ಆಲೂರು : ಹಿರಿಯ ಪತ್ರಕರ್ತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಎ.ಎನ್ ಸುರೇಶ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಪತ್ರಕರ್ತ ಎಂ.ಪಿ ಹರೀಶ್ ಮಾತನಾಡಿ, ಪತ್ರಕರ್ತರು ಇತ್ತೀಚೆಗೆ ನಾನಾ ಕಾರಣದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅನೇಕ ಪತ್ರಕರ್ತರು ನಮ್ಮನ್ನಾಗಲಿದ್ದಾರೆ ಅ ನಿಟ್ಟಿನಲ್ಲಿ ಉತ್ತಮ ಬರಹಗಾರರಾಗಿದ್ದ ಸುರೇಶ್ ಕೂಡ ಒಬ್ಬರಾಗಿದ್ದಾರೆ ಅವರು ಪತ್ರಿಕಾ ವೃತ್ತಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಶ್ರದ್ಧಾಂಜಲಿ ಅರ್ಪಿಸಲಿ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ನಟರಾಜ್ ನಾಕಲಗೂಡು ಮಾತನಾಡಿ, ಸರಳ, ಸಜ್ಜನರಾಗಿದ್ದ ಸುರೇಶ್
ಎಲ್ಲಾರೊಡನೆ ಉತ್ತಮ ಗುಣ, ಬಾಂಧವ್ಯವನ್ನು ಹೊಂದಿದ್ದರು. ಇವರ ತಂದೆ ಆಲೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ಆಲೂರುಮಿತ್ರ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾ ಸೇವೆಯನ್ನು ಸಲ್ಲಿಸಿದ ಕೀರ್ತಿ ಅ ಕುಟುಂಬಕ್ಕೆ ಸಲ್ಲುತ್ತದೆ, ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತದ ಆರ್ಥಿಕತೆಯಲ್ಲಿ ಪರಿವರ್ತನೆಗೆ ಕಾರಣಕರ್ತರಾಗಿದ್ದಾರೆ. 1990 ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸಿದ್ದ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಭಗವಂತ ಇವರಿಬ್ಬರಿಗೂ ಚಿರಶಾಂತಿ ನೀಡಿಲಿ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ಮಾತನಾಡಿ, ನಮ್ಮ ಸಂಘದ ಹಿರಿಯ ಪತ್ರಕರ್ತರಾಗಿದ್ದ ಸುರೇಶ್ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಆದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಎಲ್ಲರ ಒಡನಾಟ ಹೊಂದಿದ ಇವರು ಜನಸ್ನೇಹಿಯಾಗಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದರು ಭಗವಂತ ಇವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ, ಮಾಜಿ ಪ್ರಧಾನಿ ಖ್ಯಾತ ಅರ್ಥಶಾಸ್ತ್ರಜ್ಞರು, ಮನಮೋಹನ್ ಸಿಂಗ್ ಅವರು ನಿಧಾನಕ್ಕೆ ಸಂತಾಪ ಕೋರುವೆ, ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಹತ್ವದ ಕೊಡುಗೆ ಸಲ್ಲಿಸಿದ್ದರು. ಅವರ ಕುಟುಂಬಸ್ಥರಿಗೆ ಅಗಲಿಕೆಯ ನೋವು ಶಕ್ತಿಯನ್ನು ಭಗವಂತನು ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್, ಕಬೀರ್ ಅಹಮದ್, ಕಾರ್ಯದರ್ಶಿಗಳಾದ ಸತೀಶ್ ಚಿಕ್ಕಕಣಗಾಲು, ರುದ್ರಕುಮಾರ್, ಸದಸ್ಯ ಪ್ರದೀಪ್ ಮುಂತಾದವರು ಹಾಜರಿದ್ದರು.
previous post
next post