Blog

ಆಲೂರುನಲ್ಲಿ ರೈಲು ನಿಲುಗಡೆ ರದ್ದು – ಪುನರ್ ಪರಿಶೀಲನೆಗೆ ದೆಹಲಿಗೆ ಭೇಟಿ ನೀಡಿ ಮನವಿ ಮಾಡಿದ ಹೇಮಂತ್

ದಿನಾಂಕ 18 12 20 24ರಂದು
ಹುಬ್ಬಳ್ಳಿಯ ನೈರುತ್ಯ ರೈಲ್ವೆ ಇಲಾಖೆಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾತ್ಸವ್ ರವರನ್ನ ರಾಧಮ್ಮ ಜನಸ್ಪಂದನ ಸಂಸ್ಥೆಯ ಅಧ್ಯಕ್ಷರಾದ ಹೇಮಂತ್ ಕುಮಾರ್ ಅವರು ಭೇಟಿ ಮಾಡಿ ಆಲೂರು ರೈಲು ನಿಲುಗಡೆ ರದ್ದು ಮಾಡಿರುವ ಬಗ್ಗೆ ಮತ್ತೊಮ್ಮೆ ಪುನರ್ ಪರಿಶೀಲಿಸಿ ನಿಲುಗಡೆಯ ಆದೇಶವನ್ನು ಆಲೂರು ತಾಲೂಕಿನ ಸಮಸ್ತ ನಾಗರಿಕರಾಗಿ
ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.


ಮಲ್ನಾಡ್ ಶೋಗೆ ಪ್ರತಿಕ್ರಿಸಿದ ಹೇಮಂತ್ ಕುಮಾರ್ ಅವರು ಆಲೂರು ರೈಲು ನಿಲುಗಡೆ ಆದೇಶನ ರದ್ದುಪಡಿಸಿರುವ ರೈಲ್ವೆ ಇಲಾಖೆಯು ತಿಂಗಳಿಗೆ ಆದಾಯವು 9800 ಮಾತ್ರ ಕಳೆದ ತಿಂಗಳು ನವಂಬರಲ್ಲಿ ಮತ್ತು ಅಕ್ಟೋಬರ್ ನಲ್ಲಿ ಬಂದಿದೆ ಆದ್ದರಿಂದ ಈ ಆದೇಶವನ್ನು ರೈಲ್ವೆ ಬೋರ್ಡ್ ನಿಯಮದಂತೆ ರದ್ದು ಮಾಡಿದ್ದೇವೆ ಎಂದು ಕಮರ್ಷಿಯಲ್ ರೈಲ್ವೆ ಡಿಪಾರ್ಟ್ಮೆಂಟ್ ನ ಅಧಿಕಾರಿಯಾದ ಸತ್ಯಪ್ರಕಾಶ್ ಶಾಸ್ತ್ರಿಯವರು ನಮ್ಮ ಬಳಿ ಹೇಳಿದ್ದಾರೆ ಅದಕ್ಕೆ ನಾವು ಆದಾಯದ ನೆಪಕ್ಕಾಗಿ ರೈಲ್ವೆ ಇಲಾಖೆಯು ಸೇವೆಯನ್ನು ನಿಲ್ಲಿಸಬೇಡಿ ಇದರಿಂದ ತಾಲೂಕಿಗೆ ಹಿನ್ನಡೆಯಾಗುತ್ತದೆ ಮತ್ತೊಮ್ಮೆ ಪರಿಶೀಲಿಸಿ ಎಂದು ಅಂಕಿ ಅಂಶಗಳ ಪ್ರಕಾರ ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ತಾಲೂಕಿನ ಕೆಲವೊಂದು ಪ್ರಮುಖ ನಿಲ್ದಾಣಗಳಲ್ಲಿ ಆದಾಯ ಕಮ್ಮಿಯಿದ್ದರೂ ಕೂಡ ನಿಲುಗಡೆ ಆಗುತ್ತಿದೆ ಅಂತಹ ತಾಲೂಕುಗಳ ನಿಲ್ದಾಣವನ್ನ ರೈಲ್ವೆ ಇಲಾಖೆ ಗಮನಕ್ಕೆ ತಂದಾಗ ಅವರು ನಮ್ಮ ಅಂಶವನ್ನು ಗಮನಿಸಿ ಅವರ ಬಳಿ ವ್ಯಾಪ್ತಿಯಲ್ಲಿ ಆಗುವಂತಹ ಪರಮಾಧಿಕಾರವನ್ನು ಬಳಸಿಕೊಂಡು ಇನ್ನು ಮೂರು ತಿಂಗಳು ಮಟ್ಟಿಗೆ ಪ್ರಾಯೋಗಿಕವಾಗಿ ನಿಲುಗಡೆ ಆದೇಶವನ್ನು ಕೊಡಲಾಗುವುದು ಎಂದು ಹೇಳಿದ್ದಾರೆ.

