ಶ್ರೀಮತಿ ಶಾರದ ಕೆ.ಎನ್ ರಾಜಶೇಖರ ಪ್ರೌಢಶಾಲೆ ಕೆ.ಹೊಸಕೋಟೆ. ಇಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮಲ್ನಾಡ್ ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಶ್ರೀ ಎನ್.ಕೆ ಶಾಮರಾವ್ ರವರು, ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರದ ಶಾಸಕರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ರವರು, ಉಪಾಧ್ಯಕ್ಷರಾದ ಎನ್ ಬಿ ಉದಯ್ ಕುಮಾರ್, ಕಾರ್ಯದರ್ಶಿಗಳಾದ ಶ್ರೀ ಪಿ.ಎಸ್ ಮೋಹನೇಶ್ವರ , ಉಪಾಧ್ಯಕ್ಷರಾದ ಎನ್ ಬಿ ಉದಯಕುಮಾರ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎಸ್ ವಿ ರುರದ್ರಪ್ಪರವರು, ನಿಕಟಪೂರ್ವ ಕಾರ್ಯದರ್ಶಿಗಳಾದ ಶ್ರೀ ಕೆ.ಎ ಕೊಟ್ಟೂರಪ್ಪರವರು ನಿರ್ದೇಶಕರುಗಳಾದ ಶ್ರೀ ಮಧುಸೂದನ್ ರವರು.
ಸಮಾಜ ಸೇವಕರಾದ ರುದ್ರೇಶ್ ಕಾಡ್ಳೂರ್ ಹೆಚ್.ಹೆಚ್,ಸದಾನಂದ್ ಶಿಕ್ಷಕರುಗಳು, ಮುಂತಾದವರು ಉಪಸ್ಥಿತರಿದ್ದರು .
ಕಾರ್ಯಕ್ರಮವನ್ನು ಮಲ್ನಾಡ್ ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಶ್ರೀ ಎನ್ ಕೆ ಶ್ಯಾಮ್ ರಾವ್ ರವರು ಉದ್ಘಾಟಿಸಿದರು. ಶ್ರೀಮತಿ ಶಾರದ ಕೆ.ಎನ್ ರಾಜಶೇಖರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಂ.ಪಿ ಶಿವಕುಮಾರ್ ರವರು ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ರವರು ಇವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ನಾವು ಯಾರನ್ನಾದರೂ ಮಾದರಿಯನ್ನಾಗಿ ತೆಗೆದುಕೊಂಡಾಗ ನಮ್ಮ ಜೀವನದಲ್ಲಿ ಗುರಿಯನ್ನು ಸಾಧಿಸಲು ಸುಲಭವಾಗುತ್ತದೆ ಎಂದರು. ಮಲ್ನಾಡ್ ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಶ್ರೀ ಎನ್.ಕೆ ಶಾಮರಾವ್ ರವರು ಮಾತನಾಡಿ ಸಂಸ್ಥೆಯು ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿರುವ ಮಕ್ಕಳ ಹೆತ್ತವರು ಭಾಗ್ಯವಂತರು.ಈ ಸೌಲಭ್ಯಗಳನ್ನು ಇನ್ನಷ್ಟು ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಪಿ.ಎಸ್ ಮೋಹನೇಶ್ವರ್ ರವರು ಮಾತನಾಡಿ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪ್ರತಿಭೆಯು ಅನಾವರಣಗೊಳ್ಳುವ ಒಂದು ಸುಸಂದರ್ಭ ಎಂದರು.