ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ.
ಯಾಕಾಗಿ ಸಂಭ್ರಮ ?ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಸವಿ ನೆನಪಿಗಾಗಿ ಕರ್ನಾಟಕ ರಾಜ್ಯದಾದ್ಯಂತ ಕರ್ನಾಟಕ ಸಂಭ್ರಮ 50
ಕನ್ನಡ ಜ್ಯೋತಿ ರಥಯಾತ್ರೆ ಆಲೂರು, ಆಲೂರಿನಿಂದ ಸಕಲೇಶಪುರಕ್ಕೆ ಸಿಗುವ ಗ್ರಾಮ ಪಂಚಾಯಿತಿ ಆಲೂರು, ಬೈರಾಪುರ, ಪಾಳ್ಯ , ಬಾಳು ಪೇಟೆ , ಬಾಗೆ , ಗಾರದುದ್ದಕ್ಕು ಸಂಚರಿಸಿ ಸಂಭ್ರಮ ಆಚರಿಸುತ್ತಿದ್ದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಕಲೇಶಪುರ ಪಟ್ಟಣಕ್ಕೆ ಅದ್ದೂರಿ ಯಾಗಿ,ಸಂಭ್ರಮದಿಂದ ತಾಲೂಕು ಪಂಚಾಯಿತಿ, ನಾಡ ಕಛೇರಿ, ಗ್ರಾಮ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಸಕಲೇಶ್ವರ ದೇವಸ್ಥಾನದಿಂದ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮುಖ್ಯ ರಸ್ತೆಯಲ್ಲಿ ನೂರಾರು ಮಹಿಳೆಯರು ಕಳಸಾಹೊತ್ತು ವಾದ್ಯಗೋಷ್ಠಿಗಳೊಂದಿಗೆ ದಾರಿ ಉದ್ದಗಲಕ್ಕೂ ವಿದ್ಯಾರ್ಥಿಗಳು ಕನ್ನಡ ಮಾತೆಗೆ ಜೈಕಾರ ಹಾಕುತ್ತಾ ಪುರಸಭೆಯವರೆಗೆ ಮೆರವಣಿಗೆ ಬಂದರು.
ನಂತರ ಸಭಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕಾರ್ಯಕ್ರಮ ವನ್ನು ಉದ್ದೇಶಿಸಿ ತಾಲೂಕು ಉಪ ವಿಭಾಗಾಧಿಕಾರಿ ಡಾಕ್ಟರ್ ಶೃತಿ ಮಾತನಾಡಿ, 1973ರ ನಂತರ ಮೈಸೂರು ರಾಜ್ಯ ಎಂಬುದು ಮರು ನಾಮಕರಣಗೊಂಡು ಕರ್ನಾಟಕ ಎಂಬ ಹೆಸರು ಬಂದಿದೆ. ಇದರ ಸವಿನೆನಪಿಗಾಗಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮವನ್ನು ನಾವು ಆಚರಿಸುತ್ತಿದ್ದೇವೆ.ಈ ಕನ್ನಡ ಜ್ಯೋತಿರಥವು ಪ್ರತಿ ಹಳ್ಳಿಗಳಿಗೂ ಹೋಗಿ ಕನ್ನಡ ಪ್ರೇಮವನ್ನು ಮತ್ತಷ್ಟು ಬಿತ್ತುವ ಕೆಲಸವನ್ನು ಮಾಡಲೀ ಎಂದು ಹೇಳಿದರು. ನಾವು ನಮ್ಮ ಕನ್ನಡ ಭಾಷೆಯನ್ನು ಉಳಿಸಬೇಕಾದರೆ ಈ ತರದ ಕಾರ್ಯಕ್ರಮವನ್ನು ಅತಿ ಹೆಚ್ಚಿನದಾಗಿ ಮಾಡಬೇಕು.
ತಾಲೂಕು ದಂಡಾಧಿಕಾರಿ ಮೇಘನಾ ರವರು ಮಾತನಾಡಿ, ಕನ್ನಡ – ಎಂಬುವುದು ಕೇವಲ ಭಾಷೆಯಲ್ಲ ಅದು ನಮ್ಮ ಭಾವನೆ. ಕನ್ನಡವನ್ನು ಉಳಿಸಿ ಬೆಳೆಸುವಂತ ಕೆಲಸ ಆಗಬೇಕು. ಎಂದರು
ಪುರಸಭೆಯ ಅಧ್ಯಕ್ಷರಾದ ಜ್ಯೋತಿ ರಾಜಕುಮಾರ್ ಮಾತನಾಡಿ ” ನವೆಂಬರ್ ತಿಂಗಳು ಬಂತೆಂದರೆ ಕನ್ನಡದ ಸಂಭ್ರಮ ರಾಜ್ಯದಾದ್ಯಂತ – ಮೊಳಗುತ್ತದೆ. ಇದು ವರ್ಷದ ಪ್ರತಿ ತಿಂಗಳಿನಲ್ಲೂ ಮೊಳಗಬೇಕು.ಬರೀ ಹೋರಾಟದಿಂದ ಕನ್ನಡದ ರಕ್ಷಣೆ ಆಗಬೇಕಾಗಿಲ್ಲ. ಕನ್ನಡ ಎಂಬುದು ನಮ್ಮ ಹಕ್ಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಂತೋಷ್ ಹೆಗಡೆ ಕನ್ನಡ ಭಾಷೆ ಬಗ್ಗೆ ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡಿಗರು ತಮ್ಮ ನಾಡು ನುಡಿ ಭಾಷೆಯನ್ನು ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕಾರ್ಯಕ್ರಮವನ್ನು ಅತಿ ಹೆಚ್ಚಿನದಾಗಿ ಮಾಡಬೇಕು.
ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಧಿಕಾರಿ ಗಂಗಾಧರನ್, ಡಿವೈಎಸ್ಪಿ ಪ್ರಮೋದ್ ಕುಮಾರ್, ತಾಲ್ಲೂಕು ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷರಾದ ರಮೇಶ್ ಪೂಜಾರಿ, ಪುರಸಭೆ ಉಪಾಧ್ಯಕ್ಷರಾದ ಜಾರಿನ, ಸದಸ್ಯರುಗಳಾದ ಕಾಡಪ್ಪ ಹಾಗೂ ರಮೇಶ್, ತಾಲ್ಲೂಕು ಕಛೇರಿ ಸಿಬ್ಬಂದಿ, ಸೇರಿದಂತೆ ಕನ್ನಡ ಪರ ಹೋರಾಟಗಾರರು ನೆರೆದಿದ್ದರು.
previous post
next post