ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಶುಸಂಗೋಪನೆ ಸೂಪರ್ವೈಸರ್ ಕುಮಾರ್ ನಾಯಕ್
ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಯೂರು ಗ್ರಾಮದ ಲೋಲಾಕ್ಷಿ ವೀರೇಶ್ ಅವರ ಮನೆಯ ಎಮ್ಮೆಯು 7 ದಿನಗಳ ಹಿಂದೆ ಗಂಡು ಕರುವಿಗೆ ಜನ್ಮ ನೀಡಿತ್ತು. ಮದ್ಯ ರಾತ್ರಿಯ ಸಮಯದಲ್ಲಿ ಆ ಎಮ್ಮೆಯ ಗರ್ಭಕೋಶ ಹೊರಗಡೆ ಬಂದಿದೆ . ಮುಂಜಾನೆಯೇ ಈ ವಿಷಯವನ್ನು ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಶುಸಂಗೋಪನೆ ಸೂಪರ್ವೈಸರ್ ಅವರಿಗೆ ಕರೆ ಮಾಡಿ ತಿಳಿಸಲಾಗಿದೆ.
ಈ ಮಾಹಿತಿ ತಿಳಿದು ತಕ್ಷಣ ಪಶುಸಂಗೋಪನೆ ಸೂಪರ್ವೈಸರ್ ಕುಮಾರ್ ನಾಯಕ್ ಮಾಲೀಕರಿಗೆ ಧೈರ್ಯ ಹೇಳಿ ನೀವು ಎಷ್ಟು ರಾತ್ರಿಗೆ ಹೇಳಿದರು ಬರುತ್ತೇನೆ ಯಾಕೆ ನೀವು ರಾತ್ರಿ ಯೆ ಹೇಳಲಿಲ್ಲ ಎಂದು ಮನೆಯವರಿಗೆ ಸಾಂತ್ವನ ಹೇಳಿ ಎಮ್ಮೆಗೆ ಚುಚ್ಚುಮದ್ದು ನೀಡಿ ಸತತವಾಗಿ 2 ಗಂಟೆ ಹರ ಸಾಹಸ ಪಟ್ಟು ಎಮ್ಮೆಯ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ.
ಇವರ ಈ ತುರ್ತು ಸ್ಪಂದನೆಗೆ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ವಳಲಹಳ್ಳಿ ವೀರೇಶ್ ಹಾಗೂ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.
previous post
next post