*ಹೇಮಗಂಗಾರತಿ*
ಹೊನ್ನಿನ ಹೊಳೆ ಎಂದು ಕರೆಯುವ ಹೇಮಾವತಿಗೆ
ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘದಿಂದ ಹೇಮ ಗಂಗಾರತಿ.
ಹೇಮಾವತಿ ನದಿಯು ಪರಮ ಪವಿತ್ರವಾದದ್ದು, ಹಲವರ ಜೀವನವಾಗಿದ್ದು ಸ್ನಾನ ಮಾತೃದಿಂದಲೇ ಸಕಲ ಸೌಭಾಗ್ಯವನ್ನು ಮುಕ್ತಿಯನ್ನು ದೊರಕಿಸಿ ಕೊಡು ತಕ್ಕದ್ದು ಎಂಬ ಇತಿಹಾಸವಿದೆ. ಹೇಮಾವತಿ ತೀರದಲ್ಲಿರುವ ಪಶು ಪಕ್ಷಿ ಗಿಡ ಬಳ್ಳಿಗಳಿಗೂ ಕೂಡ ನದಿಯ ನೀರಿನ ಮೇಲೆ ಬೀಸಿಕೊಂಡು ಬಂದ ಗಾಳಿಯು ಶೋಕಿ ಮುಕ್ತಿಯನ್ನು ಹೊಂದುತ್ತವೆ ಎಂಬ ಇತಿಹಾಸವು ಇದೆ.
ದಾನಗಳಲ್ಲಿ ಅನ್ನದಾನವು ಮಂತ್ರಗಳಲ್ಲಿ ಗಾಯಿತ್ರಿಯು ಶ್ರೇಷ್ಠವೂ ಹಾಗೆ ಜೇನುಗಳಲ್ಲಿ ಕಾಮಧೇನು ಸ್ತ್ರೀಯರಲ್ಲಿ ವೃಂದದಿಯು ತೇಜಸ್ವಿಗಳಲ್ಲಿ ಸೂರ್ಯನು ಶ್ರೇಷ್ಠರು ಹಾಗೆ ನದಿಗಳಲ್ಲಿ ಹೇಮಾವತಿ ನದಿಯು ಶ್ರೇಷ್ಠವಾದದ್ದು.
ಹೇಮಾವತಿ ನದಿಯು ಆ ಮೂಲಸಂಗಮಪರ್ಯಂತವಾಗಿ ಒಂದೇ ಸಮನಾಗಿದ್ದರು ಚಂದ್ರಶೇಲೆ( ನದಿ ಹುಟ್ಟುವ ಸ್ಥಳ ಜಾವಲಿ) ಪಲ್ಗೂ ಸರೋವರ ( 15 ಮೈಲಿ ದೂರದಲ್ಲಿರುವ ಮರಿ ಯೋಜನೆ) ಚಂಪಕವನ ( ಸಕಲೇಶಪುರ) ಬ್ರಹ್ಮಶೀಲ ( ಬೆಳ್ಳೂರು ಬಳಿ ಇದೆ) ಅರ್ಕಕುಂಡ (ಗೊರೂರು) ಕಾವೇರಿ ಸಂಗಮ ಈ ಆರು ಸ್ಥಳಗಳಲ್ಲಿ ವಿಶೇಷ ಫಲ ಕೊಡುತ್ತಕ್ಕಾದ್ದಾಗಿದೆ..
*ಹೇಮಾವತಿ ನದಿಯನ್ನು ಹೊನ್ನಿನ ಹೊಳೆ ಎಂದು ಕರೆಯುತ್ತಾರೆ.*
ಹೇಮಾವತಿ ಹಾಸನ ಜಿಲ್ಲೆಯ ಮುಖ್ಯ ನದಿಗಳಲ್ಲಿ ಒಂದು ಮತ್ತು ಸಕಲೇಶಪುರ ತಾಲ್ಲೂಕಿನ ಮುಖ್ಯ,
ಕಾವೇರಿ ನದಿಯ ಉಪನದಿ, ಈ ನದಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳ ರಾಯನ ದುರ್ಗದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ
ಜಾವಳಿಯ” ಬಳಿ ಉಗಮವಾಗಿ ದಕ್ಷಿಣಾಭಿಮುಖವಾಗಿ ಬರುವಾಗ ಸೋಮಾಪತಿ ಹೊಳೆ, ದೊಡ್ಡಹಳ್ಳಿ, ಕೀಲ
ಮುಂತಾದ ಹಳ್ಳ ತೊರೆಗಳನ್ನು ಸ್ವೀಕರಿಸಿ ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತದೆ.
