ವರದಿ ರಾಣಿ ಪ್ರಸನ್ನ
ಹೊಸಕೋಟೆ ಬೆಟ್ಟದ ರೋಡಿಕ್ ಕಾಫಿ ಎಸ್ಟೇಟ್‌ನವರಿಗೆ ಗಣಿಗಾರಿಕೆಗಾಗಿ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ.:-
(ಶಾಸಕರಿಗೆ ಹಾಗೂ ತಾಲ್ಲೂಕು ದಂಡಧಿಕಾರಿಗಳಿಗೆ ಮನವಿ ಪತ್ರ ಕೊಡಲಾಯಿತು.)
(ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ವಿವಿಧ ದಲಿತ ಸಂಘಟನೆಯವರಿಂದ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ.)
ಸಕಲೇಶಪುರ :- ತಾಲ್ಲೂಕಿನ ಯಸಳೂರು ಹೋಬಳಿ, ಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೊಸಕೋಟೆ ಬೆಟ್ಟ ಆರಾಧನ ಎಸ್ಟೇಟ್ ಪಕ್ಕದಲ್ಲಿರುವ ರೋಡಿಕ್ ಕಾಫಿ ಎಸ್ಟೇಟ್‌ನವರಿಗೆ ಅಲಂಕಾರಿಕ ಶಿಲಾ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಸುತ್ತ ಮುತ್ತ ಜನತೆ ಮತ್ತು ಈ ಭಾಗದಲ್ಲಿ ವಾಸಿಸುವ ಕಾಡು ಪ್ರಾಣಿಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಹಾಗೂ ಈ ಭಾಗದಲ್ಲೇ ಹರಿಯುತ್ತಿರುವ ಝರಿಗಳು, ನದಿಗಳು, ಹರಿವಿಗೆ ತೊಡಕುಂಟಾಗಿರುತ್ತದೆ.
ಪಶ್ಚಿಮ ಘಟ್ಟದ ಪ್ರದೇಶಕ್ಕೆ ಸೇರಿದ ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿಗಳ ಎತ್ತರದಲ್ಲಿದ್ದು.ಈ ಬೆಟ್ಟದ ಬುಡದಲ್ಲಿ 30 ಗ್ರಾಮಗಳದ್ದು. ಎಲ್ಲಾ ರೈತಾಪಿ ಕುಟುಂಬದವರಾಗಿರುತ್ತಾರೆ. ಅವರುಗಳು ತೋಟಗಳಿಗೆ ಹಾಗೂ ಕುಡಿಯಲು ಈ ಮೂಲದಿಂದ ಬರುವ ನೀರನ್ನೇ ಅವಲಂಬಿಸಿರುತ್ತಾರೆ. ಆದುದರಿಂದ ಈ ಪಶ್ಚಿಮ ಘಟ್ಟ ಪ್ರದೇಶಕ್ಕೆ ಒಳಪಡುವ ಹಾಗೂ ಸಾರ್ವಜನಿಕರ ವಿರೋಧವಿರುವ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ನೀಡಿರುವ ಆದೇಶವನ್ನು ವಾಪನ್ ಪಡೆದು ಈ ಪೂರ್ಣಪ್ರದೇಶವನ್ನು ಗಣಿಗಾರಿಕಾ ನಿಷೇದಿತ ಪ್ರದೇಶವೆಂದು ಘೋಷಿಸಬೇಕೆಂದು ಇಂದು ತಾಲ್ಲೂಕು ಕಚೇರಿಯ ಮುಂದೆ ಕರ್ನಾಟಕ ದಲಿತ ಸಂಘರ್ಸ ಸಮಿತಿ (ರಿ ) ಹಾಗೂ ಕೊಡಗು ಜಿಲ್ಲಾ ಜಂಟಿ ಹೋರಾಟ ಸಮಿತಿ ಹಾಗು ದಲಿತಪರ ಸಂಘಟನೆಗಳ ಒಕ್ಕೂಟ.ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮಸ್ಥರುಗಳು ಮತ್ತು ಕೊಡಗು ಭಾಗದ ಗ್ರಾಮಸ್ಥರುಗಳ ಸಹಯೋಗದೊಂದಿಗೆ ಇಂದು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಘೋಷಣೆಗಳನ್ನು ಕೂಗುವುದರೊಂದಿಗೆ ಪ್ರತಿಭಟನೆ ಕೈಗೊಳ್ಳಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಸಿಮೆಂಟ್ ಮಂಜು ಹಾಗೂ ದಂಡಾಧಿಕಾರಿ ಮೇಘನ ಜಿ ಅವರಿಗೆ ಮನವಿ ಪತ್ರ ಸಲ್ಲಿಸುವುದರೊಂದಿಗೆ ಆದಷ್ಟು ಬೇಗ ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚಿಸಿ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಪ್ರತಿಭಟನಾಕಾರರು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ರಾಜಶೇಖರ್,ತಾಲ್ಲೂಕು ದಲಿತ ಸಂಘರ್ಸ ಸಮಿತಿ ಸಂಚಾಲಕರದ ಶಿವಕುಮಾರ್, ಬಸವರಾಜ್ ಬೆಳಗೋಡು,ಯಸಳೂರು ಹೋಬಳಿಯ ಸಂಚಾಲಕರಾದ ವಸಂತ್ ಹೊಸೂರು , ಕೊಡಗು ಜಿಲ್ಲೆ ಸಂಚಾಲಕರು ಲೋಕೇಶ್, ಶಿವಕುಮಾರ್ ನರೂರು, ಜಯಪ್ಪ ಹೊಸೂರು, ಹೆಚ್. ವಿ ಕೃಷ್ಣ ಹೊಸೂರು, ಪುಟ್ಟೇಗೌಡ ಹೊಸಕೋಟೆ, ರಾಜೇಗೌಡ, ಪುಟ್ಟಸ್ವಾಮಿ ಹೊಸಕೋಟೆ, ರಮೇಶ್ ಹೆಚ್. ಕೆ,ಮಂಜುನಾಥ್ ಯಸಳೂರು, ರಾಜಪ್ಪ, ಪೊನ್ನಪ್ಪ, ಧರ್ಮ ಹೆನ್ಲಿ,ಮಹೇಶ್ ಬೈಕೆರೆ, ಹಿರಿಯ ದಲಿತ ಮುಖಂಡರುಗಳಾದ ರಾಮಚಂದ್ರ, ರಾಜಶೇಖರ್, ರಂಜಿತ್ ಕಳಲೆ, ಚಂದ್ರಶೇಖರ ಕೆ.ಆರ್ ಕಳಲೆ,ಮುಂತಾದವರು ಉಪಸ್ಥಿತರಿದ್ದರು .
previous post
next post