ನಿಮಗೆ ಶಾಶ್ವತವಾಗಿ ಬೇಕಾಗಿದ್ದಲ್ಲಿ ಕೇಂದ್ರ ರೈಲ್ವೆ ಮಂತ್ರಿಗಳೇ ಖುದ್ದಾಗಿ ಇಂತಹ ಆದಾಯ ಇಲ್ಲದಂತಹ ನಿಲ್ದಾಣಗಳನ್ನ ಶಾಶ್ವತ ನಿಲುಗಡೆಗಾಗಿ ಆ ಕ್ಷೇತ್ರದ ಸಂಸದರ ವಿಶೇಷ ಮನವಿಯನ್ನು ಬಳಸಿಕೊಂಡು ಅವಕಾಶ ಕಲ್ಪಿಸಿ ಕೊಡಬಹುದು ಎಂದು ನಮ್ಮ ಬಳಿ ಹೇಳಿದ್ದಾರೆ.

ಅಂತಿಮವಾಗಿ ನಾನು ಬುಧವಾರ 5 ಗಂಟೆಗಳ ಸುದೀರ್ಘ ಚರ್ಚೆಯೊಂದಿಗೆ ಎಲ್ಲಾ ಅಧಿಕಾರಿಗಳನ್ನು ಗಮನಸೆಳೆದು ಸೆಕ್ರೆಟರಿ ಸುನಿಲ್ ಅವರ ಸಹಾಯದೊಂದಿಗೆ ಮತ್ತೊಮ್ಮೆ ಆಲೂರು ರೈಲ್ವೆ ನಿಲ್ದಾಣಕ್ಕೆ ಮೂರು ತಿಂಗಳ ಮಟ್ಟಿಗೆ ಪ್ರಾಯೋಗಿಕವಾಗಿ ಆದೇಶವನ್ನು ಕೆಲವೇ ದಿನಗಳಲ್ಲಿ ರೈಲ್ವೆ ಇಲಾಖೆಯು ಹೊರಡಿಸುತ್ತದೆ ಎಂದು ಮಾಧ್ಯಮದ ಮುಖಾಂತರ ತಾಲ್ಲೂಕಿನ ಸಮಸ್ತ ನಾಗರಿಕರಿಗೆ ಗಮನಕ್ಕೆ ತರುತ್ತಿದ್ದೇನೆ ಹಾಗೂ ನಮ್ಮ ಕ್ಷೇತ್ರದ ಸಂಸದರಾದ ಶ್ರೇಯಸ್ ಪಟೇಲ್ ಅವರಿಗೆ ದೂರವಾಣಿ ಕರೆ ಮುಖಾಂತರ ಮಾತನಾಡಿ ಅವರ ಸಹಕಾರವನ್ನು ಪಡೆದು ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣವೇ ನನಗೆ ಕಾಗದ ಪತ್ರವನ್ನು ತಲುಪಿಸಿ ನಮ್ಮ ಹೋರಾಟಕ್ಕೆ ಬೆಂಬಲಿಸಿದ್ದಾರೆ ಕ್ಷೇತ್ರದ ಸಂಸದರು ಮುಂದಿನ ದಿನದಲ್ಲಿ ಕೇಂದ್ರದ ರೈಲ್ವೆ ಮಂತ್ರಿ ಬಳಿ ಶಾಶ್ವತ ನಿಲುಗಡೆಗಾಗಿ ಮನವಿ ಸಲ್ಲಿಸಿ ಆದೇಶವನ್ನು ಮಾಡಿಸಿಕೊಡುತ್ತೇನೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ. ಅವರಿಗೆ ನಾನು ರಾಧಮ್ಮ ಜನಸ್ಪಂದನ ವತಿಯಿಂದ ಮತ್ತು ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ಧನ್ಯವಾದಗಳು ತಿಳಿಸುತ್ತೇನೆ.

