ಸಕಲೇಶಪುರದ ಮಳಲಿಯ ಸರ್ವೇ ನಂಬರ್ 278, 279/1, 279/2 ರಲ್ಲಿನ ಸ್ಥಳದ ಮಣ್ಣಿನಲ್ಲಿ ಗಟ್ಟಿತನದ ಕೊರತೆ ಇರುವುದಾಗಿ ಇಂಜಿನಿಯರಿಂಗ್ ವಿಭಾಗದ ಮಾಹಿತಿ ತಿಳಿಸಿದೆ.
ಸಕಲೇಶಪುರದ ಮಳಲಿ ಗ್ರಾಮದಲ್ಲಿ ವಿಶಾಲ ಸ್ಥಳದಲ್ಲಿ ಜಾತ್ರೆ ಮಾಡಲಿಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ಈ ಸ್ಥಳದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಹಾಗು ಇತರ ಅಂಗಡಿಗಳಿಗೆ ಟೆಂಡರ್ ಕರೆಯಲಾಗಿತ್ತು.
ಈ ಸ್ಥಳದಲ್ಲಿ ಬೇರೆ ಕಡೆಯಿಂದ ಮಣ್ಣನು ತಂದು ಹಾಕಲಾಗಿದ್ದು,ಮಣ್ಣಿಗೆ ಸಾಂದ್ರತೆ ಇಲ್ಲದೆ ಇರುವುದರಿಂದ ಜಾತ್ರೆ ಮಾಡಿದರೆ ಜನರ ಜೀವಕ್ಕೆ ಅಪಾಯ ಹಾಗು ಅವಘಡ ಆಗಬಹುದು ಎಂದು ಮಲೆನಾಡ ರಕ್ಷಣಾ ಸೇನೆ ಆರೋಪ ಮಾಡಿತ್ತು
ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಅಧ್ಯಕ್ಷರಾದ ಸಾಗರ್ ಜಾನೇಕೆರೆಯವರ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಮಣ್ಣಿನ ಪರೀಕ್ಷೆಗಾಗಿ ಸಕಲೇಶಪುರ ಪುರಸಭೆಯು ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ವಿಭಾಗಕ್ಕೆ ಪತ್ರ ಬರೆದಿತ್ತು.
ಈ ಪತ್ರದ ಬಳಿಕ ಈ ಬಗ್ಗೆ ಇಂಜಿನಿಯರ್ ಗಳು ಸ್ಥಳ ಪರೀಕ್ಷೆ ಮಾಡಿ ಈ ಮಣ್ಣಿನಲ್ಲಿ ಸಾಂದ್ರತೆಯ ಕೊರತೆ ಇರುವುದಾಗಿ ಹೇಳಿದ್ದಾರೆ
previous post
next post