ಕಾಫಿ ಬೆಳೆ ಉತ್ತೇಜನಕ್ಕೆ ನೆರವು:
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬರವಸೆ.
ಸಕಲೇಶಪುರ: ಕಾಫಿ ಬೆಳೆಗಾರರ ಸರ್ವ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ, ಸರ್ವ ಸಮಸ್ಯೆ ಬಗೆಹರಿಸಲು ಮುಂದಾಗುತ್ತದೆ ಎಂದು ಕೇಂದ್ರ ಗಣಿ ಮತ್ತು ಬೃಹತ್ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ರಾಜ್ಯ ಕಾಫಿ ಬೆಳೆಗಾರರ ಸಮ್ಮೇಳನದಲ್ಲಿ ಮಾತನಾಡಿದ ಅವರು,ಕಾಫಿ ಬೆಳೆಯನ್ನು ಮುಕ್ತಮಾರುಕಟ್ಟೆಗೆ ತೆರೆದುಕೊಳ್ಳಲು ಎಚ್.ಡಿ ದೇವೆಗೌಡರ ಶ್ರಮವಿದೆ.
ಆದರೆ ಬೆಳೆಗಾರರ ಸಾಕಷ್ಟು ಸಮಸ್ಯೆಗಳಿಗೆ ಪ್ರಸಕ್ತ ಸರ್ಕಾರ ಸ್ಪಂದಿಸುತ್ತಿದೆ. ಕಾಡಾನೆ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಗಂಬೀರವಾಗಿ ಪರಿಗಣಿಸಿದೆ ಎಂದರು
ಶ್ರೀಲಂಕಾ ಮಾದರಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸುವ ಬಗ್ಗೆ ಪ್ರಸ್ತಾವನೆ ಇದೆ ಮೂರು ಸಾವಿರ ಎಕ್ಕರೆ ರೈತರ ಭೂಮಿಯನ್ನು ಖರೀದಿಸಿ ಆನೆ ಧಾಮ ರಚಿಸುವ ಬಗೆಯು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಾಕಿ ಉಳಿದಿರುವಂತಹ ಹಲವು ಯೋಜನೆಗಳು ಪೂರ್ಣಗೊಳಿಸಲಾಗುವುದು ಎಂದರು.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ಗೋಯಲ್ ಮಾತನಾಡಿ,ಕಾಫಿ ಬೆಳೆಗಾರರು ಎದುರಿಸುತ್ತಿರುವ ಪ್ರತಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಬೆಳೆಯುತ್ತಿದೆ. ಸಮಸ್ಯೆಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯಲ್ಲೂ ಸ್ಪಂದಿಸಲು ಕೇಂದ್ರ ಸರ್ಕಾರ ಗಂಭೀರವಾಗಿ ಮುಂದಾಗುತ್ತದೆ
ಕಾಫಿ ಹೊಸ ಚಿನ್ನದ ಬೆಳೆಯಾಗಿ ಗೋಚರಿಸುತ್ತಿದೆ. ಕಾಫಿ ಬೆಳೆಯಿಂದ ಸುಮಾರು 10 ಸಾವಿರ ಕೋಟಿ ಆಧಾಯ ಕೇಂದ್ರ ಸರ್ಕಾರಕ್ಕೆ ಬರುತ್ತಿದೆ. ಭ್ರೀಟಿಷರು ಟೀ ಯನ್ನು ಮಾರುಕಟ್ಟೆ ಸೃಷ್ಟಿಸಲು ಉಚಿತವಾಗಿ ಹಂಚುತ್ತಿದ್ದರು. ಇಂತಹ ಪ್ರಯತ್ನಗಳು ಕಾಫಿ ಬೆಳೆಯುವವರಿಂದ ನಡೆಯ ಬೇಕು. ನಿರಂತರ ಸಂಶೋದನೆಯ ನಡೆಸುವ ಮೂಲಕ ಪ್ರಪಂಚದಲ್ಲೆ ಉತ್ತಮ ಕಾಫಿ ನಮ್ಮದಾಗ ಬೇಕು ಎಂದರು.
ಸ್ಥಗಿತಗೊಂಡಿರುವ ಇನ್ಟೀಗ್ರೇಟಡ್ ಡೇವಲಫೆಂಟ್ ಯೋಜನೆ ಮರು ಆರಂಭಿಸಲಿದ್ದೇವೆ, ಸಬ್ಸಿಡಿಗಾಗಿ 100 ಕೋಟಿ ಅನುದಾನದ ಬೇಡಿಕೆ ಇದ್ದು ಹಣಕಾಸು ಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲಿದ್ದೇನೆ ಎಂದರು.
