Blog

ಮಮತೆಯ ತೊಟ್ಟಿಲು

*ಮಮತೆಯ ತೊಟ್ಟಿಲು ಮುಟ್ಟಿ ಬಂದೆವು*

*ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಸನ*
(ಅನಾಥ, ಪರಿತ್ಯಕ್ಷ, ಬೇಡವಾದ ಮಕ್ಕಳ ಸ್ವೀಕೃತಿ ಕೇಂದ್ರ)

ನಮ್ಮ ಗುರುಗಳಾದ ಹೆಚ್ಎಸ್ ಸುಬ್ರಹ್ಮಣ್ಯ ಸರ್ ದಿವಂಗತ ಪತ್ನಿ ಚಂದ್ರಲೇಖ (26-09-2024) ಹುಟ್ಟಿದ ದಿನ ಅವರ ನೆನಪಿನಲ್ಲಿ ಈ ದಿನ ಸಂಜೆ 7:30ಕ್ಕೆ ಸರ್ಕಾರಿ ಬಾಲಕರ ಬಾಲ ಮಂದಿರ ಹಾಸನದ ಮಕ್ಕಳ ಜೊತೆ ಸಂಜೆ ಊಟದ ವ್ಯವಸ್ಥೆ ಮಾಡಲಾಗಿತ್ತು,. ಸುಬ್ರಮಣ್ಯ ಸರ್ ಉಷಾ ದಂಪತಿಗಳು, ಯಡೇಹಳ್ಳಿ ಆರ್ ಮಂಜುನಾಥ್, ಬಿ ಆರ್ ಧರ್ಮಪ್ರಕಾಶ್, ನಿವೃತ್ತ ಶಿಕ್ಷಕರಾದ ರಾಮಚಂದ್ರ ಹೆಚ್, ಶ್ರೀ ರಂಗಸ್ವಾಮಿ ಮತ್ತು ಮಕ್ಕಳು, ಶ್ರೀಮತಿ ರೂಪ ಪರಮೇಶ್, ಹೆಚ್ ವಿ ಗೋಪಾಲಕೃಷ್ಣ, ಭಾಗವಹಿಸಿದ್ದೆವು.


   ಮಂದಿರದ ಮುಂಭಾಗ ನಾಮಪಲಕ ಓದಿ ಕರುಳು ಹಿಡಿದಂಗಾಯ್ತು ಆ ಬೋರ್ಡ್ ನಲ್ಲಿ ಹೀಗೆ ಬರೆದಿತ್ತು
ಮಕ್ಕಳನ್ನು ರಕ್ಸಿಸಿ, ತಮಗೆ ಬೇಡವಾದ ಮಕ್ಕಳನ್ನು ಕಸದ ತೊಟ್ಟಿ, ಚರಂಡಿ, ಪೊದೆಗಳಲ್ಲಿ ಎಸೆಯಬೇಡಿ
ಇಂತಹ ಮಕ್ಕಳನ್ನು ಮಮತೆಯ ತೊಟ್ಟಲಿನಲ್ಲಿ ಬಿಡಿ. ಈ ಮಕ್ಕಳ ಎಲ್ಲಾ ರೀತಿಯ ಆರೈಕೆ ಇಲಾಖೆಯ
ಜವಾಬ್ದಾರಿಯಾಗಿರುತ್ತದೆ.


