ಆಲೂರು: ವಾಯು ಪುತ್ರ ಹನುಮಾನ ಜಯಂತಿಯನ್ನು ಆಲೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಎಲ್ಲಡೆ ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಭಜನೆ, ಸ್ಮರಣೆಯ ಕಾರ್ಯಕ್ರಮಗಳು ನಡೆದವು.
ಹನುಮಾನ ಜಯಂತ್ಯುತ್ಸವದ ಅಂಗವಾಗಿ ಆಲೂರು ಪಟ್ಟಣದ ಕೊನೆಪೇಟೆಯ ಹೌಸಿಂಗ್ ಬೋರ್ಡ್ ನಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ (ರಿ) ವತಿಯಿಂದ ಬೃಹತ್ ಹನುಮಾನ ಮತ್ತು ಶ್ರೀರಾಮನ ಭಾವಚಿತ್ರದ ಮೆರವಣಿಗೆಯನ್ನು ವಿಜೃಂಭಣೆಯಿಂದ ಮಾಡಿ ಭಕ್ತಿ ಮೆರೆದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಹಸ್ರಾರು ಭಕ್ತಾಧಿಧಿಗಳು ಸೇರಿಕೊಂಡು ಮೆರವಣಿಗೆ ಮಾಡಿದರು. ಆಲೂರು ಕೊನೇಪೇಟಿಯಿಂದ ಆರಂಭಗೊಂಡ ಮೆರವಣಿಗೆ ಕೆಇಬಿ ಸರ್ಕಲ್ ನಲ್ಲಿರುವ ಸಂಗಮೇಶ್ವರ ದೇವಸ್ಥಾನದವರೆಗೂ ಅದ್ಧೂರಿಯಿಂದ ನಡೆಯಿತು. ಮರೆವಣಿಗೆಯುದ್ದಕ್ಕೂ ಜೈ ಹನುಮಾನ್, ಜೈ ಜೈ ಹನುಮಾನ್ ಎಂದು ಘೋಷಣೆಗಳನ್ನು ಕೂಗಿದರು. ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾಧಿಧಿಗಳು ಪಾಲ್ಗೊಂಡಿದ್ದರು.
ಅಲ್ಲದೆ ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿನ ವಿವಿಧ ಪ್ರದೇಶಗಳಲ್ಲಿರುವ ಹನುಮಾನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು, ರಾಮನ ಸ್ಮರಣೆಗಳು ಅನ್ನದಾನವು ನಡೆದವು. ಬೆಳಗ್ಗೆಯಿಂದಲೇ ಭಕ್ತರು ಹನುಮಾನ ಗುಡಿಗಳಿಗೆ ಆಗಮಿಸಿ ದರ್ಶನ ಪಡೆದುಕೊಂಡರು.
ಶಾಸಕ ಸಿಮೆಂಟ್ ಮಂಜು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ತಾಳೂರು ಗ್ರಾಮದಲ್ಲಿರುವ ಶ್ರೀ ಹನುಮಂತರಾಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಪಿತೃ ವಾಕ್ಯ ಪರಿಪಾಲಕ, ಏಕ ಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಪರಮ ಭಕ್ತನಾಗಿರುವ ಹನುಮಂತನು ಅವತಾರ ತಾಳಿದ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ, ಹನುಮನು ಹಿಂದೂ ಧರ್ಮಗ್ರಂಥಗಳಲ್ಲಿ ಪೂಜಿಸುವ ದೈವವಾಗಿದ್ದು, ಭಾರತದ ಮಹಾಕಾವ್ಯ ಎಂದೇ ಹೇಳಲಾಗುವ ರಾಮಾಯಣದಲ್ಲಿ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದಾನೆ ತಾಳೂರು ಗ್ರಾಮದಲ್ಲಿರುವ ಶ್ರೀ ಹನುಮಂತರಾಯ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶೀರ್ಘದಲ್ಲಿ ದುರಸ್ತಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ಭಾರತೀಯ ಶಾಸ್ತ್ರಗಳಲ್ಲೂ ಹನಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಈಗಾಗಲೇ ಎಂ.ಎಸ್ ನಾಗೇಂದ್ರ ಸೇವಾ ಟ್ರಸ್ಟ್ ವತಿಯಿಂದ ಹಲವು ದೇವಾಲಯಗಳ ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣ ಕಾರ್ಯಗಳನ್ನ ಮಡಲಾಗುತ್ತಿದೆ ಅದರಂತೆ, ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಗರುಡು ಗಂಬವನ್ನ ಇಂದು ಸಮರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಷಾರಾಣಿ ಹರೀಶ್, ಸದಸ್ಯ ಷಡಾಕ್ಷರಿ, ಸುನಂದ ಯೋಗೇಶ್, ಬಿಜೆಪಿ ಮುಖಂಡರಾದ ಅಜಿತ್, ಲೋಕೇಶ್, ಹರೀಶ್, ಜಿ.ಕೆ ವೆಂಕಟೇಶ್, ಹರೀಶ್, ವೇದ ವಾಸು, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಆನಂದ್, ಆಕಾಶವಾಣಿಯ ನಿಸರ್ಗ, ತಾಳೂರು ಶ್ರೀ ಹನುಮಂತರಾಯ ಸೇವಾ ಟ್ರಸ್ಟಿನ ಗೌರವಾಧ್ಯಕ್ಷ ಕೆ.ಎನ್.ಚಿಕ್ಕೇಗೌಡ, ಉಪಾಧ್ಯಕ್ಷ ಸೋಮಪ್ಪ, ಕಾರ್ಯದರ್ಶಿ ಕೆ. ಆರ್.ಪರಮೇಶ್, ಖಜಾಂಚಿ
ಯದುನಂದನ್, ದೇವಸ್ಥಾನ ಅರ್ಚಕ ಈಶ್ವರಪ್ಪ, ಹಾಲಿನ ಡೈರಿ ಕಾರ್ಯದರ್ಶಿ ಧರ್ಮ, ಗ್ರಾಮದ ಹಿರಿಯ ಮುಖಂಡರಾದ ಮೋಹನ್, ಮಂಜುನಾಥ್, ರಾಜಶೇಖರ್ ಸೇರಿದಂತೆ ಮುಂತಾದವರು ಹಾಜರಿದ್ದರು.
previous post
next post