ಹ್ಯೂಮನ್ ರೈಟ್ಸ್ ಡಿಫೆಂನ್ಸ್ ಆರ್ಗಾನೈಸೇಷನ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವಂತೆ ಪಟಾಕಿ ಮಾರಾಟ ಮಾಡಲು ಬದಲಿ ವ್ಯವಸ್ಥೆ ಕಲ್ಪಿಸಲು ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ಧಾರ್ಮಿಕ ಕಾರ್ಯನಿಮಿತ ದೀಪಾವಳಿ ಹಬ್ಬದ ದಿನದಂದು ಪಟಾಕಿ ಸುಡುವ ಮೂಲಕ ಹಬ್ಬವನ್ನು ಆಚರಣೆ ಮಾಡುವ ಪದ್ಧತಿಯಿದ್ದು ಸರ್ಕಾರವು ಸಾರ್ವಜನಿಕರಿಗೆ ಪಟಾಕಿಯನ್ನು ಖರೀದಿಸಲು ಸ್ಥಳ ನಿಗದಿಪಡಿಸುವ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತಹ ಸ್ಥಳವನ್ನು ಗುರುತಿಸಬೇಕಾಗಿರುತ್ತದೆ.
ಸರಕಾರದ ನಿಯಮದ ಪ್ರಕಾರ ಸಿಡಿಮದ್ದುಗಳ ಮಾರಾಟ ಮಾಡಲು ಯಾವುದೇ ಜನ ನಿಬಿಡ ಪ್ರದೇಶದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಟಾಕಿ ಮಾಡುವ ನಿಯಮ ಇಲ್ಲದಿದ್ದರೂ ಸಹ ಸಕಲೇಶಪುರದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆಯ ಪಕ್ಕದಲ್ಲಿ ಪಟಾಕಿಯನ್ನು ಮಾರಾಟ ಮಾಡಲು ಸ್ಥಳವನ್ನು ನಿಗದಿಪಡಿಸಿರುವುದು ಜನ ಆಕ್ರೋಶಕ್ಕೆ ಕಾರಣವಾಗಿರುತ್ತದೆ.
ಸಕಲೇಶಪುರ ದಲ್ಲಿ ಪಟಾಕಿ ಮಾರಾಟಕೆ ಅವಕಾಶ ಕಲ್ಪಿಸಿ ಕೊಟ್ಟಿರುವ ಸ್ಥಳವು ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಹೊಂದಿಕೊಂಡ ಸಾರ್ವಜನಿಕರು ತಿರುಗಾಡುವ ಪ್ರದೇಶಕ್ಕೆ ಹೊಂದಿಕೊಂಡು ಪಾದ ಚಾರಿ ಧಾರಿಯಾಗಿರುತ್ತದೆ ಹಾಗೂ ಪಟಾಕಿ ಮಾರಾಟಕ್ಕೆ ಕೊಟ್ಟಿರುವ ಸ್ಥಳವು 100 ಮೀಟರ್ ಒಳಗೆ ವಾಸವಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಾಸವಿ ಪ್ರೌಢಶಾಲೆ ಇರುತ್ತದೆ ಇದರಿಂದ ಸಾರ್ವಜನಿಕವಾಗಿ ತೊಂದರೆ ಉಂಟಾಗುತ್ತಾ ಇರುತ್ತದೆ.
ಒಂದು ವೇಳೆ ಈ ಪಟಾಕಿ ಮಾರಾಟದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾಹುತವಾದರೆ ತಾಲೂಕು ಆಡಳಿತವೇ ಸಂಪೂರ್ಣ ಹೊಣೆ ಹೊರಬೇಕಾಗಿರುತ್ತದೆ ಎಂದು ಉಪವಿಭಾಗ ಅಧಿಕಾರಿ ಹಾಗೂ ಡಿವೈಎಸ್ಪಿ ಯವರ ಕಚೇರಿಗೆ ಮನವಿಯನ್ನು ಸಲ್ಲಿಸಿ ಈ ಕೂಡಲೇ ಪಟಾಕಿಯನ್ನು ಮಾರಾಟ ಮಾಡುತ್ತಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ಬದಲಿ ಸೂಕ್ತ ಸ್ಥಳವನ್ನು ನಿಗದಿ ಪಡಿಸಿ ಕೊಡುವಂತೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲಾಧ್ಯಕ್ಷರಾದ ಜೀವನ್ ಗೌಡ ತಾಲೋಕು ಅಧ್ಯಕ್ಷರಾದ ವಿಜಯ್ ಕುಮಾರ್ ತಾಲೋಕು ಉಪಾಧ್ಯಕ್ಷರಾದ ಪ್ರದೀಪ್ ಮಾವಿನಹಳ್ಳಿ ಹಾಗು ಪದಾಧಿಕಾರಿಗಳಾದ ಮಹೇಶ್ ಬಾಲರಾಜ್ ಸ್ಮಿಥನ್ ಮಂಜು ಪ್ರದೀಪ್ ಹಾಗು ಮುಂತಾದವರು ಇದ್ದರು