ವಿಶೇಷ ವರದಿ : ನವೀನ್ ಬೈರಾಪುರ
ಕಳೆದ ಹಲವು ವರ್ಷಗಳ ಸಾರ್ವಜನಿಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳ ನಿಲುಗಡೆ ಮಾಡಲಾಗಿತ್ತು ಆದರೆ ಕಳೆದ ಮೂರು ನಾಲ್ಕು ದಿನಗಳಿಂದ ಇಲಾಖೆಯವರು ಟಿಕೆಟ್ ಸಂಗ್ರಹದ ಹಣ ಕಡಿಮೆ ಆಯಿತು ಎಂಬ ಪುನಃ ರೈಲು ನಿಲುಗಡೆಯನ್ನು ರದ್ದುಗೊಳಿಸಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹಲವಾರು ಗ್ರಾಮೀಣ ಭಾಗದ ರೈಲ್ವೆ ನಿಲ್ದಾಣಗಳಲ್ಲಿ ಪ್ಯಾಸೆಂಜರ್ ರೈಲುಗಳ ನಿಲುಗಡೆ ಮಾಡುತ್ತಾ ಬಂದಿರುವ ರೈಲ್ವೆ ಇಲಾಖೆಯವರು ತಾಲೂಕು ಕೇಂದ್ರವಾದ ಆಲೂರು ರೈಲ್ವೆ ನಿಲ್ದಾಣದಲ್ಲಿ ಕುಂಟು ನೆಪ ಹೇಳಿ ನಿಲುಗಡೆಯನ್ನು ರದ್ದುಗೊಳಿಸಿರುವುದು ತಾಲೂಕಿನ ಜನತೆಗೆ ಮಾಡಿದ ಅನ್ಯಾಯವಾಗಿದೆ.
ಅಷ್ಟೇ ಅಲ್ಲದೆ ಗುರುವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಆಲೂರಿಗೆ ದಂಪತಿಗಳಿಬ್ಬರಿಗೆ ಟಿಕೆಟ್ ನೀಡಿ ಆಲೂರಲ್ಲಿ ನಿಲುಗಡೆ ಮಾಡದೇ ಸಕಲೇಶಪುರ ನಿಲ್ದಾಣದಲ್ಲಿ ಅವರನ್ನು ಇಳಿಸಲಾಗಿದೆ.
ನಿಲುಗಡೆಯನ್ನು ರದ್ದುಗೊಳಿಸಿದ್ದರೆ ಯಶವಂತಪುರ ನಿಲ್ದಾಣದಲ್ಲಿ ಟಿಕೆಟ್ ಪಡೆದ ದಂಪತಿಗಳಿಗೆ ಆಲೂರಿಗೆ ಟಿಕೆಟ್ ನೀಡಿರುವುದಾದರೂ ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದರೆ ಆಲೂರಿನಲ್ಲಿ ನಿಲುಗಡೆ ರದ್ದುಗೊಳಿಸಿರುವುದು ರೈಲ್ವೆ ಇಲಾಖೆಯವರಿಗೆ ತಿಳಿದಿದೆಯೋ ಇಲ್ಲವೋ ನಾಲ್ವರು ನಾಗರಿಕರಿಗೆ ತೊಂದರೆ ನೀಡಬೇಕೆಂಬ ಉದ್ದೇಶದಿಂದ ಈ ರೀತಿ ರೈಲ್ವೆ ಇಲಾಖೆಯವರು ವರ್ತಿಸುತ್ತಿದ್ದಾರೆಯೇ ಅಥವಾ ಇಲಾಖೆಯವರ ನಮ್ಮ ಇಲಾಖೆಯವರಲ್ಲಿಯೇ ಸಂವಹನ ಇಲ್ಲವೇ ಎಂಬುದು ತಿಳಿಯದಾಗಿದೆ.