ಬಾಕ್ಸ್:
ಕಾಡಾನೆ ಸಮಸ್ಯೆಗೆ ಉಪಗ್ರಹದ ಸಹಾಯ ಪಡೆದು, ಆನೆ ತಜ್ಞ ಸುರೇಂದ್ರ ವರ್ಮಾ ನೇತ್ರತ್ವದಲ್ಲಿ ಸಮಿತಿ ರಚಿಸಿ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಹೆಚ್ಚಿನ ಬೆಳೆಗಾರರು ಕೆನಾರ ಬ್ಯಾಂಕ್‌ನಲ್ಲಿ ಸಾಲಮಾಡಿದ್ದು ಸಾಲಸುಸ್ತಿದಾರರ ಸಹಾಯಕ್ಕಾಗಿ ಡಿಸಂಬರ್ 26,27 ರಂದು ಕಾಫಿ ಬೆಳೆಯುವ ಜಿಲ್ಲೆಗಳಾದ ಹಾಸನ,ಚಿಕ್ಕಮಗಳೂರು ಹಾಗೂ ಕೂಡಗಿನಲ್ಲಿ ಲೋಕಾಆಧಾಲತ್ ನಡೆಸಲು ಸೂಚಿಸಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳ ಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ಗೋಯಲ್ ಹೇಳಿದರು.
ಸಂಸದ ತೇಜಸ್ವಿಸೂರ್ಯ ಮಾತನಾಡಿ, ಕಾಫಿ ಬೆಳೆಗಾರರ ಪ್ರತಿ ಸಮಸ್ಯೆಗೂ ನಾನು ಸದಾ ಕೈಜೋಡಿಸುತ್ತಿದ್ದೇನೆ. ಹೊರಪ್ರಪಂಚಕ್ಕೆ ಕಾಫಿ ಬೆಳೆಗಾರರು ಶ್ರೀಮಂತರು ಎಂಬ ಭಾವನೆ ಇದೆ. ಆದರೆ, ಇದು ಸತ್ಯವಲ್ಲ. ದೇಶದಲ್ಲಿ ಕಾಫಿಬೆಳೆಯುವ ಶೇ 98 ರಷ್ಟು ಬೆಳೆಗಾರರು ಸಣ್ಣ ಬೆಳೆಗಾರರಾಗಿದ್ದು ಇಂದಿಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಯಾವುದೆ ಸೌಲಭ್ಯಗಳು ಸಣ್ಣ ಬೆಳೆಗಾರರಿಗೆ ದೂರಕದಾಗಿದೆ. ಆದ್ದರಿಂದ, ಸೌಲಭ್ಯ ಕಲ್ಪಿಸುವ ವೇಳೆ ಇರುವ ತಾರತಮ್ಯ ನೀತಿಯನ್ನು ರದ್ದುಗೊಳಿಸ ಬೇಕು. ಸಬ್ಸಿಡಿಗಾಗಿ 21 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ ಆದರೆ ಕೇಂದ್ರ ಸರ್ಕಾರ ನೀಡಿರುವುದು 95 ಕೋಟಿ ಮಾತ್ರ ಆದ್ದರಿಂದ ಇನ್ನೂ 100 ಕೋಟಿ ಅನುದಾನ ನೀಡಬೇಕು ಎಂದರು. ಕಾಫಿ ಮಂಡಳಿ ಅಧ್ಯಕ್ಷರು ಕಾಫಿ ಬೆಳೆಗಾರರ ವಲಯದಿಂದ ಬಂದಿದ್ದರು ಇವರಿಗೆ ಅಧಿಕಾರವೇ ಇಲ್ಲದಾಗಿದೆ. ಆದ್ದರಿಂದ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗ ಬೇಕಿದೆ.
ಇಂದು ಕಾಫಿತೋಟಗಳಿಗೆ ಕೆಲಸಕ್ಕೆಂದು ಅಸ್ಸಾಂನಿಂದ ಕಾರ್ಮಿಕರು ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಂಗ್ಲಾದೇಶದ ನುಸುಳುಕೋರರಾಗಿದ್ದಾರೆ ಈ ಸಮಸ್ಯೆ ಗಂಬೀರ ಪ್ರಮಾಣದ್ದಾಗಿದ್ದು ಕೇಂದ್ರ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಬೇಕು ಎಂದರು.
ಶಾಸಕ ಸೀಮೆಂಟ್ ಮಂಜು ಮಾತನಾಡಿ, ಇತ್ತಿಚ್ಚಿನ ವರ್ಷಗಳಲ್ಲಿ ಹವಮಾನ ವೈಪರೀತ್ಯ ಕಾಫಿ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಹಲವು ಸಮಸ್ಯೆಗಳ ಸುಳಿಯ ಮದ್ಯೆ ಅನಿವಾರ್ಯವಾಗಿ ಕಾಫಿ ಬೆಳೆಯಲಾಗುತ್ತಿದೆ. ಈ ಬಾರಿ ಧಾರಣೆ ಇದೆ ಆದರೆ, ಅತಿಯಾದ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಆದ್ದರಿಂದ, ಕಾಫಿ ಬೆಳೆ ಉಳಿಯಲು ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸ ಬೇಕು ಎಂದರು.
ಶಾಸಕ ಮಂಥರ್‌ಗೌಡ ಮಾತನಾಡಿ, ಕಸ್ತೂರಿರಂಗನ್ ವರದಿಯನ್ನು ಮರುಪರಿಶೀಲನೆಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಬೆಳೆಗಾರರ ವಲಯಕ್ಕೆ ಮಾರಕವಾಗಿರುವ ಈ ವರದಿಯನ್ನು ರದ್ದುಗೊಳಿಸ ಬೇಕು ಎಂದರು.
