ಸಕಲೇಶಪುರದ ಸೇತುವೆ ಬಳಿ ಅಕ್ರಮವಾಗಿ ಅಳವಡಿಸಲಾಗಿದ್ದ ಬೋರ್ಡ್ ನ್ನು ತೆರವು ಮಾಡಲಾಯಿತು.
ಸಕಲೇಶಪುರದ ಹೆಬ್ಬಾಗಿಲಾಗಿರುವ ಸಕಲೇಶಪುರದ ಸೇತುವೆ ಬಳಿ ಅಕ್ರಮವಾಗಿ ಖಾಸಗಿ ವ್ಯಕ್ತಿಯೋರ್ವರು ತನ್ನ ಉದ್ಯಮಕ್ಕಾಗಿ ಹಾಕಿಕೊಂಡಿದ್ದ ನಾಮಫಲಕವನ್ನು ತೆರವುಗೊಳಿಸುವಂತೆ ವಿಭಿನ್ನ ರೀತಿಯ ಹೋರಾಟವನ್ನು ಮಲೆನಾಡು ರಕ್ಷಣಾ ಸೇನೆ ಮಾಡಿತ್ತು.
ನಂತರ ಧರಣಿಯನ್ನು ಮಾಡುವುದಾಗಿಯೂ ಸಹ ಎಚ್ಚರಿಕೆಯನ್ನು ನೀಡಲಾಗಿತ್ತು ಇದನ್ನೆಲ್ಲ ಮನಗಂಡ ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇಂದು ಅನಧಿಕೃತವಾಗಿ ನಡು ರಸ್ತೆಯಲ್ಲಿ ಖಾಸಗಿ ವ್ಯಕ್ತಿ ಹಾಕಿಕೊಂಡಿದ್ದ ನಾಮಫಲಕವನ್ನು ತೆರವುಗೊಳಿಸಿದೆ.
ಈ ನಾಮ ಫಲಕ ತೆರವು ಮಾಡುವಂತೆ ಮಲೆನಾಡು ರಕ್ಷಣಾ ಸೇನೆ 1 ರೂ ನಲ್ಲಿ ಟೀ ಮಾರುವ ಮೂಲಕ ಹಾಗೂ ಹಲವಾರು ಬಾರಿ ಹೋರಾಟವನ್ನು ಕೂಡ ಮಾಡಿತ್ತು
ಇದು ಮಲೆನಾಡು ರಕ್ಷಣಾ ಸೇನೆಯ ಹೋರಾಟಕ್ಕೆ ಸಿಕ್ಕ ಜಯ ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರು ಡಾ.ಸಾಗರ್ ಜಾನೆಕೆರೆ ತಿಳಿಸಿದ್ದಾರೆ ಬೋರ್ಡ್ ಅನ್ನು ತೆರವುಗೊಳಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಾಗೂ ಮಲೆನಾಡು ರಕ್ಷಣಾ ಸೇನೆಯ ಕಾರ್ಯಕರ್ತರಿಗೂ ತಾಲೂಕು ಅಧ್ಯಕ್ಷರಿಗೂ ಹಾಗೂ ಕನ್ನಡಪರ ಹೋರಾಟಗಾರರಿಗೂ ಈ ಮೂಲಕ ಧನ್ಯವಾದಗಳು ತಿಳಿಸಿದ್ದಾರೆ