ಆಜಾದ್ ರಸ್ತೆಯಲ್ಲಿನ ಗೋಮಾಂಸ ಮಾರಾಟ ಮಳಿಗೆ ಮೇಲೆ ಪೋಲಿಸ್ ದಾಳಿ.
ಸಕಲೇಶಪುರ – ಸಕಲೇಶಪುರ ನಗರದಲ್ಲಿ ಗೋಹತ್ಯೆ ವಿರುದ್ಧ ಪೋಲಿಸರ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿರುತ್ತದೆ. ಒಂದು ಕಡೆ ಕಸಾಯಿಖಾನೆಗೆ ಜೀವಂತವಾಗಿ ಜಾನುವಾರುಗಳ ಸಾಗಿಸುವ ಕಸಾಯಿಗಳ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ರಾತ್ರಿ ಹದ್ದಿನ ಕಣ್ಣಿಟ್ಟು ರಾತ್ರಿ ಕಾರ್ಯ ನಿರ್ವಹಿಸುತ್ತಾರೆ. ಮತ್ತೊಂದೆಡೆ ಸಕಲೇಶಪುರ ನಗರ ಹಾಗೂ ಗ್ರಾಮಾಂತರ ಠಾಣೆಯ ಪೋಲೀಸರು ಗೋಮಾಂಸ ಮಾರಾಟ ಮಾಡುವವರನ್ನು ಸಾಕ್ಷಿ ಸಮೇತ ಹಿಡಿದು ಸದೆಬಡಿಯುತ್ತಿರುತ್ತಾರೆ.
ಇಂದು ಗುರುವಾರ ಮಧ್ಯಾಹ್ನ ಕೂಡ ರಾಮಧೂತ ಹಿಂದೂ ಮಹಾಗಣಪತಿ ಸಮಿತಿಯ ಕಾರ್ಯಕರ್ತರ ಮಾಹಿತಿಯನ್ನು ಆಧರಿಸಿ ಸಕಲೇಶಪುರ ನಗರ ಠಾಣೆಯ ಪೋಲೀಸರು ಅಜಾದ್ ರಸ್ತೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟಿದ್ದ ಅಂದಾಜು ಒಂದು ಕ್ವಿಂಟಾಲ್ ಅಷ್ಟು ಗೋಮಾಂಸವನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಮುಖ ಆರೋಪಿ ಕುಶಾಲನಗರ ಬಡವಾಣೆಯ ಯಾಸೀನ್ (40) ಎಂದು ಗುರುತಿಸಲಾಗಿದೆ. ಮತ್ತೊಬ್ಬ ನದಿಂ (35) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಒಬ್ಬನನ್ನು ಸ್ಥಳದಲ್ಲಿದ್ದ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು ಶೋಧ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
previous post
next post