ವರದಿ ರಾಣಿ ಪ್ರಸನ್ನ
ಹೊಸ ವರ್ಷದ ಮೊದಲ ಹಬ್ಬದ ದಿನದಂದೇ ಬೆಳ್ಳಂಬೆಳಗ್ಗೆ NH 75 ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಮನ ಆರ್ಭಟ.
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕ್ಯಾಂಟೀನ್ ಗೆ ನುಗ್ಗಿದ ಲಾರಿ. ಗುಲಗಳಲೆಯ ಚಿಕ್ಕಿ ಫ್ಯಾಕ್ಟರಿ ಬಳಿ ಘಟನೆ
ಸಕಲೇಶಪುರದ ಗುಲಗಳಲೇ ಬಳಿ ಘಟನೆ ಹಾಸನ ಕಡೆಯಿಂದ ಬರುತ್ತಿದ್ದ ,VRL ಕಂಪೆನಿಯ ಲಾರಿ ರಸ್ತೆಯ ಬದಿಯ
ಕ್ಯಾಂಟಿನ್‌ಗೆ ನುಗ್ಗಿದ ಲಾರಿ,ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಚಿಂತಾಜನಕ.
ಚಿತ್ರದುರ್ಗ ಮೂಲದ ವೀರೇಶ್ ಮೃತ ವ್ಯಕ್ತಿ,ಗಾರೆ ಕೆಲಸಕ್ಕೆ ಬಂದಿದ್ದ ವೀರೇಶ್, ಲಾರಿಯಲ್ಲಿ ಮೃತಪಟ್ಟವನು ಗುರುತು ಪತ್ತೆಯಾಗಿಲ್ಲ
ಗಾಯಾಳುಗಳು ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಲಾರಿ ನುಗ್ಗಿದ ರಭಸಕ್ಕೆ ನೆಲ ಸಮವಾದ ಕ್ಯಾಂಟಿನ್.
ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಲಾರಿಯಡಿ ಕ್ಯಾಂಟೀನ್ ಮುಂದೆ ನಿಲ್ಲಿಸಿದ್ದ ಬೈಕ್ ಗಳು ಸಿಲುಕಿವೆ . ಲಾರಿ ಕ್ಯಾಂಟೀನ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಹಿಂಬದಿಯಿದ್ದ ಲಾರಿಗಳಿಗೆ ಯಾವುದೇ ಹಾನಿಯಾಗಿಲ್ಲ.
ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟಿನ್‌ಗೆ ನುಗ್ಗಿರುವ ಲಾರಿ,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


