜಿ, ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ, ಆಲೂರು ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಖಜಾಂಚಿ ವೈ. ಬಿ. ಟೀಕರಾಜು, ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ  ಕೆ. ಎಸ್. ಮಂಜೇಗೌಡ ಕಣದಹಳ್ಳಿ, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪರಮೇಶ್ ಆನೆಗಳಲೆ, ಕೆ. ಬಿ. ಪ್ರೇಮರಾಜ್, ಕರಹಳ್ಳಿ, ಜಗದೀಶ್ ಶಾಸ್ತ್ರಿಗಳು, ಮಾವನೂರು, ಶಶಿಕುಮಾರ್ ಶಾಸ್ತ್ರಿಗಳು ವಿರುಪಾಪುರ, ಕಣತೂರು ಕಿರಣ್ ಕಾನ್ವೆಂಟ್  ಸಂಸ್ಥಾಪಕ ನಮೃತಾ ಹೊನೇಶ್ ಹಾಸನ, ವಿಜಯ ಸಂಗಮೇಶ್ವರ, ಬೇಬಿ ಪ್ರಕಾಶ್, ಕಾರ್ಜುವಳ್ಳಿ

Related posts

ಮನೆ ಖಾಲಿ ಮಾಡುವಂತೆ ರಿಯಲ್ ಎಸ್ಟೇಟ್ ಮಾಫಿಯದ ದೌರ್ಜನ್ಯ

Bimba Prakashana

ಸ್ವಾವಲಂಬಿ ಗ್ರಾಮ ಪಂಚಾಯತ್ ಆಗಿ ಬಿರಡ ಹಳ್ಳಿ

Bimba Prakashana

ವಕೀಲರ ದಿನ ಆಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More