ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಆಲೂರು ತಾಲೂಕಿನ ಚೌಲ್ಗೆರೆ ಗ್ರಾಮದ ಸಮೀಪ ಹಾದು ಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟೋಲ್ ಘಟಕ ತೆರೆದು ರಸ್ತೆ ಸಾರಿಗೆ ನಿಯಮಗಳನ್ನು ಮೀರಿ ವಾಹನಗಳಿಂದ ಶುಲ್ಕವನ್ನು ಸಂಗ್ರಹಿಸಲು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಇದನ್ನು ವಿರೋಧಿಸಿ ಇದೇ ಡಿ.16 ರ ಸೋಮವಾರದಂದು ತಾಲೂಕು ಕರವೇ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ನಟರಾಜ್ ಹೇಳಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಚೌಲ್ಗೆರೆ ಗ್ರಾಮದ ಬಳಿ ನಿರ್ಮಿಸಲಾಗಿರುವ ಟೋಲ್ ಗೇಟ್ ನಲ್ಲಿ ಸೋಮವಾರದಿಂದ ಸುಂಕ ವಸೂಲಾತಿಗೆ ನಿರ್ಧರಿಸಿರುವುದನ್ನು ನಾವು ಖಂಡಿಸುತ್ತೇವೆ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಒಂದು ಟೋಲ್ ನಿಂದ ಮತ್ತೊಂದು ಟೋಲ್ ಗೆ ಕನಿಷ್ಠ 50 ಕಿ.ಮೀ ಅಂತರವಿರಬೇಕು ಆದರೆ ಈ ಟೋನ್ ಕೇವಲ 30 ಕಿ.ಮೀ ಅಂತರವಿದೆ ಅಲ್ಲದೆ ಬೆಂಗಳೂರು ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಸಂಪೂರ್ಣ ಆಗಿಲ್ಲ ಕೆಲವು ಕಡೆ ಸರ್ವಿಸ್ ರಸ್ತೆಗಳ ಕಾಮಗಾರಿ ಮುಗಿದಿಲ್ಲ ಜೊತೆಗೆ ಜೊತೆಗೆ ಟೋಲ್ ನಿಂದ ಹತ್ತು ಕಿಲೋ ಮೀಟರ್ ವ್ಯಾಪ್ತಿಗೆ ಒಳಪಡುವ ಸ್ಥಳೀಯರಿಗೆ ಉಚಿತ ಪಾಸ್ ವ್ಯವಸ್ಥೆ ಮಾಡಿಕೊಡಬೇಕು ಇದ್ಯಾವುದನ್ನು ಮಾಡದೆ ಏಕಾಏಕಿ ಟೋಲ್ ನಲ್ಲಿ ಸುಂಕ ಸಂಗ್ರಹಕ್ಕೆ ಮುಂದಾಗುತ್ತಿರುವುದು ಖಂಡನಿಯ ಇದನ್ನ ವಿರೋಧಿಸಿ ಆಲೂರು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮುವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಎಂದರೆ ಅದರಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಇರಬೇಕು. ಯಾರು ಕೂಡ ರಸ್ತೆ ದಾಟಿ ಹೋಗಬಾರದು.ರಸ್ತೆ ದಾಟಲು ಅಂಡರ್ ಪಾಸ್ ವ್ಯವಸ್ಥೆ ಮಾಡಬೇಕು. ಟೋಲ್ ಅನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ರಸ್ತೆ ಬದಿಯಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಇರಬೇಕು. ಬಸ್ ಸಂಚಾರಕ್ಕೆ ಸರ್ವಿಸ್ ರಸ್ತೆ ಪ್ರತ್ಯೇಕ ಇರಬೇಕು. ಇವ್ಯಾವ ವ್ಯವಸ್ಥೆ ಮಾಡದೇ ಸರ್ಕಾರ ಯಾವ ಮಾನದಂಡದ ಮೇಲೆ ಟೋಲ್ ಸಂಗ್ರಹ ಮಾಡಲು ಅನುಮತಿ ನೀಡಿದೆ. ಇದು ನ್ಯಾಯಕ್ಕೆ ವಿರುದ್ಧ ಅಲ್ಲವೇ ಎಂದು ಪ್ರಶ್ನಿಸಿದ ಅವರು ಈ ಸಮಸ್ಯೆ ಇತ್ಯರ್ಥ ಮಾಡದೆ ಸುಂಕ ವಸೂಲಾತಿಗೆ ಮುಂದಾದರೆ ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಉಪಾಧ್ಯಕ್ಷ ನವೀನ್ ಬೈರಾಪುರ, ನಗರಾಧ್ಯಕ್ಷ ಆನಂದ್ ಮುಂತಾದವರು ಹಾಜರಿದ್ದರು.
previous post