ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ಸೋಮವಾರ “ರಾಷ್ಟ್ರೀಯ ರೈತರ ದಿನಾಚರಣೆ – ಕೃಷಿಕ ಸಮಾಜದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಿಸಾನ್ ಗೋಷ್ಠಿ” ಕಾರ್ಯಕ್ರಮ.
ಸಕಲೇಶಪುರ ನಗರದ ಬಿ ಎಂ ರಸ್ತೆಯಲ್ಲಿನ ಲಯನ್ಸ್ ಸೇವಾ ಸಂಸ್ಥೆಯ, ಲಯನ್ಸ್ ಹಾಲ್ ನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಕೃಷಿಕ ಸಮಾಜ, ಲಯನ್ಸ್ ಸೇವಾ ಸಂಸ್ಥೆ, ಕೃಷಿ ಪರಿಕರಗಳ ಮಾರಾಟಗಾರರ ಸಂಘ, ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ “ರಾಷ್ಟ್ರೀಯ ರೈತರ ದಿನಾಚರಣೆ – ಕೃಷಿಕ ಸಮಾಜದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಿಸಾನ್ ಗೋಷ್ಠಿ” ಕಾರ್ಯಕ್ರಮ ನಡೆಯಲಿದೆ
ಸಹಾಯಕ ಕೃಷಿ ನಿರ್ದೇಶಕರು ಮತ್ತು ಕಾರ್ಯಕ್ರಮದ ಆಯೋಜಕರ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಕಲೇಶಪುರ ತಾಲ್ಲೂಕಿನ ಸಮಸ್ತ ರೈತಬಾಂಧವರನ್ನು ಕೃಷಿ ಪರಿಕರಗಳ ಮಾರಾಟಗಾರರ ಸಂಘ, ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಎಲ್ಲಾ ಇಲಾಖೆಗಳ ಪರವಾಗಿ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಲು ಪ್ರೀತಿ ಪೂರಕವಾಗಿ ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ.
next post