ಹಾಸನದಿಂದ ಸಕಲೇಶಪುರವರೆಗಿನ ರಾಷ್ಟ್ರೀಯ ಹೆದ್ದಾರಿ ಸದಾ ಸುದ್ದಿ ಆಗುತ್ತಲೇ ಇರುತ್ತದೆ.
ಆಲೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬೈರಾಪುರ ಬಳಿ ನಿರ್ಮಿಸಲಾಗಿರುವ ಟೋಲ್ ಗೇಟ್ ನಲ್ಲಿ ದಿನಾಂಕ 16 -12- 24 ರ ಸೋಮವಾರದಿಂದ ವಸೂಲಾತಿಗೆ ನಿರ್ಧರಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳ ಕ್ರಮದ ಬಗ್ಗೆ ಸಂಘಟನೆಗಳು ಆಕ್ರೋಶಗೊಂಡಿವೆ.
ಇದರ ವಿರುದ್ಧ ಕರವೇ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಬಳಗದ ಸದಸ್ಯರುಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು ಒಂಬತ್ತು ಗಂಟೆಗೆ ಸರಿಯಾಗಿ ಆಲೂರಿಗೆ ಆಗಮಿಸಿ ಪ್ರತಿಭಟನೆಯನ್ನು ಮಾಡಲಿದ್ದಾರೆ ಎಂದು ಸತೀಶ್ ಪಟೇಲ್ ಜಿಲ್ಲಾಧ್ಯಕ್ಷರು ಕರವೇ ಹಾಸನರವರು ತಿಳಿಸಿದ್ದಾರೆ.
previous post