ಈ ಮಂದಿರದಲ್ಲಿ ಸರ್ಕಾರ 5 ರಿಂದ 16 ವರ್ಷ ಒಳಗಿನ ಅನಾಥ ಮಕ್ಕಳ, ಬಿಕ್ಷಾಟನೆ ಮಾಡುತ್ತಿದ್ದ ಮಕ್ಕಳ, ಸಿಂಗಲ್ ಪೇರೆಂಟ್ ಮಕ್ಕಳು, ನಿರ್ಗತಿಕ ಮಕ್ಕಳ ಪಾಲನೆ ಪೋಷಣೆ ಮಾಡುತ್ತದೆ.
ಮಂದಿರದ ಬಳಗೆ ಯಾವುದೇ ಮೊಬೈಲ್ ಫೋನ್ ಬಳಸುವಂತಿಲ್ಲ,,, ಸಿಬ್ಬಂದಿಗಳು ಬಹಳ ಆತ್ಮೀಯವಾಗಿ ಸ್ವಾಗತಿಸಿದರು, 40 ಜನ ಮಕ್ಕಳಿದ್ದಾರೆ ಎಲ್ಲರೊಂದಿಗೆ ತಮಾಷೆಯಿಂದ ಹಾಸ್ಯವಾಗಿ ಮಾತನಾಡಿ ಒಂದು ಇಪ್ಪತ್ತು ನಿಮಿಷ ಸಂತಸ ಪಟ್ಟೆವು, ನಾನು ಒಂದು ಮ್ಯಾಜಿಕ್ ಮಾಡುವುದನ್ನು ಕಲಿಸಿಕೊಟ್ಟೆ, ನಾನು ಬಾಳ್ಳುಪೇಟೆ ಹತ್ತಿರ ಯಡೇಹಳ್ಳಿ ಅಂದ ತಕ್ಷಣ ಬಾಳ್ಳುಪೇಟೆಯ ಮೂವರು ಮಕ್ಕಳಲ್ಲಿದ್ದರೂ ಅವರು ಬಂದು ನನ್ನ ಕೈ ಹಿಡಿದು ನಿಂತುಕೊಂಡಿದ್ದರು ಮನಸ್ಸಿಗೆ ನೋವಾಯ್ತು.
ಬಾಲ ಮಂದಿರದ ಸಿಬ್ಬಂದಿಗಳು ಬಾಲ ಮಂದಿರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ರೂಮುಗಳು ನೆಲ ಶೌಚಾಲಯ ಮಂಚ ಹಾಸಿಗೆ ಸ್ವಚ್ಛತೆಗೆ ಮಹತ್ವ ಕೊಟ್ಟು ಸ್ವಚ್ಛತೆಯಿಂದ ಕಾಪಾಡಿದ್ದಾರೆ.. ಮಕ್ಕಳ ಮುಖದಲ್ಲಿ ನಗು, ಶುಬ್ರ ಬಟ್ಟೆಗಳಿಂದ ಕಂಗೊಳಿಸುತ್ತಿದ್ದರು.
ಊಟವೆಂತು ತುಂಬಾ ರುಚಿಕರವಾಗಿ ಶುದ್ಧವಾಗಿ ಮಾಡಿದ್ದರು.. ನಾನು ಸರ್ಕಾರ ನಡೆಸುವ ನೂರಾರು ವಸತಿಗೃಹಗಳು ಹಾಸ್ಟೆಲ್ಗಳಿಗೆ ಭೇಟಿ ನೀಡಿದ್ದೇನೆ.. ಆದರೆ ಇಷ್ಟು ಅಚ್ಚುಕಟ್ಟಾದ ನಿರ್ವಹಣೆಯ ಕೇಂದ್ರ ನಾನು ನೋಡಿರಲಿಲ್ಲ.
ಚಿಕ್ಕ ಮಕ್ಕಳಿಗೆ ಕಲಿಯಲು ಮತ್ತು ಅದ್ಭುತ ಮನುಷ್ಯರಾಗಿ ಅರಳಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ ಇಲ್ಲಿಯ ಸಿಬ್ಬಂದಿ. ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಕೆಲಸ ನಿರ್ವಹಿಸುವ ಅಧೀಕ್ಷಕರಾದ ಸಿಎನ್ ನೀಲಕಂಠಪ್ಪ, ಎರಡನೇ ದರ್ಜೆ ಅಧೀಕ್ಷಕರಾದ ಗೀತಾ ಡಿ ಎಂ, ಪ್ರಥಮ ದರ್ಜೆ ಸಹಾಯಕರಾದ ರೂಬಿನ ರೋಹಿ, ದ್ವಿತೀಯ ದರ್ಜೆ ಸಹಾಯಕರಾದ ಸುಜಾತ ಎ ಸಿ, ಡಿ ಇ ಓ ಆದಂತ ಇಂದಿರಾ, ಆಪ್ತ ಸಮಾಲೋಚಕರಾದ ಸರಸ್ವತಿ, ಗೃಹ ಪಾಲಕರಾದ ಚರಣ್ ರಾಜ್ ಡಿ, ಕಚೇರಿ ಸೇವಕರಾದ ರಮೇಶ್, ಬಾಣಸಿಗರಾದ ರೇಣುಕಾ, ಅಡುಗೆ ಸಹಾಯಕರಾದ ಪುಷ್ಪಲತಾ, ಪ್ರಥಮ ರಕ್ಷಕರಾದ ನವೀನ್ ಕುಮಾರ್ ಕೆ ಪಿ, ದ್ವಿತೀಯ ರಕ್ಷಕರಾದ ಸೋಮೇಶ್, ತೃತೀಯ ರಕ್ಷಕರಾದ ಚಂದ್ರಶೇಖರ್ ಎ ಎಸ್, ಬಟ್ಟೆಗಳನ್ನು ಸ್ವಚ್ಛಗೊಳಿಸುವ ಪುಟ್ಟರಾಜು, ಸ್ವಚ್ಛತೆಗಾರರಾದ ಅಭಿಲಾಷ ಜೆ ಪಿ, ಇವರೆಲ್ಲರ
ಶ್ರದ್ಧಾಭಕ್ತಿಯ ಕಾರ್ಯವೈಖರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು.
ಪ್ರತಿದಿನದ ಶುಭಾಷಿತ ಫಲಕದಲ್ಲಿ ಹೀಗೆ ಬರೆದಿತ್ತು

ಹಂಗಿಸಿದವರಿಗೆ ಹಂಗಿಸಿ
ನಿಂದಿಸಿದವರಿಗೆ ನಿಂದಿಸಿ
ಸರಿಸಮಾನಗಬೇಡ
ಕೃಷ್ಣನಾಗಲು ನಿಮಿಷ ಸಾಕು
ಶ್ರೇಷ್ಠನಾಗಲು ವರುಷಗಳು ಬೇಕು
ಸರ್ವ ಜೀವಿಗಳು ಸುಖವಾಗಿರಲಿ
ನಮೋ ಬುದ್ಧಾಯ.

ಯಡೇಹಳ್ಳಿ ಆರ್ ಮಂಜುನಾಥ್

Related posts

ಪ್ರವಾಸೋದ್ಯಮ ದಿನಾಚರಣೆ

Bimba Prakashana

ಉಚ್ಚoಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು

Bimba Prakashana

ಅಕ್ರಮ ನಾಮ ಫಲಕ ತೆರವು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More