ರೈಲುಗಳ ಬರುವಿಕೆ ನಿಲುಗಡೆ ಕ್ರಾಸಿಂಗ್ ಪ್ರತಿಯೊಂದು ವಿಚಾರದ ಕ್ಷಣದ ಮಾಹಿತಿಯು ಸಹ ರೈಲ್ವೆ ಸಿಬ್ಬಂದಿಗಳಿಗೆ ರೈಲ್ವೆ ನೌಕರರಿಗೆ ಇರಬೇಕಲ್ಲವೇ ನಿಲ್ದಾಣದಲ್ಲಿ ನಿಲುಗಡೆ ರದ್ದುಗೊಳಿಸಿರುವ ವಿಚಾರವೇ ತಿಳಿಯದೆ ಇದ್ದರೆ ಇನ್ನೂ ರೈಲಿನ ಬರುವಿಕೆ ನಿಲುಗಡೆ ಮತ್ತೊಂದರ ವಿಚಾರಗಳು ಇವರಿಗೆ ಹೇಗೆ ತಿಳಿಯುತ್ತದೆ.
ಈ ರೀತಿಯ ಬೇಜವಾಬ್ದಾರಿ ವರ್ತನೆಯಿಂದಾಗಿ ಅಲ್ಲವೇ ಹಲವಾರು ಬಾರಿ ಅಪಘಾತಗಳು ಪ್ರಾಣ ಹಾನಿ ಸಂಭವಿಸುತ್ತಿರುವುದು ಇಷ್ಟ ಯಾವ ನಿಲ್ದಾಣದಲ್ಲಿ ನಿಲುಗಡೆ ಆಗುತ್ತದೆ ರೈಲು ಎಂಬುದರ ಐತಿಯೇ ಇಲ್ಲದೆ ಬೇರೆ ನಿಲ್ದಾಣದಿಂದ ಟಿಕೆಟ್ ಆಲೂರಿಗೆ ನೀಡಲಾಗುತ್ತದೆ ಎಂದರೆ ಇಲ್ವೇ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಂಡು ಕೈ ತುಂಬಾ ಸಂಬಳ ಪಡೆದುಕೊಂಡು ಆರಾಮಾಗಿದ್ದಾರೆಯೇ ಎಂಬುದು ತಿಳಿಯದಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಿಲುಗಡೆ ರದ್ದಾಗಿದ್ದರು ಸಹ ಟಿಕೆಟ್ ಹೇಗೆ ಬಂತು ಎಂಬುದನ್ನು ಕಂಡುಕೊಳ್ಳ ಬೇಕಾಗಿದೆ.
ಒಂದೆಡೆ ರೈಲು ನಿಲುಗಡೆ ರದ್ದಾಗಿರುವ ಬೇಸರ ಇನ್ನೊಂದೆಡೆ ರೈಲ್ವೆ ಇಲಾಖೆಯವರ ನಜವಬ್ದಾರಿತನದ ವರ್ತನೆ ಇವೆರಡರಿಂದಾಗಿಯೂ ಅನುಭವಿಸುತ್ತಿರುವವರು ಆಲೂರಿನ ಜನತೆ. ಇಷ್ಟಾದರೂ ಸಹ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದೆ ಏನು ಮಾಡುತ್ತಿದ್ದಾರೆ ಅವರಿಗೂ ಇದಕ್ಕೂ ಅವರಿಗೂ ಸಂಬಂಧವಿಲ್ಲವೇ ಎಂಬುದು ತಿಳಿಯದಾಗಿದ್ದು ಸಂಬಂಧಪಟ್ಟವರು ಶೀಘ್ರ ಇತ್ತ ಗಮನ ಹರಿಸಿ ರೈಲು ನಿಲುಗಡೆಯನ್ನು ನೀಡದೆ ಹೋದರೆ ಪುನಹ ನಾಗರಿಕರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂಬುದು ಸ್ಥಳೀಯರ ಆಕ್ರೋಶ ಆಗಿದೆ.
previous post
next post