ವರದಿ ರಾಣಿ ಪ್ರಸನ್ನ
ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಬೆಕ್ಕನಹಳ್ಳಿಯಲ್ಲಿ ರೈತರ ಮೇಲೆ ಯಸಳೂ ರು ಅರಣ್ಯ ಇಲಾಖೆಯವರು ದೌರ್ಜನ್ಯ ಮಾಡಿದ್ದಾರೆ
102 ರ ಗೋಮಾಳ ಜಾಗದಲ್ಲಿ *ಅರಣ್ಯವೆಂದು* ಒಟ್ಟು 15 ರೈತರ ಫಸಲಿಗೆ ಬಂದ ಕಾಫಿ ಗಿಡಗಳನ್ನು ಕತ್ತರಿಸಿ ಯಸಳೂರು ಅರಣ್ಯ ಇಲಾಖೆಯವರು ತಮ್ಮ ಉದ್ಧಟತನ ತೋರಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ಗ್ರಾಮಸ್ಥರು ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಅಧಿಕಾರಿಗಳ ತಲೆದಂಡ ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಇಂದು ಹಾಗೂ ನಾಳೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಈ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೂ ಸಹ ತಂದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
previous post
next post