ಈಗ ನಮ್ಮ ಮನವಿ ತಕ್ಷಣ ಸ್ಪಂದಿಸಿದ ಅಧಿಕಾರಿಗಳಾದ ರೈಲ್ವೆ ಇಲಾಖೆ ಸೆಕ್ರೆಟರಿ ಸುನಿಲ್ ಅವರು ರೈಲ್ವೆ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾತ್ಸವ್ ಮತ್ತು ಕಮರ್ಷಿಯಲ್ ಡಿಪಾರ್ಟ್ಮೆಂಟ್ ಮುಖ್ಯಸ್ಥರಾದ ಸತ್ಯ ಪ್ರಕಾಶ್ ಶಾಸ್ತ್ರಿ ವಿಶೇಷವಾಗಿ ಧನ್ಯವಾದಗಳು ಅರ್ಪಿಸುತ್ತೇನೆ ಮೂರು ತಿಂಗಳ ಪ್ರಾಯೋಗಿಕ ರೈಲು ನಿಲುಗಡೆಗಾಗಿ ಆದೇಶ ಕೆಲವೇ ದಿನಗಳಲ್ಲಿ ರೈಲ್ವೆ ಇಲಾಖೆಯು ಹೊರಡಿಸಲಿದೆ…
ತಾಲೂಕಿನ ಸಮಸ್ತ ನಾಗರಿಕರಿಗೆ ನಮ್ಮ ಸಂಸ್ಥೆ ವತಿಯಿಂದ ಈ ತಾಲೂಕಿಗೆ ರೈಲ್ವೆ ಇಲಾಖೆಯಿಂದ ಶಾಶ್ವತವಾಗಿ ನಿಲಗಡೆ ಆದೇಶವನ್ನು ದೆಹಲಿಗೆ ಹೋಗಿ ಮುಂದಿನ ಫೆಬ್ರವರಿ ತಿಂಗಳಲ್ಲಿ ಕೇಂದ್ರ ರೈಲ್ವೆ ಮಂತ್ರಿಗಳನ್ನ ಭೇಟಿ ಮಾಡಿ ನಮ್ಮ ಕ್ಷೇತ್ರದ ಸಂಸದರೊಂದಿಗೆ ತರುತ್ತೇನೆ ಎಂದು ಮಾಧ್ಯಮದ ಮುಖಾಂತರ ಸಾರ್ವಜನಿಕರಿಗೆ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Related posts

ರಘು ಸಕಲೇಶಪುರ ಆಕ್ರೋಶ

Bimba Prakashana

ಆಲೂರು ತಾಲೂಕು ಕೆ ಹೊಸ ಕೋಟೆಯಲ್ಲಿ ಲಯನ್ಸ್ ಕಾರ್ಯಕ್ರಮ

Bimba Prakashana

ಜಲ ಜೀವನ್ – ಭೂಮಿ ಪೂಜೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More