ಸಕಲೇಶಪುರ ತಾಲ್ಲೂಕಿನ ಗಡಿಯಾಗಿ ಬೇಲೂರು ತಾಲ್ಲೂಕನ್ನು ಬೇರ್ಪಡುತ್ತದೆ. ಸಕಲೇಶಪುರಕ್ಕೆ ೬
ಕಿ.ಮೀ. ದೂರದ ಹೆಣ್ಣಳಿಯ ದಕ್ಷಿಣಕ್ಕೆ ಹರಿದು, ಸಕಲೇಶಸಾರದಿಂದ ಪರ್ರಕ್ಕೆ ತಿರುಗುತ್ತದೆ, ಹೀಗೆ ಹರಿಯುವಾಗ
ಹಾಸನ ಜಿಲ್ಲೆಯ ಗಡಿಯಾಗಿ ಕೊಡಗು ಜಿಲ್ಲೆಯನ್ನು ಬೇರ್ಪಡಿಸುತ್ತದೆ, ಭರ್ತರು, ಮಲ್ಲಿಪಟ್ಟಣ, ಹೀಗ್ರಾಪುರ-
ಗೋರೂರು ಬಳಿ- ಯಗಚಿನದಿಯನ್ನು ಸೇರಿಸಿಕೊಂಡು ಮಾವಿಗೆ ಕೆರೆ ಕೊಳೆತರತರ ತಾಲ್ಲೂಕಿಗೆ ಮೂಲಕ
ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುವ ಮೊದಲು ಕೃಷ್ಣರಾಜು, ತಾಲ್ಲೂಕು ಕಿತ್ತೂರ ಬಳಿ ಕನೇರಿ ಹಕ್ಕು
ಸೇರುತ್ತದೆ. ಒಟ್ಟು ಈ ನದಿಯ ಉದ್ದ 258 ಕಿ.ಮೀ, ಆದರೆ ಹಾಗೆ, ಜಿಲ್ಲೆಯೊಂದರಲ್ಲಿ ಈ ನದಿ (182 ಕಿ.ಮೀ.)
ಹರಿಯುತ್ತದೆ. ಜಿಲ್ಲೆಯ ಬಹಳಷ್ಟು ಭೂಮಿ ಹೇಮಾವತಿ ನೀರಿನಿಂದ ತಂಪಾಗಿದೆ, ಹಳೆಬೇರು ಬೇಲೂರಿನ
ದೇವಾಲಯಗಳನ್ನು ನಿರ್ಮಿಸಿದ ಜಕಣಾಚಾರಿ, ಹೇಮಾವತಿಯ ನೀರು ಕುಡಿದೇ ಕಟ್ಟಿದನೆಂದು ಹೇಳುತ್ತಾರೆ,
*ಹೇಮಾವತಿ ನದಿ ಜನ್ಮ ತಳೆದ ಪುರಾಣ ಕಥೆ*
ಹೇಮಾವತಿ ನದಿ ಜನ್ಮ ತಳೆದ ಇತಿಹಾಸವೂ ಸಹ ಈ ನದಿಯ ಪಾವಿತ್ರತೆಗೆ ನಿದರ್ಶನವಾಗಿದೆ. ದಕ್ಷನು ಯಜ್ಞಕಾಲದಲ್ಲಿ ಈಶ್ವರನನ್ನು ತಿರಸ್ಕರಿಸಿದುದರಿಂದ ದಕ್ಷ
ಬ್ರಹ್ಮನ ಮಗಳು ಪಾರ್ವತಿ ಬೆಂಕಿಯಲ್ಲಿ ಬಿದ್ದು ಮೇಲೆದ್ದಳು. ಅಗ್ನಿ ಶುದ್ಧಿಯಿಂದ ಆಕೆ ಸುವರ್ಣಮಯಳಾದಳು. ಆದುದರಿಂದ ಆಕೆ ಹೇಮಾವತಿ, ಹೇಮಾವತಿ ನದಿಯನ್ನು
`ಹೊನ್ನಿನ ಹೊಳೆ’ ಎಂತಲೂ ಕರೆಯುತ್ತಾರೆ. ಅನಂತರ ಹಿಮವಂತನ ಮಗಳಾಗಿ ಹುಟ್ಟಿ ಈಶ್ವರನನ್ನು ಹೊಂದಲು ತಪಸ್ಸು ಮಾಡಿದಳು. ಈಶ್ವರನು ನೀನು ನದಿಯಾಗಿ ಜಗತ್ ಕಲ್ಯಾಣ ಸಾಧಿಸು ಎಂದು ಅಪ್ಪಣೆ ಮಾಡಿದನು.
ಇನ್ನೊಂದು ಪುರಾಣ ಕಥೆಯ ಪ್ರಕಾರ ಈಗಿನ ಆಲೂರು ತಾಲ್ಲೂಕಿನ ಪೊನ್ನಾಥಪುರವನ್ನು ಪೊನ್ನಾಥನೆಂಬ ರಾಜನು ಆಳುತ್ತಿದ್ದನಂತೆ. ಅವನಿಗೆ ಹೇಮಾವತಿ ಮತ್ತು ಹೊನ್ನಿ (ಕಪಿಲಾ) ಎಂಬ ಇಬ್ಬರು ಅಕ್ಕ ತಂಗಿಯರು ಪತ್ನಿಯರಾಗಿದ್ದರಂತೆ. ಬಹುಕಾಲ ಕಳೆದರೂ ಸಂತಾನವಿಲ್ಲದ ಕಾರಣವನ್ನು ಭರಧ್ವಾಜನೆಂಬ ಮಹರ್ಷಿಯಿಂದ ತಿಳಿದ ರಾಜನು ತಾನು ಪೂರ್ವದಲ್ಲಿ ಗಂಧರ್ವನೆಂದು, ಇಂದ್ರನ ಶಾಪದಿಂದ ತನಗೆ ಮಕ್ಕಳ
ಭಾಗ್ಯವಿಲ್ಲವೆಂದು ಅರಿತು ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಾ ಆತ್ಮನಿಷ್ಠನಾದನು. ಹಿರಿಯಳಾದ ಹೇಮೆಯು ಹೇಮಾವತಿ ನದಿಯಾಗಿ ಹರಿದರೆ, ಕಪಿಲೆ ಶಿಲೆಯಾಗಿ ರಾಮ
ನಾಥಪುರದಲ್ಲಿ ನೆಲೆಯಾದಳು.
ಯಡೇಹಳ್ಳಿ ಆರ್ ಮಂಜುನಾಥ್
9901606220
previous post
next post