ವರದಿ ರಾಣಿ ಪ್ರಸನ್ನ
41 ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ನವರಾತ್ರಿ ಮಹೋತ್ಸವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ವತಿಯಿಂದ
ಸಕಲೇಶಪುರದ ಮಳಲಿ ಗ್ರಾಮದ ಅಮ್ಮನವರ 6 ನೇ ದಿನವಾದ ಇಂದು ಕಾತ್ಯಾಯಿನಿ ದೇವಿ ನವರಾತ್ರಿಯ ಇಂದಿನ ಅಲಂಕಾರ ನಮ್ಮ ಸಕಲೇಶಪುರದಲ್ಲಿ ಬೆಳೆಯುವ ಕಾಪು ಹಣ್ಣು ಮಾಲೆ, ಕಾಫಿ ಕಾಯಿ ಮಾಲೆ , ಅಡಿಕೆ, ಕಾಫಿ ಎಲೆಗಳ ಅಲಂಕಾರದಿಂದ ಅಲಂಕೃತಗೊಂಡಿದೆ.
ನವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಯೋಧ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ದಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ.
previous post