ಆಲೂರುನಲ್ಲಿ ರೈಲು ನಿಲುಗಡೆ ರದ್ದು ಮಾಡಿದ ರೈಲ್ವೆ ಇಲಾಖೆಯ ಕ್ರಮವನ್ನು ಮಾಜಿ ಸಚಿವರಾದ ಹೆಚ್ ಕೆ ಕುಮಾರ ಸ್ವಾಮಿಯವರು ಖಂಡಿಸಿದ್ದಾರೆ.
ಜಾತ್ಯಾತೀತ ಜನತಾ ದಳದ ಸತತ ಪ್ರಯತ್ನ ಸೇರಿದಂತೆ ಹಲವಾರು ಸಂಘಟನೆಗಳ ಹೋರಾಟದ ಫಲವಾಗಿ ರೈಲು ಆಲೂರುನಲ್ಲಿ ನಿಲುಗಡೆ ಆಗಿತ್ತು.
ಈ ವಿಚಾರದಲ್ಲಿ ಜನತೆ ಬಹಳ ಸಂತಸ ಪಟ್ಟಿದ್ದರು. ರೈಲ್ವೆ ಎಂಬುದು ಸೇವಾ ಇಲಾಖೆ. ಲಾಭದಾಯಕ ಇಲಾಖೆ ಅಲ್ಲ. ಏಕಾ ಏಕಿಯಾಗಿ ರೈಲನ್ನು ಆಲೂರಿನಲ್ಲಿ ನಿಲ್ಲಿಸದೆ ನಿಲುಗಡೆಯನ್ನು ರದ್ಧತಿ ಮಾಡಿರುವ ಕಾರ್ಯ ಜನ ವಿರೋಧಿ. ರೈಲ್ವೆ ಇಲಾಖೆಯ ಈ ಕ್ರಮವನ್ನು ಜಾತ್ಯಾತೀತ ಜನತಾ ದಳ ಖಂಡಿಸುತ್ತದೆ. ಈ ಕ್ರಮವನ್ನು ಪುನರ್ ಪರಿಶೀಲನೆ ಮಾಡಿ ಆಲೂರುನಲ್ಲಿ ರೈಲು ನಿಲುಗಡೆ ಆಗಲೇ ಬೇಕು ಎಂದು ಹೇಳಿದರು.
ಆಲೂರು ಒಂದು ತಾಲೂಕು. ಪ್ರತಿ ತಾಲೂಕುಗಳಲ್ಲಿ ರೈಲು ನಿಲ್ಲಲೇ ಬೇಕು. ಇದರ ಬಗ್ಗೆ ತಕ್ಷಣ ರೈಲ್ವೆ ಇಲಾಖೆ ಗಮನ ಹರಿಸುವಂತೆ ಮಾಜಿ ಸಚಿವರು ಅಗ್ರಹಿಸಿದ್ದಾರೆ.
previous post
next post