ಹ್ಯೂಮನ್ ರೈಟ್ಸ್ ಡಿಫೆನ್ಸ್ ಆರ್ಗನೈಸೇಷನ್ ವತಿಯಿಂದ ಶಾಲಾ ಕಾಲೇಜು ಬಾಲಕಿಯರಿಗೆ ಹಾಗೂ ಮಹಿಳೆಯರಿಗೆ ಪುಂಡ ಪೋಕರಿಗಳಿಂದ ಆಗುತ್ತಿರುವ ಕಿರುಕುಳವನ್ನು ತಡೆಗಟ್ಟಬೇಕೆಂದು ನಗರ ಠಾಣೆಯ ಆರಕ್ಷಕ ನಿರೀಕ್ಷಕರಿಗೆ
ಮನವಿಯನ್ನು ನೀಡಲಾಯಿತು.
ಜಿಲ್ಲೆಯಲ್ಲಿ ಮಹಿಳಾ ಜಿಲ್ಲಾಧಿಕಾರಿಗಳು, ಮಹಿಳಾ ಪೊಲೀಸ್ ವರಿಷ್ಟಾಧಿಕಾರಿಗಳು ಇದ್ದು ತಾಲೂಕಿನಲ್ಲಿ ಮಹಿಳಾ ಉಪವಿಭಾಗಧಿಕಾರಿಗಳು ಹಾಗೂ ಮಹಿಳಾ ದಂಡಾಧಿಕಾರಿಗಳು ಇದ್ದರೂ ಪುಂಡ ಪೋಕರಿಗಳಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ದುರದೃಷ್ಟ.
ಆದುದರಿಂದ ಈ ಪುಂಡ ಪೋಕರಿಗಳಿಗೆ ಕಡಿವಾಣ ಹಾಕುವ ಮೂಲಕ ತಾಲೂಕಿನಲ್ಲಿ ಉತ್ತಮ ವಾತಾವರಣ ನಿರ್ಮಿಸುವಂತೆ ಇಲ್ಲದಿದ್ದರೆ ಮುಂದೆ ಆಗುವ ಸಮಸ್ಯೆಗಳಿಗೆ ನೀವೇ ನೇರ ಹೊಣೆಗಾರರು ಎನ್ನುವ ಮನವಿಯನ್ನು ನೀಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದಂತಹ ಜೀವನ್ ಗೌಡ ತಾಲೂಕು ಅಧ್ಯಕ್ಷರಾದಂತಹ ವಿಜಯ್ ಕುಮಾರ್ ಉಪಾಧ್ಯಕ್ಷರಾದಂಥಹ ಪ್ರದೀಪ್ ಹಾಗೂ ಪದಾಧಿಕಾರಿಗಳು ಇದ್ದರು