ಕಾಫಿಮಂಡಳಿ ಅಧ್ಯಕ್ಷ ಡಾ.ಎಚ್.ಟಿ ಮೋಹನ್‌ಕುಮಾರ್ ಮಾತನಾಡಿ, ಕಾಫಿಯನ್ನು ಸರ್ಫಸಿ ಕಾನೂನಿಂದ ಹೊರಗಿಡ ಬೇಕು,ಆನೆಹಾವಳಿ
ಶಾಶ್ವತ ಪರಿಹಾರ ಕಲ್ಪಿಸ ಬೇಕು ,ಎನ್‌ಡಿಆರ್‌ಎಫ್ ಅನುದಾನವನ್ನು 10 ರಿಂದ 50 ಸಾವಿರಕ್ಕೆ ಏರಿಕೆ ಮಾಡಬೇಕು. ಡೀಮ್ಡ್ ಅರಣ್ಯದಿಂದ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ ಆದ್ದರಿಂದ ಡೀಮ್ಡ್ ಅರಣ್ಯವನ್ನು ಕೈಬೀಡುವ ಮೂಲಕ ಕಂದಾಯ ಭೂಮಿಯನ್ನಾಗಿ ಘೋಷಿಸ ಬೇಕು. ಸೇಕ್ಷನ್ 4 ಇತ್ಯರ್ಥಗೊಳಿಸಿಕೊಡ ಬೇಕು ಎಂದು ಕೇಂದ್ರ ಮಂತ್ರಿಗಳಲ್ಲಿ ಮನವಿ ಮಾಡಿದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್‌ಕುಮಾರ್ ಮಾತನಾಡಿ, ಭಾರತದ ಕಾಫಿಗೆ ವಿಶ್ವಮಟ್ಟದಲ್ಲಿ ಹೆಸರುಗಳಿಸಲು ಇಂದಿನ ಕೇಂದ್ರ ವಾಣಿಜ್ಯ ಸಚಿವರು ಕಾರಣರಾಗಿದ್ದಾರೆ. ಕಾಫಿ ಬೆಳೆಗಾರರು ಎದುರಿಸುತ್ತಿರುವ ಹವಮಾನ,ಕಾಡಾನೆ ಸಮಸ್ಯೆ,ಮಾರುಕಟ್ಟೆ ಸೃಷ್ಟಿ, ಕಾರ್ಮಿಕರ ಅಭಾವ ತಪ್ಪಿಸುವ ನಿಟ್ಟಿನಲ್ಲಿ ಕಾಫಿ ಮಂಡಳಿ ಕೆಲಸ ಮಾಡುತ್ತಿದೆ. ಭಾರತದ ಕಾಫಿಯನ್ನು ವಿಶ್ವದ ಶ್ರೇಷ್ಠ ಕಾಫಿಯನ್ನಾಗಿ ಮಾಡಲು ಎಲ್ಲರು ಕೈಜೋಡಿಸ ಬೇಕು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಸದ ಶ್ರೇಯಸ್‌ಪಟೇಲ್, ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಡಿ ಮೋಹನ್‌ಕುಮಾರ್, ಸೋಮವಾರಪೇಟೆ ಶಾಸಕ ಮಂಥರ್‌ಗೌಡ,ಬೇಲೂರು ಶಾಸಕ ಸುರೇಶ್,
ಕಾಫಿಮಂಡಳಿ ಅಧ್ಯಕ್ಷ ದಿನೇಶ್‌ಕುಮಾರ್, ಕಾಫಿಮಂಡಳಿ ಕಾರ್ಯಧರ್ಶಿ ಡಾ ಜಗದೀಶ್,ಸಂಭಾರ ಮಂಡಳಿ ಉಪಾಧ್ಯಕ್ಷ ಸತ್ಯ, ಮಾಜಿ ಶಾಸಕರಾದ ಮೋಟಮ್ಮ,ಎಚ್.ಕೆ ಕುಮಾರಸ್ವಾಮಿ,ಎಚ್.ಎಂ ವಿಶ್ವನಾಥ್,ಲಿಂಗೇಶ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯಧರ್ಶಿ ಕೃಷ್ಣಪ್ಪ, ಬೆಕ್ಕನಳ್ಳಿ ನಾಗರಾಜ್, ಸೇರಿದಂತೆ ಇತರರು ಹಾಜರಿದ್ದರು.
ಗಮನ ಸೆಳೆದ ಕೃಷಿ ವಸ್ತುಪ್ರದರ್ಶನ:
ಕಾಫಿ ಬೆಳೆಗಾರರ ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಆಧುನೀಕ ಕೃಷಿ ಯಂತ್ರೋಪಕರಣಗಳ ವಸ್ತುಪ್ರದರ್ಶನವನ್ನು ಸಾವಿರಾರು ಮಂದಿ ಬೆಳೆಗಾರರು ವೀಕ್ಷಿಸಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆದರು.

