ವರದಿ ರಾಣಿ ಪ್ರಸನ್ನ
ಕಸಬಾ ಹೋಬಳಿ ಬೆಳೆಗಾರರ ಸಂಘ(ರಿ.)ದ 2024-25 ನೇ ಸಾಲಿನ ಕಾರ್ಯಕಾರಿ ಮಂಡಳಿಯ 18 ನೇ ಮಾಸಿಕ ಸಭೆಯು ಪ್ರಸನ್ನಕುಮಾರ್ ಬಿ.ಡಿ, ಅಧ್ಯಕ್ಷರು, ಕ.ಹೋ.ಬೆ.ಸಂಘ ಇವರ ಅಧ್ಯಕ್ಷತೆಯಲ್ಲಿ ಹೆಚ್.ಡಿ.ಪಿ.ಎ ಸಭಾಂಗಣ, ಸಕಲೇಶಪುರ ಇಲ್ಲಿ ಇಂದು 17-12-2024 ರಂದು ನಡೆಯಿತು.
ಪ್ರಾರ್ಥನೆ ರೈತಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ನಂತರ ಅಗಲಿದ ಗಣ್ಯರಿಗೆ ನಮನ ಸಲ್ಲಿಸಿ ನಂತರ ಗ್ರಾಮ ಮಟ್ಟದ ಬೆಳೆಗಾರರ ಸಮಸ್ಯೆಗಳನ್ನು ಆಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಹೊಸ ವರ್ಷದ 2025ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ನಂತರ ಅಗಲಿದ ಗಣ್ಯರಿಗೆ ನಮನ ಸಲ್ಲಿಸಿ ಸಭಾ ನೋಟೀಸು ಓದಿ ದಾಖಲಿಸಿದರು
ಕೆ.ಜಿ.ಎಫ್ ಹಾಗೂ ಹೆಚ್.ಡಿ.ಪಿ.ಎ ಯ ಮಾಸಿಕ ಸಭೆಯಲ್ಲಿ ನೆಡೆದ ಚರ್ಚೆಗಳನ್ನ ತಿಳಿಸಲಾಯಿತು ದಿನ ದಿನದ ಕಾಫಿ ಮಾರುಕಟ್ಟೆಯಲ್ಲಿ ಬಾರೀ ದರ ವ್ಯತ್ಯಾಸ ಬಹು ಕಷ್ಟ-ಕಷ್ಟ, ಮಾರುವ ನಿರ್ಧಾರ ಏನು ಎತ್ತ ?- ಶ್ರೀ ಹೆಚ್.ಎಸ್. ಧರ್ಮರಾಜ್, ಗೀತಾ ಎಸ್ಟೇಟ್ ಮತ್ತು ಟ್ರೇಡಿಂಗ್ ಇವರು ಸುದೀರ್ಘವಾದ ಚರ್ಚೆಯ ಮೂಲಕ ತಿಳಿಸಿಕೊಟ್ಟರು.
ನಂತರ ಲಲಿತ ಕಲೆಗಳಲ್ಲಿ ರಾಜ್ಯ ಮಟ್ಟಕ್ಕೆ ಬಾಲ ಭವನದಿಂದ ಆಯ್ಕೆಯಾದ ಆರ್ನ ಮೇಗರಾಜ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ ಎಸ್ ಧರ್ಮರಾಜು, ಹೆಚ್ ಎಂ ವಿಶ್ವನಾಥ್ ಮಾಜಿ ಶಾಸಕರು , ಬಿ.ಡಿ.ಪ್ರಸನ್ನಕುಮಾರ್ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಸುಬ್ರಹ್ಮಣ್ಯ , ಗೌರವ ಕಾರ್ಯದರ್ಶಿಗಳು, ಮಹೇಶ್, ಉಪಾಧ್ಯಕ್ಷರು, ಮೇಘರಾಜ ಕೆ.ವಿ., ರಾಕೇಶ್ ಎನ್ .ಡಿ. ಖಜಾಂಚಿ , ಮಾಜಿ ಅಧ್ಯಕ್ಷರು ಉದಯ್ ಕುಮಾರ್ ಉಪಸ್ಥಿತರಿದ್ದರು
