Blog

ಗಣಿಗಾರಿಕೆ ವಿರುದ್ಧ ಹೋರಾಟ

ವರದಿ ರಾಣಿ ಪ್ರಸನ್ನ

ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.), ಹಾಸನ ಹಾಗೂ ಕೊಡಗು ಜಿಲ್ಲಾ ಜಂಟಿ ಹೋರಾಟ ಸಮಿತಿ ಹಾಗು
ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮಸ್ಥರುಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಮತ್ತು ಕೊಡಗು ಭಾಗದ ಗ್ರಾಮಸ್ಥರುಗಳ  ಸಹಯೋಗದೊಂದಿಗೆ ಅಕ್ಟೋಬರ್ 29ರಂದು ಪ್ರತಿಭಟನೆ ನಡೆಯಲಿದೆ.

, ಯಸಳೂರು ಹೋಬಳಿ, ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟ, ಆರಾಧನ ಎಸ್ಟೇಟ್ ಪಕ್ಕದಲ್ಲಿರುವ “ರೋಢಿಕ್ ಕಾಫಿ ಎಸ್ಟೇಟ್” ನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು , ಈ ಪ್ರದೇಶವು ಪಶ್ಚಿಮ ಘಟ್ಟಕ್ಕೆ ಸೇರಿದ್ದಾಗಿದ್ದು, ಸಮುದ್ರ ಮಟ್ಟದಿಂದ ಸುಮಾರು 4,000 ಅಡಿ ಎತ್ತರದಲ್ಲಿದ್ದು ಕೊಡಗಿನ ಭತ್ತದರಾಶಿ ಬೆಟ್ಟ, ಹೇರೂರು ಗವಿಬೆಟ್ಟ, ಹೊಸಕೋಟೆ ಬೆಟ್ಟವಿದ್ದು, ಸಾವಿರಾರು ವಿವಿಧ ಜಾತಿಯ ಮರಗಿಡಗಳ ಪ್ರಕೃತಿ ಸಂಪತ್ತನ್ನು ಹೊಂದಿದ್ದು, ವಿವಿಧ ಪ್ರಬೇಧದ ಪ್ರಾಣಿಗಳು ಹಾಗೂ ಆನೆ  ಮತ್ತು ವಾಸಿಸುವ ಕಾಡು ಕೋಣ, ಕಾಡು ಬೆಕ್ಕು, ನವಿಲುಗಳು, ವಿವಿಧ ಜಾತಿಯ ಹಾವುಗಳ ವಾಸ ಸ್ಥಾನವಾಗಿರುತ್ತದೆ.

ಕೊಡಗು ಮತ್ತು ಸಕಲೇಶಪುರ ತಾಲ್ಲೂಕಿಗೆ ಸೇರಿದ ಈ ಬೆಟ್ಟದ ಸಾಲುಗಳು ಕೋಟೆಯಂತಿದ್ದು, ಮಳೆಗಾಲದಲ್ಲಿ ಮೋಡವನ್ನು ತಡೆದು ಒಳ್ಳೆಯ ಮಳೆಯನ್ನು ಸುರಿಸುತ್ತವೆ. ಮಳೆಯ ನೀರನ್ನು ತಮ್ಮ ಒಡಲಿನಲ್ಲಿ ಶೇಖರಣೆ ಮಾಡಿಕೊಂಡು ಜಲ ಮೂಲಗಳಾಗಿ, ಝರಿಗಳಾಗಿ, ನದಿಗಳಾಗಿ ಹರಿಸಿ ಹೇಮಾವತಿಯ ಒಡಲನ್ನು ಸೇರುತ್ತವೆ. ಈ ಪ್ರದೇಶವು ಹೇಮಾವತಿ ನದಿಯ ಮೂಲ ಸ್ಥಾನವೆಂದು ಹೇಳುತ್ತಾರೆ. ಈ ಬೆಟ್ಟದ ಬುಡದಲ್ಲಿ ಸುಮಾರು 30 ಗ್ರಾಮಗಳಿದ್ದು, ಎಲ್ಲಾ ರೈತಾಪಿ ಕುಟುಂಬದವರಾಗಿದ್ದು, ತೋಟಗಳಿಗೆ ಈ ನೀರನ್ನೇ ಅವಲಂಬಿಸಿದ್ದಾರೆ. 2005ನೇ ಇಸವಿಯಲ್ಲಿ ಈ ಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾಗ, ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳು ಸೇರಿ ಹೋರಾಟ ಮಾಡಿ ತಹಶೀಲ್ದಾರ್, ಜಿಲ್ಲಾಧಿಕಾರಿಗಳು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಸರ್ಕಾರ ಈ ಗಣಿಗಾರಿಕೆಯನ್ನು ರದ್ದುಮಾಡಿ ಈ ಪ್ರದೇಶವನ್ನು ಪಶ್ಚಿಮ ಘಟ್ಟವೆಂದು ಘೋಷಿಸಿ, ಗಣಿಗಾರಿಕೆ ಮಾಡಿದವರಿಗೆ ದಂಡವನ್ನು ವಿಧಿಸಲಾಗಿತ್ತು.

