ಸಕಲೇಶಪುರ :ತಾಲೂಕಿನ ನಡಳ್ಳಿ ಗುರುಜಿನಹಳ್ಳಿ ಗ್ರಾಮ ದಲ್ಲಿ ತಡ ರಾತ್ರಿ ಸುಮಾರು 6ರಿಂದ 7 ಗಂಟೆಗೆ ಕಾಡಾನೆಗಳು ಹಿಂಡು ಹಿಂಡಾಗಿ ಎಚ್.ಎಸ್. ಮಹೇಶ್, ದೇವರಾಜ್ ಹಾಗೂ ಬಸವರಾಜು ಅವರ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿ, ಕಾಫಿ ತೋಟಕ್ಕೆ ಅಳವಡಿಸಿದ್ದ ಸ್ಪಿಂಕ್ಲರ್ ಪೈಪ್ಗಳನ್ನು ಹಾಗೂ ಕಾಫಿ ಗಿಡಗಳನ್ನು ತುಳಿದು ದಾಂದಲೆ ನಡೆಸಿವೆ
ಸುಮಾರು 12ರಿಂದ 16ಆನೆಗಳು ಈ ಭಾಗಕ್ಕೆ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ತೋಟಕ್ಕೆ ಕೂಲಿಕಾರ್ಮಿಕರು ಕೆಲಸಕ್ಕೆ ಹೋಗಲು ಹೆದರುತ್ತಿದ್ದಾರೆ. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಬಂದು ಆನೆಗಳನ್ನು ಸ್ಥಳಾಂತರಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.