ಆಲೂರು : ಆಲೂರು ರೈಲ್ವೆ ನಿಲ್ದಾಣದಲ್ಲಿ ರೈಲು
ನಿಲುಗಡೆಯನ್ನು ಪುನ: ಪ್ರಾರಂಭಿಸುವಂತೆ, ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾತ್ಸವರವರನ್ನು ಡಿ.18 ರಂದು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅತಿ ಶೀಘ್ರದಲ್ಲಿ ನಿಲುಗಡೆಗೆ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆಂದು ರಾಧಮ್ಮ ಜನಸ್ಪಂದನ ಸಂಸ್ಥೆ ಅಧ್ಯಕ್ಷ ಹೇಮಂತಕುಮಾರ್ ತಿಳಿಸಿದ್ದಾರೆ.
ಆಲೂರು ಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೆಂಬರ್ 4ರಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಅಲೂರು ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದ ಆದೇಶವನ್ನ ರದ್ದುಪಡಿಸಿ ಸೇವೆಯನ್ನು ಕೊನೆಗೊಳಿಸಿದ್ದಾರೆ ಈ ಹಿಂದೆ ಖುದ್ದಾಗಿ ನಮ್ಮ ಸಂಸ್ಥೆಯ ರಾಧಾಮ ಜನಸ್ಪಂದನ ವತಿಯಿಂದ ಕಳೆದ ವರ್ಷ 20234ರ ಡಿಸೆಂಬರ್ ತಿಂಗಳಲ್ಲಿ ಬೇಲೂರು ಕ್ಷೇತ್ರದ ಶಾಸಕರಾದ ಹಾಗೂ ಅಂದಿನ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿದ್ದ ಹೆಚ್. ಕೆ ಸುರೇಶ್ ಅವರನ್ನು ಒಳಗೊಂಡಂತೆ ಕೇಂದ್ರಾ ರೈಲ್ವೆ ಮಂತ್ರಿಗಳನ್ನ ಭೇಟಿ ಮಾಡಿ ಆಲೂರು ತಾಲೂಕು ರೈಲ್ವೆ ನಿಲ್ದಾಣಕ್ಕೆ ನಿಲುಗಡೆ ತರುವುದರಲ್ಲಿ ಯಶಸ್ವಿಯಾಗಿದ್ದವು ಆ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಆರು ತಿಂಗಳ ಮಟ್ಟಿಗೆ ರೈಲು ನಿಲುಗಡೆಗೆಂದು ಫೆಬ್ರವರಿಯಲ್ಲಿ ಆದೇಶವನ್ನು ರೈಲ್ವೆ ಇಲಾಖೆ ಹೊರಡಿಸಿತ್ತು ನಂತರ ಮತ್ತೊಮ್ಮೆ ನಾವು ದೆಹಲಿಗೆ ಹೋಗಿ ಈಗಿನ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರ ಸಂಪರ್ಕಿಸಿ ಅವರಿಗೆ ಮನವರಿಕೆ ಮಾಡಿಕೊಟ್ಟು ಮೂರು ತಿಂಗಳು ಕಾಲ ನಿಲುಗಡೆ ಆದೇಶವನ್ನು ತರುವುದರಲ್ಲಿ ಯಶಸ್ವಿಯಾಗಿದ್ದವು ಎಲ್ಲ ಹೋರಾಟದ ಮಧ್ಯೆ ರೈಲ್ವೆ ಇಲಾಖೆ ಡಿಸೆಂಬರ್ 4ರಂದು ಏಕಾಏಕಿ ರೈಲು ಸೇವೆಯನ್ನು ರದ್ದು ಪಡಿಸಲಾಗಿ ತಾಲೂಕಿನ ಸಮಸ್ತ ನಾಗರಿಕರಿಗೆ ತೊಂದರೆಗೆ ಒಳಪಟ್ಟಿದ್ದರು ಮತ್ತೊಮ್ಮೆ ನಾವು ಈ ಆದೇಶವನ್ನು ವಿರೋಧಿಸಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವತ್ಸವ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮತ್ತೊಮ್ಮೆ ಪುನರ್ ಪರಿಶೀಲಿಸಿ ಎಂದು ಬೇಡಿಕೆ ಇಟ್ಟಾಗ ರೈಲ್ವೆ ಕಮರ್ಷಿಯಲ್ ಡಿಪಾರ್ಟೆಂಟ್ ಇಂತಹ ಬೇಡಿಕೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ ಆದಾಯವಿಲ್ಲದ ನಿಲ್ದಾಣವನ್ನು ನಿಲುಗಡೆಗಾಗಿ ಆದೇಶವನ್ನು ಕೊಡಲು ರೈಲ್ವೆ ಇಲಾಖೆಯ ನಿಯಮದ ಪ್ರಕಾರ ಆಗುವುದಿಲ್ಲ ಎಂದು ನಮಗೆ ಸ್ಪಷ್ಟಪಡಿಸಿದರು ಆದರೆ ನಾವು ಸಮಗ್ರವಾಗಿ ರೈಲ್ವೆ ಇಲಾಖೆಯ ಅಧ್ಯಯನ ಮಾಡಿ ದೇಶದಲ್ಲಿ ನೂರಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಆದಾಯವಿಲ್ಲದಿದ್ದರೂ ನಿಲುಗಡೆ ಆಗುತ್ತಿದೆ ಅಂಕಿ ಅಂಶಗಳ ಪ್ರಕಾರ ಸಮರ್ಪಕವಾಗಿ ವಿವರಣೆಯನ್ನು ನೀಡಿದೆ ಜೊತೆಗೆ ನಮ್ಮ ರಾಜ್ಯದ ಕೆಲವು ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಕೂಡ 6,000 ಕ್ಕಿಂತ ಕಡಿಮೆ ಆದಾಯವಿದ್ದರೂ ಕೂಡ ನಿಲುಗಡೆ ಇದೆ ನಮ್ಮ ತಾಲೂಕಿಗೆ ಏಕೆ ಅನ್ಯಾಯ ನಿಮ್ಮ ನಿಯಮದ ಪ್ರಕಾರ ಎಂದು ಪ್ರಶ್ನಿಸಿದಾಗ ಅವರ ಪುನರ್ ಪರಿಶೀಲನೆ ಮಾಡಿ ಮೂರು ತಿಂಗಳ ಮಟ್ಟಿಗೆ ಅವರ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ನಿಲುಗಡೆ ಆದೇಶವನ್ನು ಮಾಡಿಕೊಡುತ್ತೇವೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ,
ಜೊತೆಗೆ ಹಾಸನ ಕ್ಷೇತ್ರದ ಸಂಸದರ ವಿಶೇಷ ಮನವಿಯನ್ನು ಕೇಂದ್ರ ರೈಲ್ವೆ ಮಂತ್ರಿಗಳಿಗೆ ಸಲ್ಲಿಸಿದರೆ ಶಾಶ್ವತವಾಗಿ ರೈಲು ನಿಲ್ದಾಣಗಳಿಗೆ ನಿಲುಗಡೆ ಮಾಡಿಕೊಡಬಹುದಾಗಿದೆ ಎಂದು ಹೇಳಿದ್ದಾರೆ ನಮ್ಮ ಕ್ಷೇತ್ರದ ಸಂಸದರನ್ನು ದೂರವಾಣಿ ಮುಕಾಂತರ ಸಂಪರ್ಕಿಸಿ ಅವರ ಸಹಾಯವನ್ನು ಪಡೆದು ಅವರಿಂದ ಕಾಗದಪತ್ರವನ್ನು ಸಹ ಪಡೆದು ಹುಬ್ಬಳ್ಳಿ ರೈಲ್ವೆ ಇಲಾಖೆ ತಲುಪಿಸಿರುವೆ ಇದಕ್ಕೆ ಸ್ಪಂದಿಸಿರುವ ರೈಲ್ವೆ ಇಲಾಖೆ ಅಧಿಕಾರಿಗಳಾದ ಸೆಕ್ರೆಟರಿ ಸುನಿಲ್ ಮತ್ತು ಸತ್ಯಪ್ರಕಾಶ್ ಶಾಸ್ತ್ರಿ, ಕಮರ್ಷಿಯಲ್ ಡಿಪಾರ್ಟೆಂಟ್ ಮುಖ್ಯಸ್ಥರು ಹಾಗೂ ನಮ್ಮ ಕ್ಷೇತ್ರದ ಸಂಸದರಿಗೆ ವಿಶೇಷ ಧನ್ಯವಾದಗಳು ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಧಮ್ಮ ಜನಸ್ಪಂದನ ಸಂಸ್ಥೆಯ ನಿರ್ದೇಶಕರುಗಳಾದ ನವೀನ್ ಬೈರಾಪುರ ಹಾಗೂ ಕಿರಣ್ ಹಾಜರಿದ್ದರು.
previous post
next post