ಆದರೆ ಮತ್ತೆ ಇಲ್ಲಿ ಗಣಿ ದಣಿಗಳು ರಾಜಕೀಯ ಪ್ರಭಾವ ಬಳಸಿ, ಮತ್ತೆ ಈ ಗಣಿಗಾರಿಕೆ ಮಾಡಿದ್ದಾರೆ. ಗಣಿಗಾರಿಕೆ ಯಿಂದ ಈ ಬೆಟ್ಟದ ಬುಡದಲ್ಲಿ ಎರಡು ಬಾರಿ ಭೂ ಕುಸಿತಗೊಂಡಿತ್ತು.

ಯಾರೋ ಒಬ್ಬರ ಸ್ವಾರ್ಥಕ್ಕಾಗಿ ವೈಭವ ಜೀವನವನ್ನು ನಡೆಸಲು ಸಾವಿರಾರು ವರ್ಷಗಳಿಂದ ವರದಾನವಾಗಿದ್ದ ಈ ಒಡಲನ್ನು ಬಗೆಯುವುದು ಸ್ವಾಭಾವಿಕ ಜಲ ಸಂಪನ್ಮೂಲವನ್ನು ಹಾಳು ಮಾಡಿ ಮುಂದಿನ ಪೀಳಿಗೆಗೆ ವಿಷವನ್ನು ಕೊಡುವ ಗಣಿಗಾರಿಕೆ ನಮಗೆ ಬೇಕಿಲ್ಲ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗ್ರಾಮಗಳು ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ಸೇರಿದಂತೆ ಹಲವಾರು ಗ್ರಾಮಗಳು ಈ ಗಣಿಗಾರಿಕೆಯಿಂದ ಪರಿಸರದ ಹಾನಿಗೆ ಗುರಿಯಾಗುತ್ತವೆ. ಆದ್ದರಿಂದ ಈ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಯನ್ನು ಮುಂದುವರೆಸಲು ಅವಕಾಶ ನೀಡದೆ ನ್ಯಾಯ ದೊರಕಿಸಿಕೊಡಬೇಕೆಂದು ಹಾಗು ಜಿಲ್ಲಾಧಿಕಾರಿಗಳು, ಗಣಿ ಇಲಾಖೆ, ಅರಣ್ಯ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ವಾದುದರಿಂದ ದಿನಾಂಕ : 29-10-2024ನೇ ಮಂಗಳವಾರದಂದು ಸಕಲೇಶಪುರ ಪಟ್ಟಣದ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ ಮೇಲ್ಕಂಡ ಎಲ್ಲಾ ಸಂಘ ಸಂಸ್ಥೆಗಳ ವತಿಯಿಂದ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ

Related posts

ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ತಮ್ಮಣ್ಣ ಶೆಟ್ಟಿ

Bimba Prakashana

ಚಿಕ್ಕ ಸತ್ತಿಗಾಲ್ ಗ್ರಾಮದಲ್ಲಿ  ಕಾರ್ತಿಕ ಮಹೋತ್ಸವ

Bimba Prakashana

ಹಾನುಬಾಳು ಗ್ರಾಮ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More