ವರದಿ ರಾಣಿ
ಹೆತ್ತೂರು ಹೋಬಳಿ ಹಿರಿಯೂರು ನಿವಾಸಿಯಾದ ಯೋಗೀಶ್ ಹಾಗು ಪತ್ನಿ ಮಂಜುಳಾ ನಡುವೆ ದಿನನಿತ್ಯ ಜಗಳವಾಗುತ್ತಿದ್ದು. ಇಂದು ಬೆಳಗಿನ ಜಾವ ಜಗಳ ವಿಪರೀತಕ್ಕೆ ಹೋಗಿದ್ದು ಕತ್ತು ಸೀಳಿ ಕೊಲೆಗೈಡಿದ್ದಾನೆ. ನಂತರ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.
ಪರಾರಿಯಾದ ಪತಿ ಯೋಗೇಶ್ ಆಚಾರಿ ಅವನ ಒಟ್ಟಿಗೆ ಇರುತ್ತಿದ್ದ ಸ್ನೇಹಿತನೊಂದಿಗೆ ಕೃತ್ಯದ ಕುರಿತು ವಿಚಾರ ಹಂಚಿಕೊಂಡಿದ್ದಾನೆ. ವಿಷಯ ತಿಳಿದ ಸ್ನೇಹಿತ ಆರೋಪಿಯ ಅಣ್ಣನಿಗೆ ತಿಳಿಸಿದ್ದಾನೆ. ನಂತರ ಅವನ ಅಣ್ಣನು ವಿಷಯವನ್ನು ಸಕಲೇಶಪುರ ಗ್ರಾಮಾಂತರ ಠಾಣೆಗೆ ತಿಳಿಸಿದ್ದಾರೆ.
ಮೃತ ವ್ಯಕ್ತಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗ ನಿದ್ದಾನೆ ಮೂವರು ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ
ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
.
previous post
next post