ವರದಿ ರಾಣಿ ಪ್ರಸನ್ನ
ಸಕಲೇಶಪುರದ ಬಾಗೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಹಲವು ಸಮಸ್ಯೆಗಳ ಕುರಿತು ಪೋನ್ ಕರೆಯಲ್ಲಿ ಎಷ್ಟು ಬಾರಿ ಹೇಳಿದರು ಆಲಿಸದ ಹೆದ್ದಾರಿ ಪ್ರಾಧಿಕಾರ . ಗ್ರಾಮ ಪಂಚಾಯತ್ ವತಿಯಿಂದ ಪತ್ರದ ಮುಖೇನ ಅರ್ಜಿ ಹಾಗೆಯೇ ಗ್ರಾಮ ಸಭೆಗೆ ಬಂದು ಜನರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡಲೇ ಬೇಕೆಂದು ಅಭಿವೃದ್ದಿ ಅಧಿಕಾರಿ ಚಿನ್ನಸ್ವಾಮಿ, ಅಧ್ಯಕ್ಷರಾದ ರೇಖಾ ಗೋಪಿನಾಥ್ , ಸದಸ್ಯರಾದ ಚಾರ್ಲ್ಸ್ ಇವರಿಂದ ಮನವಿ ಪತ್ರ.
ಬಾಗೆ ಗ್ರಾ.ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಬಾಕ್ಸ್ ಚರಂಡಿ, ಹೈಮಾಸ್ಟ್ ಬೀದಿ ದೀಪ, ಬಸ್ ಸ್ಟ್ಯಾಂಡ್. ಹೈಟೆಕ್ ಶೌಚಾಲಯ, ಡಿವೈಡರ್ ನಿರ್ಮಾಣ ನಾಮಫಲಕ, ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದ್ದು , ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಯೋಜನಾ ನಿರ್ದೇಶಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವರಿಗೆ ನೀಡಲಾಯಿತು.
ಲೆಕ್ಕವಿಲ್ಲದಷ್ಟು ಸರಣಿ ಅಪಘಾತಗಳು ಸಂಭವಿಸುತ್ತಿದ್ದು ಇದೆಲ್ಲದರ ಕುರಿತು ಸಾರ್ವಜನಿಕರು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದು ಇದನ್ನು ಅರಿತ ಗ್ರಾಮ ಪಂಚಾಯತಿ ಸದಸ್ಯರು , ಅಭಿವೃದ್ದಿ ಅಧಿಕಾರಿಗಳು ಎಲ್ಲರೂ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತೀರ ಖಾರವಾಗಿಯೇ ಅರ್ಜಿ ಸಲ್ಲಿಸಿದ್ದಾರೆ
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕು, ಬಾಗೆ ಗ್ರಾಮಪಂಚಾಯಿತಿ
ವ್ಯಾಪ್ತಿಯ ಗ್ರಾಮಗಳಾದ ಯಡೇಹಳ್ಳಿ, ಕುಂಬಾರಗಟ್ಟೆ ಅರಸುನಗರ, ರಾಮನಗರ, ಬಾಗೆ, ಅಲುವಳ್ಳಿ, ಗುಲಗಳಲ್ಲಿ
ರಾಟಿಮನೆ ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದ್ದು ಗ್ರಾಮಗಳಿಗೆ ರಸ್ತೆ ಸಂಪರ್ಕವಿಲ್ಲದೆ, ಬಾಕ್ಸ್ ಚರಂಡಿ ಮತ್ತು ಡಕ್ ನಿರ್ಮಾಣ, ರಾತ್ರಿ ವೇಳೆ ಸಾರ್ವಜನಿಕರು ಸಂಚರಿಸಲು ಮತ್ತು ರಸ್ತೆಯನ್ನು ಪಾದಾಚಾರಿಗಳು ದಾಟಲು
ಬೆಳಕಿನ ಸಮಸ್ಯೆ ಇರುವುದರಿಂದ ಎಲ್ಲಾ ಗ್ರಾಮಗಳಿಗೂ ನಾಮಫಲಕ ಮತ್ತು ಹೈಮಾಸ್ಟ್ ಅಳವಡಿಸಿ ಗುಲಗಳಲೆ ಗ್ರಾಮದ
ಪ್ರವೇಶದಲ್ಲಿ ಡಿವೈಡರ್ ಅಳವಡಿಕೆ ಹಾಗೂ ಬಾಗೆ ಗ್ರಾಮದಲ್ಲಿ ಬಸ್ ಸ್ಟ್ಯಾಂಡ್ ಮತ್ತು ಸಾರ್ವಜನಿಕ ಶೌಚಾಲಯ ಇಲ್ಲದೇ
ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದ್ದು ಹೈಟೆಕ್ ಶೌಚಾಲಯ ನಿರ್ಮಾಣ ಮತ್ತು ಬಾಗೆ, ಗುಲಗಳಲೆ ಗ್ರಾಮದಲ್ಲಿ ಉಳಿಕೆ ರಸ್ತೆ ಕಾಮಗಾರಿ ಮಾಡಿಕೊಡಬೇಕಾಗಿ ಸಾರ್ವಜನಿಕರು ಗ್ರಾಮಪಂಚಾಯಿತಿಗೆ ಮನವಿ ಸಲ್ಲಿಸಿದ್ದು, ಈ ಮೇಲ್ಕಂಡ
ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿ ಈ ಮೂಲಕ ಕೋರಿದೆ. ಈ ಕೂಡ ಸಾರ್ವಜನಿಕರ ಅರ್ಜಿ ಪ್ರತಿಯನ್ನು ಅಡಕವಿರಿಸಿ ಮುಂದಿನ ಕ್ರಮಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ
previous post
next post