ಪ್ರತಿ ವಾರಾಂತ್ಯದಲ್ಲಿ ಮಂಜರಾಬಾದ್ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರು ದೋಣಿಗಾಲ್ ಸರ್ಕಲ್ನಲ್ಲಿ ಹಾಗೂ ಪಕ್ಕದಲ್ಲೇ ಇರುವ ರಾಜ್ಯ ಹೆದ್ದಾರಿ(ಹೆತ್ತೂರು ರಸ್ತೆ)ಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿದ್ದು,ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ದಿನ ನಿತ್ಯ ಓಡಾಡುವ ಶಾಲಾ ಮಕ್ಕಳು,ಗರ್ಭಿಣಿ ಸ್ತ್ರೀಯರು,ಹಾಗೂ ಸ್ಥಳೀಯ ನಿವಾಸಿಗಳಿಗೆ ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲ ಬೇಕಾದ ಪರಿಸ್ಥಿತಿ ಉಂಟಾಗಿ ಚಿತ್ರ ಹಿಂಸೆ ಅನುಭವಿಸುವಂತಾಗಿದೆ.
ಪ್ರತಿಭಟನೆ….
ಹಾಗಾಗಿ ಈ ಸಮಸ್ಯೆಗೆ ಪರಿಹಾರ ಸಿಗುವ ತನಕ ಮಂಜರಾಬಾದ್ ಕೋಟೆಯನ್ನೇ ಬಂದ್ ಮಾಡಿ…ಇಲ್ಲವೇ ಹೆತ್ತೂರು ರಸ್ತೆಯಲ್ಲಿ ವಾಹನ ನಿಲ್ಲಿಸದಂತೆ ಕ್ರಮ ಕೈಗೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಜನಸ್ನೇಹಿ ಅಧಿಕಾರಿಗಳಾಗಿ ಎಂಬ ಮನವಿಯನ್ನು ಕೊಡಲು 19-10-24 ರಂದು ದೋಣಿಗಾಲ್ ಸರ್ಕಲ್ನಲ್ಲಿ ಬೆಳಗ್ಗೆ 11:30 ಕ್ಕೆ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿದೆ .
ಆನೆಮಹಲ್ ಹಾಗೂ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ನಿವಾಸಿಗಳು ಹಾಗೂ ಕೆಲವು ಸಂಘಟನೆಗಳು ಈ ಪ್ರತಿಭಟನೆಗೆ ಸಹಕಾರ ನೀಡುತ್ತಿದ್ದಾರೆ.ಅದೇರೀತಿ ಈ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ವಿಫಲವಾದರೆ ಮುಂದಿನ ದಿನದಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ಮಂಜುದೇವ್ ಹುಲ್ಲಹಳ್ಳಿ ಮಲೆನಾಡು ರಕ್ಷಣಾ ಸೇನೆ ನಿಯೋಜಿತ ಜಿಲ್ಲಾ ಕಾರ್ಯದರ್ಶಿ, ಪ್ರತಾಪ್ ಹುಲ್ಲಹಳ್ಳಿ ಕ್ಯಾನಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರು ತಿಳಿಸಿದ್ದಾರೆ.