Blog

ಆಲೂರು ಲಯನ್ಸ್ ನಿಂದ ಕಾರ್ಯಕ್ರಮ

ಆಲೂರು ಲಯನ್ಸ್ ಇಂಟರ್ನ್ಯಾಷನಲ್ ವತಿಯಿಂದ ಅಡಗೂರು ಚೇತನ್ ಗುರುಜಿಯವರ ಸಾರತ್ಯದಲ್ಲಿಪಾಳ್ಯದಲ್ಲಿ ನಡೆಯುತ್ತಿರುವ ಆರೋಗ್ಯಕ್ಕಾಗಿ ಯೋಗ ಶಿಬಿರದಲ್ಲಿ, ಮನೆಯೇ ಮಂತ್ರಾಲಯ ಮನಸೆ ದೇವಾಲಯ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜೀವ್ ಆಯುರ್ವೇದ ಆಸ್ಪತ್ರೆ ಹಾಸನ ಸಂಸ್ಥೆಯ ಪ್ರಾನ್ಸುಪಾಲರಾದ ಡಾ ನಿತಿನ್ ರವರು ಆರೋಗ್ಯದ ಬಗ್ಗೆ ಹಾಗೂ ಆಯುರ್ವೇದದ ಬಗ್ಗೆ ತಿಳಿಸಿದರು, ಆಕಾಶವಾಣಿ ಹಾಸನ ಇದರ ವಾಚಕರಾದ ಡಾ ವಿಜಯ್ ಅಂಗಡಿಯವರು ಜೇನು ಸಾಕಾಣಿಕೆ ಹಾಗೂ ಜೇನುತುಪ್ಪ ಬಳಸುವುದರಿಂದ ಹಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.

ಇದೆ ಸಂದರ್ಭದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಜಿಲ್ಲಾ ಪುರಸ್ಕಾರ ಪಡೆದಿರುವ ಕನ್ನಡ ಪರ ಹೋರಾಟಗಾರರು ಆದ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಹಾಗೂ ಈ ಬಾರಿಯ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕಾರ ಪಡೆದಿರುವ ನಾಗವೇಣಿ ದೇವರಾಜ್ ಇಬ್ಬರಿಗೂ ಪಾಳ್ಯ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಸಮಾಜ ಸೇವಕರು ಆದ ಎಸ್ ಎನ್ ಪ್ರಕಾಶ್, ಪವಿತ್ರ ಪ್ರಕಾಶ್ ರವರು ಅಭಿನಂದನೆಗಳನ್ನು ತಿಳಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ಆಲೂರು ಲಯನ್ಸ್ ಟ್ರಸ್ಟ್ ನ ಅಧ್ಯಕ್ಷರು ಆದ ರೇಣುಕಾ ಪ್ರಸಾದ್,ಯೋಗ ಗುರು ಚೇತನ್ ಗುರುಜಿ ಆಲೂರು ಲಯನ್ಸ್ ಇಂಟರ್ನ್ಯಾಷನಲ್ ಕಾರ್ಯದರ್ಶಿ ಪ್ರಥಾಪ್, ಪ್ರಕಾಶ್ ಎಸ್ ಎನ್, ಪ್ರೇಮ ರಮೇಶ್, ನಾಗವೇಣಿ ದೇವರಾಜ್,ರಘುಪಾಳ್ಯ ಕರವೇ, ಸುಧೀಶ್,ದೇವೆಂದ್ರಪ್ಪ ಶಿಕ್ಷಕರು ಹಾಗೂ ಈ ಕಾರ್ಯಕ್ರಮದಲ್ಲಿ ಪಾಳ್ಯದ ಯೋಗ ಶಿಬಿರಾರ್ಥಿಗಳು ಹಾಗೂ ಆಲೂರಿನ ಯೋಗ ಶಿಬಿರಾರ್ಥಿಗಳು ಭಾಗವಹಿಸಿದ್ದರು

Related posts

ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆದ ಆಲೂರು ತಾಲೂಕು ವಿದ್ಯಾರ್ಥಿಗಳು

Bimba Prakashana

ಹಳೆ ಪಾಳ್ಯದಲ್ಲಿ ಎನ್ ಎಸ್ ಎಸ್ ಶಿಬಿರ

Bimba Prakashana

ಸಕಲೇಶಪುರದಲ್ಲಿ ತಜ್ಞ ವೈದ್ಯರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More